ವೆಂಕಟೇಶ ಎನ್ನ ಮುಂದೆ ನಿಂತಿದಂತಿದೆ ಪ
ದೆಸೆಗೆ ಪ್ರಜ್ವಲಿಸುವ ಎಸೆವ ಕಿರೀಟ
ನೊಸಲೊಳು ತಿದ್ದಿದ ನಾಮದ ಮಾಟ
ಅಸಮ ನೇತ್ರಗಳಿಂದ ನೋಡುವ ನೋಟ
ಬಿಸಜಭವನ ಪರಿಚರಿಯದ ಆಟ1
ತಿಲಪುಷ್ಟದಂದದಿ ಚಲುವನಾಸಗಳು
ಬಿಳಿಯ ಮುಗುಳ್ನಗೆ ಸಾಲು ದಂತಗಳು
ಗಳದಿ ಮೂರೇಖೆಯು ವೈಜಯಂತಿಗಳು
ಹೊಳೆವ ಮೌಕ್ತಿಕದಂತೆ ಕಿರು ಬೆವರುಗಳು 2
ಕೌಸ್ತುಭ ಎಡಗೈಯ ಶಂಖ
ಕಿರು ನೇಸರಂದದಿ ಚಕ್ರದ ಬಿಂಕ
ಕರದೊಳು ಜಗವನು ತೋರುವ ವೆಂಕ
ಮುರುಕ ಕಟಿಯೊಳು ಇರಿಸಿದ ನಿಃಶಂಕ 3
ತೋರ ಮುತ್ತಿನ ಸರ ಮಕರಕುಂಡಲವು
ತೋರುವ ಭುಜಕೀರ್ತಿ ಚಕ್ರದ ಸರವು
ಹಾರ ಹೀರಾವಳಿ ಬೆರಳುಂಗುರವು
ಚಾರು ಭಾಪುರಿ ಘಂಟೆ ಸರಪಣಿಯಿರವು 4
ಕಿರುಡೊಳ್ಳಿಗೊಪ್ಪುವ ನಾಭಿಯ ಸಿರಿಯು
ಸರಸಿಜಮಿತ್ರನ ತೇಜದ ಪರಿಯು
ಮರುಗು ಮಲ್ಲಿಗೆ ಜಾಜಿ ಸಂಪಿಗೆ ಸರಿಯು
ಪರಿಮಳಿಸುವ ಮೈಯ ಪುಳಕದ ಸಿರಿಯು 5
ಉಡಿಯ ಪೀತಾಂಬರ ಮೇಲುಡುದಾg À
ಕಡಹದಂದದಿ ಚಲ್ವ ಕಾಲ್ಗಳ ತೋರ
ಅಡಿಯಿಟ್ಟು ನಿಂದಿಹ ಬೆಡಗಿನ ವೀರ
ಮಡದಿ ಮಹಾಲಕ್ಷ್ಮೀ ಪುಡುಮಿಯುದಾರ 6
ಸ್ವಾಮಿ ಪುಷ್ಕರಣಿಯ ತೀರ ನಿವಾಸ
ಭೂಮಿ ವರಾಹತಿಮ್ಮಪ್ಪನ ದಾಸ
ಪ್ರೇಮದಿ ರಚಿಸಿದನಿದರೊಳು ಪ್ರಾಸ
ತಾಮಸವಿದ್ದರು ತಿದ್ದಲು ಲೇಸ 7