ಹರಿ ಹರಿ ಹರಿ ಹರಿ ಹರಿ
ಪರಿಹರ ಸಂಸಾರ ಕಿರಿ ಕಿರಿ ಪ
ಪರಿ ಪರಿ ನಿಜ
ಸ್ಮರಿಪದಾಸರಿಗಾರು ಸರಿ ಸರಿಅ.ಪ
ಹರಿಯೆಂದು ಹೊಗಲು ಉರಿ ಉರಿ
ಪರಮ ಶೀತಲದೆಂದರಿ
ಹರಿ ಹರಿಯೆಂದು ವಿಷವನ್ನು ಸುರಿ ಸುರಿ
ಮರಣವಿಲ್ಲರಿದು ನೀ ಮೆರಿ ಮೆರಿ
ಹರಿಧ್ಯಾನಧಿಕವೆಂದು ಸಾರಿ ಸಾರಿ ನಿತ್ಯ
ಹರಿಸರ್ವೋತ್ತಮನೆಂದು ಬರಿ ಬರಿ 1
ಉಪಟಳ ತಾಳಿ ತಾಳಿ
ಹರಿಯೆಂದು ಕೂಗಿ ಆಗ ತಿಳಿತಿಳಿ
ಹರಿಧ್ಯಾನ ಸವಿಸವಿದು ನಲಿನಲಿ
ಹರಿಭಜನಾನಂದ ಕಲಿಕಲಿ ಅದೆ
ಮರಣ ಗೆಲಿಯುವ ನಿಜ ಕೀಲಿ ಕೀಲಿ 2
ತರಿಯೋ ಮನದ ದುರ್ಭೇದ ಭೇದ
ಭವ ಬಾಧೆ ಬಾಧೆ
ಹರಿನಾಮಕೀರ್ತನೆ ಸದಾಸದಾ
ಕರತಲಸ್ಥಿರ ಮುಕ್ತಿಪದ ಪದ
ಪಾದ ಪಾದ 3