ಪೂಜಿ ಮಾಡುವ ಬನ್ನಿರೊ ಗುರುಪಾದ
ಪೂಜಿ ಮಾಡುವ ಬನ್ನಿರೊ ಧ್ರುವ
ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ
ಮಾಡುವ ಬನ್ನಿರೊ 1
ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಡುವ
ಮಾಡುವ ಬನ್ನಿರೊ 2
ಅರವ್ಹೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ
ನಲಿದಾಡುವ ಬನ್ನಿರೊ 3
ಭಕ್ತವತ್ಸಲ ಮೂರ್ತಿಗೆ ಸುಖದು:ಖ ಧೂಪಾರತಿ ಮಾಡುವ
ಮಾಡುವ ಬನ್ನಿರೊ 4
ನೆನವು ನೈವೇದ್ಯದಲಿ ಮನ ಬುದ್ಧಿ ತಾಂಬೂಲವ ನೀಡುವ
ಮಾಡುವ ಬನ್ನಿರೊ 5