ಕಾಲನೇಮಿ ಕಾಡುತಿರುವನೊ | ಕೇಳೊ ಶೌರಿಕಾಲನೇಮಿ ಕಾಡುತಿರುವನೊ ಪ
ಕಾಲನೇಮಿ ಕಾಡುತಿಹನು | ಶೀಲಗೆಡಿಸಿ ಮನದ ಚರ್ಯತಾಳಲಾರೆ ಅವನ ಬಾಧೆ | ಕೊಲ್ಲು ಬೇಗ ಅವನ ಹರಿಯೇ ಅ.ಪ.
ಸ್ನಾನಗೈದು ನಿನ್ನ ಪೂಜೆಯ | ಧ್ಯಾನವು ಆವಾಹನಾದಿಯಏನು ನೋಡಿದೆ ತ್ವರ್ಯ ಬರುವ | ಧೀನಪಾಲ ಕಾಯೊ - ನೀನೆ 1
ದೈತ್ಯ ಪರಿವಾರದೊಡನೆಯ |ಕೃತ್ಯ ಮನದಿ ಚರಿಸಿ ಪೋಪನುದೈತ್ಯ ಹರನೆ ಹಯವದನ | ಸತ್ಯ ಮಾಡೊ ನಿನ್ನ ವಚನ 2
ಮುರುಳಿ ಧರನೆ ಮಾನಸಾಂಡದ | ಧೊರೆಯೆ ನೀನು ದೂರ ನೋಳ್ಪುದೆಗುರು ಗೋವಿಂದ ವಿಠಲ ನಿನ್ನ | ಚರಣ ದಡಿಗೆ ಸೇರಿಸೆನ್ನ 3