ಸಾವಧಾನಾಗಿ ಮಾಡೆಲೋ ಗುರುಭಕ್ತಿ |
ಕಾವಕರುಣಾಳುದೋರಿ ನಿಜ ಮುಕ್ತಿ ಪ
ಗುರುನಾಮ ಸ್ಮರಣೆ ಅನುದಿನಾ |
ಗುರುಮೂರ್ತಿಯ ಮಾಡಿ ನಿಜಧ್ಯಾನಾ |
ಗುರುಚರಣವ ಪೂಜಿಸು ನಿಧಾನಾ |
ಗುರು ನಮನದಿ ಹಾಕಿ ಲೋಟಾಂಗಣಾ 1
ಗುರುಭಕ್ತರ ಸಂಗವನು ಮಾಡಿ |
ಗುರು ಕರುಣದ ಮಹಿಮೆಯ ಪಾಡಿ |
ಗುರುವಾಕ್ಯ ಪ್ರಸಾದವನು ಬೇಡಿ |
ಗುರು ಅಭಯವ ಕೊಂಡು ನಲಿದಾಡಿ 2
ಗುರುವಿನಲ್ಲಿ ಹಿಡಿಯದೆ ನರಭಾವಾ |
ಗುರುವಿಗರ್ಪಿಸಿ ತನುಧನ ಮನ ಜೀವಾ |
ಭವ ಬಂಧನವಾ |
ಗುರುಮಹಿಪತಿ ಬಾಲನಾಗಿರುವಾ 3