ಪತಿತ ಪಾವನ ನೀನೆ ಗತಿಯೆನಗೆ ಕೇಳು
ಅತಿ ನೀಚ ತರತಮನಾದವಗೆ ಪ.
ಸಾರಥಿ ಸ್ಥಿರವಲ್ಲವು
ದುರುಳ ದಶೇಂದ್ರಿಯಾಶ್ವಗಳಿರವು
ಹುರುಳಿಲ್ಲದಂತೆ ದುರ್ವಿಷಯಾಂಧಕೂಪಕೆ
ಸರಿದು ಪೋಗುತಲೆನ್ನ ಕೆಡಹುವವು 1
ಅನ್ಯರಿಗುಸುರೆ ಲಜ್ಜಾಕರದ
ಅನ್ಯಾಯ ಕೃತ್ಯದಿಂದಲಿ ನೆರೆದ
ಮುನ್ನಿನ ನರಕಯಾತನೆಗಳ ತರಿವದ
ನಿನ್ನ ಚರಣಕೊಪ್ಪಿಸಿದೆ ವರದ 2
ದಾಸದಾಸ್ಯವನೆಲ್ಲ ದಯಮಾಡು ಪ-
ರೇಶ ಪರಾತ್ಪರ ಮೂರುತಿಯೆ
ಲೇಶಾಯಾಸವಿಲ್ಲದೆ ಸಲಹುವ ಜಗ-
ದೀಶ ಶೇಷಾಚಲವಾಸಿ ಹರೇ 3