ಒಟ್ಟು 1173 ಕಡೆಗಳಲ್ಲಿ , 100 ದಾಸರು , 986 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಡುತ ಹೋಗುತಾದೋ ಹೊತ್ತು ನೀನು ನೋಡೇನೆಂದರೆ ಆಗದು ಮತ್ತು ಪ ಬೇಡಲು ಬಿಡದೆಲೊ ಹೆಡತಲೆಮೃತ್ಯು ಹುಡುಕಾಡಿ ಪಡಕೋ ನೀ ಕೆಡದ ಸಂಪತ್ತು ಅ.ಪ ಗಜಿಬಿಜಿಸಂಸಾರ ಸೂಡಿಗೆ ನೀನು ಗಿಜಿಗಿಜ್ಯಾಗದೆ ನಿಲ್ಲು ಕಡೆಗೆ ಸುಜನರಿಗೊಂದಿಸಿ ಭುಜಗಾದ್ರಿಶಯನನ ನಿಜಪದ ಮಜದಿಂದ ಭಜಿಸಿಕೋ ತುರ್ತು 1 ಕಾಳನಾಳಿನ ದಾಳಿಗೆಲಿದು ಸ್ಥಿರ ಬಾಳುವ ನಿಜಪದವರಿದು ನೀಲಶಾಮನ ಲೀಲೆ ಮೇಲೆಂದ್ಹಿಗ್ಗುವ ದಾಸ ರ್ಹೇಳಿಕೆ ಕೇಳಿ ನೀ ಪಾಲಿಸು ತುರ್ತು 2 ನಡೆನುಡಿ ಎರಡೊಂದೆ ಮಾಡೊ ಇನ್ನು ಜಡಮತಿ ಗಡನೆ ಈಡ್ಯಾಡೋ ಪೊಡವಿಗಧಿಕ ನಮ್ಮ ಒಡೆಯ ಶ್ರೀರಾಮನೆಂ ದ್ಹೊಡಿ ಹೊಡಿ ಡಂಗುರ ದೃಢವಾಗಿ ಅರ್ತು3
--------------
ರಾಮದಾಸರು
ಔಷಧದ ಬೇರೊಂದನು ನಾರದನು ತಂದ ಪೋಷಣೆಗೆ ಸಕಲರೂ ಸವಿಯಲೆಂದ ಪ ಜ್ವರಭೇದಗಳಿಗೆಲ್ಲ ನರಹರಿ ಎಂಬ ಬೇರು ಶಿರವೇಧೆ ಎಂಬುದಕೆ ಹರಿಹರಿ ಎಂಬ ಬೇರು ವಾತ ರುಜೆಗಳಿಗೆ ಸಿರಿಲೋಲನೀ ಬೇರು ಪರಿಪರಿಯ ಭವಗಳಿಗೆ ನಾರಾಯಣಾ ಎಂಬ ಬೇರು 1 ಪಿತ್ತರೋಗಂಗಳಿಗೆ ಚಿತ್ತಜನಪಿತನೆಂಬ ಪೃಥ್ವಿಯೊಳಗತ್ಯಧಮ ವಿಭಂದ ರೋಗಗಳಿ ಗರ್ಥಿಯಿಂ ಲೇಪಿಸುವ ಸತ್ವಗುಣನಿಧಿಯೆಂಬ ನಿತ್ಯಶೌರಿಯ ನಾಮ ಶಿವಬೇರು 2 ನಾರದನು ಬೇರೂರೆ ನೀರೆರೆದ ಪ್ರಹ್ಲಾದ ಧೀರಬಲಿ ಬೆಳೆಯಿಸಿದ | ನೀರ ಗಜನೆರೆದ ವೀರದಶಶಿರನನುಜನೆಚ್ಚರದೊಳಿದ ಕಾಯ್ದ ನಾರಿ ದ್ರೌಪದಿ ಶಿರದಿ ಮೊಗ್ಗಾಗಿ ಧರಿಸಿದಂಥ 3 ಅರಳಿದ ಸುಮಗಳನು ಅಕ್ರೂರ ಪೋಷಿಸಿದ ತ್ವರಿತದಿ ಕಾಯ್ಗಳನು ಶುಕದೇವ ಕಾಯ್ದ ನರರೆಲ್ಲರೀ ಫಲವ ದಿನದಿನವು ಮೆಲಲೆಂದು ವರದ ಮಾಂಗಿರಿರಂಗ ಪೇಳುತಿಹನು 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಡೆನಮ್ಮಾ ಕೌತುಕದಾ ಗಾರುಡಿಗನಾ | ಕೊಂಡಾಡಲಳವಲ್ಲ ಹೇಳಲೇ ನಾ ಪ ಬೋಧದನಾಗರ ನೂದುವನಾ 1 ಭಕ್ತರುದ್ದೇಶಕ ಬಂದ ಜವದಿ 2 ಸಕಲ ತೇಜದ ಬಬ್ಬುಳಿಯೋ ರೂಪ ನೆಲಿಯಾ | ಪ್ರಕಟ ತಿಳಿಯದು ನಿಜ ಕಳಿಯನಾ 3 ಅರಿಶಿಕ್ಷಾ ಭಕುತರ ಪಕ್ಷಾವೆಂಬ ನಾನಾ | ಬಿರುದು ಕಟ್ಟಿಹ ಮಹಿಮನಾ 4 ಕಾಳ ಸರ್ಪದ ನಿಜ ಮುಖ ಬಂಧವನ ಮಾಡಿ | ಜಾಳಿಸಿದನು ಭಯ ಈಡ್ಯಾಡಿ 5 ಹಮ್ಮಿನ ಗಾವ ಗುಂಡ ಗಜದಂತ ಶರಣರಿಗೆ | ವಮ್ಮಿಲೆ ಕಲೆಗಳ ದೋರುದೀಗನಾ 6 ತಂದೆ ಮಹಿಪತಿ ಸುತ ಸ್ವಾಂಮಿ ದುರ್ಲಭದಾ | ನಂದವ ತೋರಿದಾ ದಯದಿಂದಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ ಧ್ರುವ ಅಜ ನುಂಗಿತು ಗಜನ ವಾಜಿ ನುಂಗಿತು ಈ ಮೂಜಗವ ಸಂಜೀವ ಸಂಜೀವ 1 ಇಲಿಯು ನುಂಗಿತು ಮೊಲವ ಹಲ್ಲಿ ನುಂಗಿತು ಹಲವು ಕುಲವ ಜಲ ನುಂಗಿತು ಜಲವ ಹುಲಿ ನುಂಗಿತು ಈ ಮಾರ್ಜಲವ 2 ನೊರಜು ನುಂಗಿತು ಗಿರಿ ಪರ್ವತವಇರಹು ನುಂಗಿತು ಸರ್ವ ಬೆರಗಾಯಿತು ಮಹಿಪತಿ ಜೀವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂದನ ತೂಗಿದಳು ಯಶೋದೆ ಕಂದನ ತೂಗಿದಳು ಪ ಇಂದಿರಾರಮಣನ ಅಂದವದನದಲಿ ಮಂದಹಾಸವ ನೋಡಿ ನಂದದಿ ಹಿಗ್ಗುತ ಅ.ಪ ತಾಮರಸಾಕ್ಷನ ಕೋಮಲಾಂಗವ ನೋಡಿ ಆ ಮಹಿಳೆಯು ಬಲು ಪ್ರೇಮಭರಿತಳಾಗಿ 1 ಜಗಜಗಿಸುವ ನವಮಣಿಯ ತೊಟ್ಟಿಲಲಿ ಜಗದೀಶನು ತನ್ನ ಮಗನೆಂದು ತಿಳಿಯುತ 2 ಪದಮನಾಭನನು ಹೃದಯದಿ ನೆನೆಯುತ ಮದದಿಂದಲಿ ದಿವ್ಯ ಪದಗಳ ಪಾಡುತ 3 ಲಕ್ಷ್ಮೀಶನು ಇತ್ತ ಪುತ್ರಭಿಕ್ಷೆಯೆಂದು ಅಕ್ಷಿಗಳಲಿ ಸುಖಬಾಷ್ಪವ ಸುರಿಸುತ 4 ತನ್ನ ಸೌಭಾಗ್ಯವು ಅನ್ಯರಿಗಾವುದೆಂದು ಸತಿ 5
--------------
ವಿದ್ಯಾಪ್ರಸನ್ನತೀರ್ಥರು
ಕನ್ನಡ ಮಂತ್ರ ವಾಸುದೇವ ಲಕ್ಷ್ಮೀಪತಿ ಜಗಜನ್ಮಾದಿ ಕಾರಣ ನಾರಾಯಣ ನರಕಾಂತಕ ನಾರದಪ್ರಿಯ ನರಸಖನಾದ ನಾರಸಿಂಹಮೂರ್ತಿಗೆ ನಮಸ್ಕಾರಗಳು ಗೋಕುಲದರಸು ಯಾದವಶಿರೋಮಣಿಯೆನ್ನ ಬಿನ್ನಪವ ಲಾಲಿಸಿ ಕೇಳಯ್ಯ ಕೃಷ್ಣ ಕಾಮ ಕ್ರೋಧ ಮದ ಮತ್ಸರ ದುರ್ಬುದ್ಧಿ ದುರಾಚಾರ ದುರ್ವಿಷಯಗಳ ಮೋಹ ಲೋಭಗಳ ಮರೆಸಿ ಮುಂದೆ ಬಿರುದಿನಿಂದ ಭಕÀ್ತಜನ ಬಂಧು ನೀ ದಯಾಸಿಂಧು ನಾ ಬೇಡಿಕೊಂಬುವೆನು ಬಂದು ಸಜ್ಜನರಕ್ಷಕ ದುರ್ಜನಶಿಕ್ಷಕ ಅರ್ಜುನ ಸಾರಥಿಯಾದ ನಿತ್ಯ ಮುಕ್ತ ದ್ವಾರಾವತೀ ಮಧ್ವಮುನಿಗೊಲಿದಂಥ ಮೂರ್ಜಗಾಧೀಶ ಉದ್ಧಾರ ಮಾಡಯ್ಯ ಉರಗಾದ್ರಿವಾಸ ಪದ್ಮಾವತೀಕಾಂತ ಶ್ರೀ ವೆಂಕಟೇಶ ಜ್ಞಾನಭಕ್ತಿ ಘನ ವೈರಾಗ್ಯ ಆಯುಷ್ಯ ಆರೋಗ್ಯ ಶ್ರೇಯಸ್ಸು ಸೌಭಾಗ್ಯ ಶ್ರೇಷ್ಠವಾದ ಸಂತಾನ ಸಕÀಲಾಭೀಷ್ಟಗಳ ಕೊಡುವನೆಂದು ನಾ ಬೇಡಿಕೊಂಬುವೆನು ಬಂದು ಎನ್ನಬಾರ ಎನ್ನ ಪರಿವಾರ ನಿನ್ನಗೊಪ್ಪಿಸುವೆನು ಮನ್ಮಥನಪಿತ ಎನಗೆ ಇನ್ನು ಧರ್ಮಾರ್ಥ ಕಾಮಿತ ಫಲಗಳನು ಸನ್ಮಾನದಲಿ ಕೊಟ್ಟು ಮನ್ನಿಸಿ ನೀಡೆನಗೆ ಮಂಗಳವ ಅನುದಿನದಿ ಸುಜ್ಞಾನಿಗಳೊಡೆಯ ಸುರರಿಂದ್ವಂದಿತವಾದ ನಿನ್ನ ಪದ್ಮಪಾದಗಳಿಗೆ ಬಿದ್ದೆ ್ಹೀಳಿಕÉೂಂಬುವೆನು
--------------
ಹರಪನಹಳ್ಳಿಭೀಮವ್ವ
ಕಪಾಲಧರ ತ್ರಯತಾಪರಿಹಾರ ಭ ಜಿಪೆ ಕಾಪಾಡು ಕೃಪೆ ಪಾಲಿಸಿ ಪ ಅಪಾರ ಪತಿವ್ರತಾಶಾಪವಿಮೋಚನ ಗೋಪ ಗೋಪತಿ ನಮಿತ ಗೋಪಾಲನೊಲಿಸೆನಗೆ ಅ.ಪ ಅಗಜಾವಲ್ಲಭ ಸುಗುಣರಘದೂರ ಜಗದೊಡೆಯ ಮಗುವಿನ ಮೊರೆ ಪಾಲಿಸು ವಿನುತ ಅಗಣಿತಾಗಣಿತಮಹಿಮೆ ಬಗೆದೆನ್ನ ನುಡಿಯಾಲಿಸು ನಗಧರ ಖಗರೂಢ ಜಗರಕ್ಷ ಹರಿನಾಮ ಅಗಣಿತ ಮತಿ ನೀಡೊ 1 ಅಜಭವಸುರ ನಮಿತ ರಜತಾದ್ರಿಮಂದಿರ ನಿಜಜ್ಞಾನ ದಯಮಾಡೊ ಮೃಡ ಗಜಚರ್ಮಾಂಬರ ಜಗದ ಗೋಜು ಮುಂದೆನಗೆ ಬೇಡೊ ಸುಜನ ಸಂರಕ್ಷಕ ಪಾದ ನಿಜಧ್ಯಾನ ಸ್ಥಿರಕೊಡೋ 2 ಮೃತ್ಯುವಿಜಯ ಸತ್ಯ ಚಿತ್ತ ನಿರ್ಮಲ ನಿತ್ಯ ಸತ್ಯರ ಸಖ್ಯ ನೀಡೊ ಸತ್ಯಸದ್ಭಕ್ತಿನಿತ್ತು ಮತ್ರ್ಯರಿಂದುಳಿಸೆನ್ನ ಚಿತ್ತ ಪರಿಶುದ್ಧ ಮಾಡೊ ಭಕ್ತವತ್ಸಲ ನಿಜಮುಕ್ತಿದಾಯಕ ಮಮ ಕರ್ತ ಶ್ರೀರಾಮನ ಭಕ್ತನೆಂದೆನಿಸೆನ್ನ 3
--------------
ರಾಮದಾಸರು
ಕಂಬು ಕಂಧರ ಹರಿಯಬೆಂಬಿಡದಲೆ ಕಾಂಬ || ಹಂಬಲ ನೀ ತುಂಬು ಪ ಸ್ಥಾಣು ಅ.ಪ. ಮಂಗಳ ಸನ್ಮುಖ | ಅಂಗಜ ಪಿತ ಸಖ5À5ಳ್ಳ ಶಿಖ | ತವಸುತ ಷಣು5ಭಂಗ5ಪ ದುಃಖ | 5ಸು ಭವ ದುಃಖಇಂಗಿತಜ್ಞರ ಪ್ರಮುಖ | ಸಂಗದಿ ಕೊಡು ಸುಖ 1 ವಿಭೂತಿ ನೊಸಲು ಸಮೀರನ ಪ್ರೀತಿವಸು ನಿನ್ನೊಳತಿ | ಈಶ ಪಾಲಿಸೊ ಗತಿ 2 ಗರ್ವರಹಿತ ದೇವ | ದರ್ವಿ ಜೀವನ ಕಾವಸರ್ವ ಭಾರವು ದಾವ | ಶರ್ವ ನಿನ್ನದೊ ಭವಗುರ್ವಂತರಾತ್ಮಗುರು | ಗೋವಿಂದ ವಿಠಲನಸರ್ವದ ಸ್ಮರಿಸೂವ | ಶಿವ ಕೊಡು ಈ ಭಾವ 3
--------------
ಗುರುಗೋವಿಂದವಿಠಲರು
ಕಂಬು ಕಂಧರ ಸತತ ಬಿಡದೆ ರಕ್ಷಿ ಸಂಬೋಜೋಧ್ಭವನ ತಾತ ಪ ಜಂಭಾರಿ ವೈರಿಕುಲಾಂಬುಧಿ ಕುಂಭಜ ಕುಂಭಿಣಿಸುರ ನಿಕÀರುಂಬ ಪೋಷಕದೇವ ಅ.ಪ ನಳಿನಾಕ್ಷ ನರಕೇಸರಿ ನಂಬಿದೆ ನಿನ್ನ | ಶೌರಿ || ಸಿರಿ | ನಿಲಯ ನಿತ್ಯಾನಂದ ಎಲರುಣಿ ವರಶಾಯಿ ಕಲುಷಸಂಹಾರಕ ಜಲದರಿಪುವಿನ ತನಯಾನನುಜನ ಕಲಹದೊಳು ಜೈನಿದನ ತಾತನ ಕುಲವಿರೋಧಿಯ ಧ್ವಜನ ಜನಕಗೆ ಒಲಿದು ಬೆಂಬಲನಾದ ಕೇಶವ 1 ನಿಗಮ ರಕ್ಷಕ ಕೂರ್ಮಕೀಟ ಮಾನವ ಮೃಗವಟು ಪರಶುರಾಮ ಅಗಜೇಶ ಶರಕಾಲ | ನಗಪತಿ ವರದನೆ ಅ(ಗ)ಗಜರಾಜನ ಮಗಳಿಗೋಸುಗ ನಗುತ ಮಡದಿಯನಗಲಿ ಬಂದು ಜಗದಿ ಪೊತ್ತನ ನಗದಿ ನೆಲಸಿದ ತ್ರಿಗುಣ ವರ್ಜಿತ ಖಗವರೂಧನೆ 2 ಮಂದರೋದ್ಧರ ವಿಶಾಲಮಹಿಮನಾದ ಸಿಂಧೂರ ಪರಿಪಾಲ | ಕಂದರ್ಪಪಿತ ಶಾಮಸುಂರವಿಠಲನೆ ವಂದಿಸುವೆನು ಎನ್ನ | ಬಂಧನ ಬಿಡಿಸಯ್ಯ ಫಣಿ ಪತಿ ಪತಿ ವಿರೋಧಿ | ಪು ರಂದರಾರ್ಯರ ವೃಂದ ವಂದಿತ ನಂದ ಸುತ ಗೋವಿಂದ ಗೋಪತಿ 3
--------------
ಶಾಮಸುಂದರ ವಿಠಲ
ಕಮಲ ಸಂಭವೆ ಹಿಮನಗಜಾರಮಣ ಸನ್ನುತೆ ತಮರಿಪು ಶತ ಸಮಸನ್ನಿಭೆ ಇಭ ಇಂದಿರೆ ಶೋಭಾನೆ ಪ ಶೃಂಗಾರ ತರಂಗ ಹೆಳಲಾ ಬಂಗಾರವ ಪೊಂಗ್ಲಾದಿಗೆ ಬಲಿ ವಂಗನೆ ಶಿರೋಮಂಗಳ ಮಡಿ ಜಡ ಜಂಗಮ ವ್ಯಾಪ್ತಿ ಅಂಗಜ ಶರ ಕಂಗಳೆ ದ್ವಿಜೋ ತ್ತುಂಗಮ ರಂಗನ ನಿಜ ಅ ರ್ಧಾಂಗಿನಿಯೆ ಬಾ ಹಸಿಯ ಜಗುಲೀಗೆ 1 ಪೊಸುಕುಸುಮ ಶಿರಸದಲೊಪ್ಪುವ ನೊಸಲಲಿ ರಂಜಿಸುವ ಕಸ್ತೂರಿ ದಿಶದುಂಬಿದ ಬಿಸಿಜಾನನ ಪ್ರಭೆ ಎಸೆವ ಕಂಧರ ಕಕ್ಕಜ ಕುಚಕು ಪ್ಪುಸದಲ್ಲತಿ ಶೋಭಿಸುತಿಹ ಪವಳ ದಾ ಸರವ ತೂಗುವ ಅಸಮೇ ಬಾ ಹಸೆಯ ಜಗುಲೀಗೆ 2 ಕರಿಸೊಂಡಿಲುತೆರ ಚತುರಕರ ವರ ಅಭಯಸರಸಿಜಯುಗಧರ ಜಠರಾ ವರತ್ರಿವಳಿ ಗಂಭೀರನಾಭಿ ಕ ಟಸೂತರೆ ಹೇಮಾಂಬರೆ ಚರಣಂದಿಗಿ ಸಪಳಿ ಪೊಂಗೆಜ್ಜೆಯಾ ಮೆರೆಯುತ ಸರಸಳೆ ಬಾಹಸಿಯ ಜಗುಲೀಗೆ 3 ಮೃಗಲಾಂಛನೆ ಮಿಗೆ ಶೋಭಿಪ ಪದ ನಖ ಪಂಕ್ತಿಗಳೊಪ್ಪುವ ಗತ ಅಗಣಿತ ಮಹಿಮಳೆ ಸುಗುಣ ಸಂಪನ್ನೆ ಭಗವಂತನ ಜಘನದಿ ಪೊಳೆಯುತ ಖಗರಾಜನ ಪೆಗಲನೇರಿ ಅಮ ರ ಗಣವ ಚಿರ ಬಾ ಹಸಿಯ ಜಗಲೀಗೆ 4 ಅಂಭೃಣಿ ಸ್ವಾಯಂಭೂ ಸುರ ನಿಕು ರುಂಬಕರ ಅಂಬುಜ ಪೂಜಿತೆ ನಂಬಿದ ಜನರ್ಹಂಬಲಿಸುವ ಫಲ ಸಂಭ್ರಮದಿ ಕೊಡುವಾ ಗಂಭೀರಾ ಸು ಖಾಂಬೋಧಿ ಹರಿ ನಿತಂಬೆ ಪ ಯಾಂಬೋಧಿ ಸುತೆ ಜಗದಂಬೆ ಬಾ ಹಸಿಯ ಜಗುಲೀಗೆ 5 ಮಾಯೆ ನಾರಾಯಣಿ ಶ್ರೀ ಭೂ ಕೃತಿ ಆಯತಾಕ್ಷಳೆ ಕಾಯಜನ ತಾಯೆ ಶರಣೆ ಪ್ರಿಯ ಪಾವನ್ನೆ ವಾಯುಭುಕು ಶಾಯಿ ಅಮರಾಧೇಯಾ ಜಗನ್ನಾಥವಿಠಲನ ಜಾಯೆ ಬಾ ಹಸಿಯ ಜಗುಲೀಗೆ 6
--------------
ಜಗನ್ನಾಥದಾಸರು
ಕರವ ಮುಗಿವೆ ಚರಣಕ್ಕೆರಗುವೆ ಭರದಿ ರಕ್ಷಿಸು ಬಿಡದೇ ಶ್ರೀ ಪ ಮಾನವ ಕಾಯ್ದೆಯೊ ಹೀನರ ಮದಗರ್ವವನೆಲ್ಲ ಅಳಿದೆಯೊ ಧ್ಯಾನ ಮಾಡುವ ಸ್ವಾನುಭವಿಗಳ ಸ್ಥಾನ ಹೃದಯವಾಸ ಶ್ರೀ 1 ಧ್ಯಾನಿಸಿವಂಥಾ ಗಜರಾಜನ ಕಾಯ್ದೆ ಮಾನಿನಿ ಅಹಲ್ಯೆಯ ಪಾದದೊಳುದ್ಧರಿಸಿದೆ ದೀನರಕ್ಷಕ ಬಿರುದ ಪೊತ್ತ ವಿ ಜ್ಞಾನದೊಳಗಿರಿಸೆನ್ನಾ 2 ಶಬರಿಯ ಭಕ್ತಿಗೆ ಮೆಚ್ಚನೀ ಬಂದೆಯೊ ಬದರಿಯ ಹಣ್ಣನೆ ಸವಿಸವಿ ದುಂಡೆಯೊ ವಿಭು ಪರಮಾನಂದಾ ಪ್ರಭೆಯೊಳಗಿರಿಸಿದೆ 3 ಸ್ವರ್ಣಕಶ್ಯಪನ ಸೊಕ್ಕಗಿಸಿದೆ ದೇವಾ ಮನ್ನಿಸಿ ಪಾಂಡವರೈವರ ಸಲಹುವಾ ಚನ್ನ ಗೋಪಿಯರ ಕೂಡಿ ಮನ್ನಣೆಕ್ರೀಡೆಯ ನಾಡಿ 4
--------------
ಶಾಂತಿಬಾಯಿ
ಕರಿ ಕಮಲೇಶ ಪ ಗರುಡಾರೂಢನು ಗಜವರದ ವೈಕುಂಠ ಕೊಡುವ ಪಾಲಿಸಿ ಪಾಂಡವರ ಮನೆ ಭಂಟ1 ಪಕ್ಷಿವಾಹನ ರಾಕ್ಷಸಾರಿ ರಾವಣನ ಶಿಕ್ಷಿಸಿ ವಿಭೀಷಣನ ರಕ್ಷಿಸಿದ ರಾಮ 2 ವಿನತೆಸುತನ ಏರಿ ಘನತರುತ್ಸವದಿ ಸವರಿದಿ ಸುರವಂದ್ಯ ಸುಜನಕ್ಕಾನಂದ 3 ಹಕ್ಕಿಯ ಪಕ್ಕದಲ್ಲ್ಯರ್ಕಕೋಟಿತೇಜ ಜಾ- ನಕ್ಕಿ ಸಹಿತಯೋಧ್ಯನಾಳುವ ರಾಮ 4 ನಗಧರ ಖಗನ್ಹೆಗಲೇರಿ ಉಲ್ಲಾಸ ನಗುವ ಭೀಮೇಶ ಕೃಷ್ಣÀ ಬರುವ ಜಗದೀಶ5
--------------
ಹರಪನಹಳ್ಳಿಭೀಮವ್ವ
ಕರಿಗಿರಿ ದುರ್ಗ ನಿವಾಸಾ | ದಯಾಪರಿಪೂರ್ಣ ಪೊರೆಯನ್ನ ಅನಿಶ ಪ ಶಿರಿ ಅಜಭವ ವಿಪಗೇಶಾ | ಹೃತ್‍ಸರಸಿಜ ವಾಸ ಲಕ್ಷ್ಮೀಶಾ ಅ.ಪ. ಗಜ ಬಿಸಜ ಕಿಂಜಲ್ಕದ ಯಸಳು ರಜವ ಶಿರಸಿಯೊಳಗೆ ನೀನಿರಿಸೋ 1 ಮೇಶ ಬ್ರಹ್ಮೇಶ ನಾಶವ ಗೈವೆ ಸಶೇಷಶೇಷಶಯ್ಯ ಜೀವಾದ್ಯರ ಪೋಷಾಈ ಸಮಸ್ತ ಜಗ ನಿನ್ನುದರದಿ ವಾಸಾಕೇಶಾಸುರಪಾದೀಶ ಪರೇಶನೆ ವ್ಯಾಸಾಈಶಿತವ್ಯ ತವ ದಾಸರಿಗೆಲ್ಲ ಉಪದೇಶಿಸು ಶಾಸ್ತ್ರ ವಿಶೇಷ ರಹಸ್ಯ ಮಹಿದಾಸ ಕುಶೇಶಯ ವಿಷಯ ವಿಲಾಸದಿಪೋಷಿಸು ಮನ ಮಧ್ವೇಶ ಮಹಾಪ್ರಭೋ 2 ಕರಿವರ ವರ ಶರಣಾಗತ ಪಾಲಾತರಳೆಗಿತ್ತೆ ನವ ನವ ಸೀರೆಯ ಜಾಲಾವರಸ್ತಂಭೋದಿತ ಹರಿಭಕ್ತಿ ಸುಪಾಲಾಗುರು ಗೋವಿಂದ ವಿಠ್ಠಲಾ ಕಾಲಾಸುರಪಾದಿಯ ತನು ವರ ರಥ ರೂಢ ಪು-ರಾರಿ ಭಯಹರ ಮುರಾರಿ ಮಹ ಭವತರಿ ಎನಿಸಿಹ ಸುಖ ತೀರಥ ಸನ್ಮತಧರಿಸಿಹೆ ಕಣ್ಣೆದುರಿಲಿ ನೀ ಕುಣಿಯೋ 3
--------------
ಗುರುಗೋವಿಂದವಿಠಲರು
ಕರುಣದಿ ಕಾಯೋ-ಕರುಣಾಲ ವಾಲ ಪ ಶಿರಿಯರಸನೆ ನಿನ್ನ ಚರಣವ ನಂಬಿದೆ ಸುರಗಣ ಸೇವಿತ ಸುರರಾಜ ಪಾಲ ಅ.ಪ. ಸತಿ ಶಾಪದಿಂದರೆಯಾಗಿರಲಂದು ನೀದಯದಿ ಇಂದಿರೇಶನೆ ನೀ ||ಕರು|| 1 ಮಾರೆಹೊಕ್ಕರೆ ನುತಿಸಿ ಚಕ್ರದಿ ಮಕರಿಯನಿಕ್ಕಿ ಗಜೇಂದ್ರನರಕ್ಷಿಸಿದಾಪರಿಯಕ್ಕರೆ ತೋರಿಸಿ2 ಶಿರಸರಿಸಕ್ಕೆಗುರಿಯಿಡಲು ಚರಣದುಂಗುಟದಿಂದ ಧರಣಿಯನೂರಿ ನರನ- ಶಿರವುಳುಹಿದ ಶಿರಿ ವರದವಿಠಲ ಹರಿ3
--------------
ಸರಗೂರು ವೆಂಕಟವರದಾರ್ಯರು
ಕರುಣದಿ ಪೊರೆಯೆನ್ನ ಪ್ರಭುವೇ ಮೂಲ ಗುರುವೆ ಪ ಪರಮ ದಯಾನ್ವಿತ ಸುರಕಲ್ಪತರುವೆ ಅ.ಪ. ಅಂಗಜಪಿತನಾಜ್ಞೆ ಹಿಂಗಾದೆ ನೀಯಾಂತು ಅಂಗನೆ ಸೀತೆಯ ಅರಸುತ್ತ ಪೋದೆಯೊ ತುಂಗವಿಕ್ರಮ ನೀನು ಮಂಗಳಾಂಗಿಯ ಕಂಡು ಶೃಂಗಾರವನವನ್ನೆ ಭಂಗಮಾಡಿದೆಯೊ 1 ಕರಿಪುರದರಸನ ವರಪುತ್ರ ನೀನಾಗಿ ಕರಿರಾಜವರದಗೆ ಭಾವನಾಗಿ ಧರಣಿ ಭಾರವೆಲ್ಲ ಹರಿಸಿದೆ ನೀನು 2 ಯತಿಯ ರೂಪವ ತಾಳಿ ಕ್ಷಿತಿಯೊಳು ಚರಿಸುತ ದಿತಿಜರ ಬಾಯ್ಗಳ ಬಡಿಯುತಲಿ ಪತಿತ ಪಾವನ ಶ್ರೀ ರಂಗೇಶವಿಠಲನೆ ಪ್ರತಿಯಿಲ್ಲವೆಂತೆಂಬ ಮತಿಯಿತ್ತದೇವ 3
--------------
ರಂಗೇಶವಿಠಲದಾಸರು