ಮನ್ಮಥ ಚರಿತೆ340
ವರಸಿದ್ಧಿ ಗಣೀಶನ ಬಲಗೊಂಡೀ-
ಶ್ವರನ ಪದಕೆ ನಮಿಸಿ | ಶಾರದೆಯ
ಹರುಷದಿ ಸಂಸ್ಮರಿಸಿ | ಚ
ತುರ್ಮುಖಗಳ ನೆರೆ ಭಜಿಸಿ
ಹರುಷದಿ ನುತಿ ಮಾಡಿ | ಮಾಡಿ-
ದ ಕೃತಿಯ ಸುಜನರು ನೋಡಿ 1
ಕಾಮಜನಕ ನಿಷ್ಕಾಮಜನಾಪ್ತ | ಸು-
ಧಾಮನ ಸಖ ಹರಿಯು |
ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ-
ತ್ಕಮಲದೊಳೀಪರಿಯು
ಕಾಮನ ಸುಚರಿತೆಯು | ಸಜ್ಜನರು-
ಇಹಪರ ಸದ್ಗತಿಯು | 2
ಪೃಥಿವಿಯೊಳಿಹ ಸುಜನರು ಕೇಳಿ | ಮ
ನ್ಮಥ ಚರಿತ್ರೆಯನು | ಸಹ-
ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ-
ದ್ಗತಿಗಳನು ಕೊಡುವನು |
ಶತಮುಖವಂದಿತ ಸಿರಿದೇವಿಯರಸ-
ನೊಲಿದು ಪಾಲಿಸುವನು | ಜನರ ಕೋ-
ರಿದ ಕೋರಿಕೆಗಳನು |
ತಾ ಕೊಟ್ಟವರನು ಪಾಲಿಪ ತಾನು 3
ತಾರಕಾಸುರನ ಭಯದಿಂದಲಿ ವೃಂ-
ದಾರಕರೆಲ್ಲ ಕೂಡಿ | ಮನದಿ
ಆಲೋಚನೆಗಳ ಮಾಡಿ | ವನಜ ಸಂ-
ಭವನಡಿಗಳ ಬೇಡಿ |
ಯಾರು ನಮಗೆ ದಿಕ್ಕೆಂದು ಕಳವಳಿಸಿ
ನಾರಾಯಣನ ತ್ವರಿತದಲಿ | ಕಂಡು ವಂ-
ದಿಸಿದರು ತವಕದಲಿ | 4
ವಾರಿಜಾಕ್ಷ ಪರುಷೋತ್ತಮ ವಿಶ್ವಾ-
ಧಾರ ಪರಾತ್ಪರನೆ | ಅನಂತನವ-
ತಾರ ಕೃಪಾಕರನೆ | ನಾವೆಲ್ಲ
ಸೇರಿದೆವೈ ನಿನ್ನನೆ |
ತಾರಕಾಸುರನ ಬಾಧೆ ಪರಿಹರಿಪ-
ರ್ಯಾರನು ನಾವ್ ಕಾಣೆವೈಯ್ಯ | ಉ--
ದ್ಧಾರ ಮಾಳ್ಪನು ನೀನೆ | ಭಕ್ತಜನ-
ವಾರಿಧಿ ಚಂದ್ರಮನೆ | 5
ಎನಲು ಸುರರೊಡನೆ ನುಡಿದನಾಗಲಾ-
ವನಜನಾಭ ತಾನು | ಈ ಕಾರ್ಯ-
ಕೆನಾ ಮಾಡುವುದೇನು | ಭ-
ವಾನೀಧವನಾಗಿ ಶಿವನು |
ಘನತಪವನಾಚರಿಸುತ್ತ ಮೇರುಗಿರಿ
ಗುಹೆಯೊಳು ಕುಳಿತಿಹನೊ | ಫಾಲದಲಿ
ಉರಿಗುಣ್ಣುಳ್ಳವನು | ಏನಾದರು
ಸರಿ ತಾ ಲೆಕ್ಕಿಸನು | 6
ಕಾಮನಿಂದ ಶಂಕರನ ತಪಕಿಡಿಸಿ
ಕರುಣಿಸಬೇಕೆಂದು ಬೇಡಿ | ಕೊಂ-
ಡರವ ನಿಮ್ಮೊಳು ದಯಮಾಡಿ | ತ-
ಕ್ಕಯೋಚನೆಗೈಯ್ಯುವ ನೋಡೀ |
ತಾಮಸನ ಮುರಿದು ನಿಮಗೆ ಸಂತತವ
ಕೊಡುವನು ಮುದಗೂಡಿ | ಎಂದು
ಪೇಳಿದ ಶ್ರೀಹರಿಯನುಡಿ | ಕೇಳಿ
ಇಂದ್ರನು ಗುರುವನು ನೋಡಿ 7
ಚಂದದಿಂದ ಸೇರಿ | ಸ್ಮರಗೆಯಿದ-
ರಂದವೆಲ್ಲವುಸುರಿ | ಅವನಮನ
ಶೌರಿ ಕಂದನೆಯಂತಾದರು ತಂದರೆ ಸುಖ-
ವೆಂದನುಪಕಾರಿ | ಗುರು
ವಂದಿಸೆ ಸುರರ ದೊರಿ | ಬೀಳ್ಕೊಂಡು
ಬಂದನು ಕುಸುಮಪುರಿ8
ಕುಸುಮಾವತಿಯಲಿ ಮೀನಕೇತನನ
ಶಶಿನಿಭವದನೆಯರು | ಸೇ-
ವಿಸುತಿರೆ ಹಸನಾದ ಪನ್ನೀರು | ಪುನಗು
ಅಗರು |
ಕುಸುಮಶರನ ಉಪಚರಿಸುತ ಬಾಲೆಯ-
ರೆಸೆಯಲು ಮೋದದೊಳು | ರತಿ-
ಕ್ರೀಡೆಯಲಿ ಮನಕರಗಲು | ಬೃ
ಹಸ್ಪತಿಯನಿತರೊಳೈತರಲು 9
ಊಳಿಗದವರಿಂದ್ಹೇಳಿ ಕಳುಹೆ ಗುರು
ಕೇಳಿ ಸುದ್ದಿ ಮಾರಾ | ತವಕ
ಪರಿಪರಿಯುಪಚಾರ |
ಶ್ರೀಪತಿಯ ಕುಮಾರ | ಬಂದಹದ-
ನೇನೆನುತ ಪದಾರ | ವಿಂದ-
ಕೆರಗಿದನಾ ಕುಸುಮಶರ 10
ಭಯದೊಳಮರರೆಲ್ಲ |
ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ-
ಸಲು ಕೇಳಿ ಸಿರಿಯನಲ್ಲಾ |
ಅರಘಳಿಗಾಲೋಚಿಸಿ ಎನ್ನೊಳುನುಡಿ-
ದನುಕೇಳಿಸಿರಿಯನಲ್ಲಾ | ಖಳಗೆಧರೆ-
ಪರಿ ಎಲ್ಲವನು ಬಲ್ಲ 11
ಕಾಮನು ಪುಷ್ಪ ಶರಗಳಿಂದೆಸೆಯಲು ಗೌ-
ರಿಮನೋಹರನೂ | ಬ-
ಹಿರ್ಮುಖನಾಗುತ ಶಂಕರನೂ | ನಿ-
ಕ್ಷೇಮವ ಪಾಲಿಪನು | ರಜತಗಿ
ರಿವಾಸಿ ಮಹೇಶ್ವರನು | ಇದಕೆ
ಗುರಿಯಾದ ಎನ್ನ ಮಗನು 12
ನಾವು ಪೇಳಿರುವೆವೆಂದು ನಮ್ಮ ಸು-
ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ-
ಳಿವಿವರಮಾಗೆ | ಕರೆದುಕೊಂ-
ಡ್ಹೋಗಿ ಶಿವನ ಬಳಿಗೆ |
ಪಾವಕಾಕ್ಷ ಬಲು ಕರುಣಾನಿಧಿಯಿ-
ನ್ನೇನು ಚಿಂತೆ ನಮಗೆ | ಬೇಗನಡೆ
ಯೆಂದ ಹರಿಯು ಎನಗೆ |
ಸಕಲವೂ ತಿಳಿಸಿದೆ ನಾನಿನಗೆ | 13
ಪರಿಯೋಚನೆ ಮಾಡು | ಸ-
ತ್ಕೀರ್ತಿಯ ಸಂಪಾದನೆ ಮಾಡು |
ಭರದಿ ಹೂ ಶರಗಳ ನೀ ಹೂಡು |
ಹರನ ತಪವ ಭಂಗಿಸಿ ನಮ್ಮೆಲ್ಲರ
ಕರುಣದಿ ಕಾಪಾಡು | ತಂದೆಯ-
ಪ್ಪಣೆಯ ಮನದಿ ನೋಡು | ಮೂಜಗದಿ
ಯಾರು ನಿನಗೆ ಜೋಡು | 14
ಈ ಪರಿಪೇಳಿದ ಗುರುವಿನ ನುಡಿಯನು
ಶ್ರೀಪತಿಯ ಕುಮಾರ | ರತಿಯೊಡನೆ
ಮಾರ | ನುಡಿದಳಾ
ಶಿವನು ಮಹಾಕ್ರೂರ |
ಆಪತ್ತೊದಗುವುದೀಗ ಬೇಡ ಎಂ-
ಕಂದರ್ಪಮನದಿ ಸೋತು | ಬೃಹಸ್ಪತಿ-
ಗೆಂದ ಕಾಮನಿನಿತು 15
ಸಮ್ಮತಿಯಿದು ಕೇಳಿ | ಪೂಶರನ
ಬಿಡಲು ಚಂದ್ರಮೌಳಿ | ಕೋಪಿಸಲಾ
ಹಣೆಗಣ್ಣೆನಗಾಳೀ |
ಬ್ರಹ್ಮಾಂಡಗಳಾದರು ದಹಿಸುವುದು
ಎನ್ನಳವೇ ಎಂದಾ | ಈ ಕಾರ್ಯಕೆ
ನಾನು ಬಾರೆನೆಂದ | ನುಡಿಗೆ ಸುರ-
ಗುರುಮತ್ತಿಂತೆಂದ | 16
ಮರೆಹೊಕ್ಕಿರುವಮರರ ಪಾಲಿಸುನೀ
ಕಂದರ್ಪ | ಜಗ-
ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ
ನಡಿಸಲು ಬೇಕಪ್ಪಾ |
ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ
ಸರಿಯಾರಪ್ಪಾ | ನಮ್ಮ ನುಡಿ
ಮೀರಬಾರದಪ್ಪಾ | ಅಷ್ಟು ಪೇಳಿ-
ದರು ಕಾಮವೊಪ್ಪಾ | 17
ಕಾಮನವೊಪ್ಪಿಸಿ ಕರದೊಯಿದಮರರು
ಕೈಲಾಸವ ಸೇರಿ | ಅರುಹಿದರು
ಗಿರಿರಾಜ ಕುಮಾರಿ |
ಕೇಳಿನಡೆತಂದಳಾಗಗೌರಿ |
ವ್ಯೋಮಕೇಶನಿಹ ಗವಿಯ ದ್ವಾರಕೇ
ಬರಲು ನೋಡಿ ನಂದಿ | ತಾಯಿನೀ-
ನಿಲ್ಲಿಗೇಕೆ ಬಂದಿ | ಏನು ಅ-
ಪ್ಪಣೆಯೆಂದನು ನಂದಿ 18
ವಂದನೆ ಒಳಗೆ ಹೋಗುವನು ಇವನನೀ
ತಡೆಯಬೇಡವಯ್ಯ | ಎನ್ನ
ಕಂದನು ಇವ ಕೇಳಯ್ಯ | ಎಂದು ಪೇ-
ಳಿದ ಗೌರಿಯ ನುಡಿಯಾ |
ಮುದದಿ ಶಿರದೊಳಾಂತನು ನಂದೀಶ್ವರ
ಮುಂದೆ ಕೇಳಿ ಕಥೆಯ | ಅನಿತರೊಳ್
ಬಂದ ಕಾಮರಾಯ | ಪೋಗ ಬಹು-
ದೆಂದ ಪ್ರಥಮಗೇಯ | 19
ಕಾಮಪೊಕ್ಕನಂದು | ಕರದಿ ಜ-
ಪಮಾಲೆ ಪಿಡಿದು ಮುಂದು | ಮ-
ಹಾಮಂತ್ರಗಳ ಜಪಿಸುತಂದು |
ನೇಮದೊಳೇಕೋಭಾವದೊಳಿರುತಿಹ
ಸೋಮಧರನ ಕಂಡ | ಏ-
ನು ಮಾಡುವದೆಂದು ಪ್ರಚಂಡಾ | ಇಕ್ಷುಧ-
ನುಶರಗಳ ಕೈಕೊಂಡಾ | 20
ವಿನಯದಿಂದ ಪ್ರಾರ್ಥಿಸಿ ಮಾತಾಡಿಸು-
ವೆನೆಂದು ಶಂಕರನ | ನುತಿಸಿ ಬೇಡಿ-
ದನು ಶೂಲಧರನಾ | ಎಷ್ಟಾದರು
ಕರಗಲಿಲ್ಲವನಮನಾ | ಪರಿಪರಿಯೋ-
ಚನೆ ಮಾಡಿ ಮನ್ಮಥನು |
ಬೆರಗಾಗುತಾ ನಿಂತಾ
ಸಮಯನೋಡುತ-
ಲಿರತಿಯ ಕಾಂತಾ | ಮನ
ದಿ ಹೊಂದಿದನು ಮಹಾಚಿಂತಾ 21
ನೆಂದು ಯೋಚಿಸಿದನು | ಇ-
ಕ್ಷು ಧನುವನು ಜೇ ಹೊಡೆದಾನು | ಮಹೇ-
ಶನ ಮರ್ಮಸ್ಥಳಗಳನು |
ಪುಷ್ಪ ಬಾಣಗಳೂಡೆಸೆಯೆ ಮ-
ಶರಗಳನು ಸುರಿದಾನು | ಜ-
ನರೆ ಕೇಳೀಯಾಶ್ಚರ್ಯವನು | 22
ಆ ಮಹೇಶ್ವರನ ಮೂಲ ತಿಳಿಯಲಿಂ-
ದ್ರಾದಿಸುರರಿಗಳವೆ | ಕೇಳಿಯೀ
ಕಾಮನೇನು ಲಕ್ಷ್ಯವೆ |
ಕರಿಚರ್ಮಾಂಬರನಾ | ಮೀನ ಕೇ-
ತನನ ಬಾಣಕೆ ಮನಾ | ಬಹಿರ್ಮು-
ಖನಾಗಿ ನೋಡಿ ಸ್ಮರನಾ | 23
ಕಣ್ಣುತೆಗೆದು ಮುಕ್ಕಣ್ಣಯಲೋ ನಿನ-
ಗೆನ್ನೊಳೇಕೆ ಪಂಥಾ | ಛೀ
ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ-
ತನ್ನನಿಜಸ್ವಾಂತ-|
ವನ್ನು ಪೂರ್ವದಂದದಿ ತಪದಲ್ಲಿರಿಸಚ-
ಪೋಲ್ವಂದದಲಾ ಶಾಂತಾ | ಶೂರ್ಪಕಾ-
ರಿಯು ಎದುರಲಿ ನಿಂತಾ | 24
ನಾನು ಬಂದಾ ಕಾರ್ಯವ ಕೇಳದಲೆ ಇ-
ದೇನೀ ಪುರಹರನು | ಛೀಹೋಗೋ-
ಗೆಂದು ಗರ್ಜಿಸಿದನು | ಎನುತ ತೆ-
ಗೆದೆಚ್ಚ ಪೂಶರವನು |
ನಾನಾವಿಧದಲಿ ತನ್ನ | ಚಮತ್ಕಾ-
ರಗಳ ತೋರಿಸಿದನು | ಮನದಿ
ಭಯಗೊಳುತ ಮನಸಿಜನು |
ಮುಂದಾಗುವ ಕಥೆಯ ಕೇಳಿಯಿನ್ನು 25
ಭರ್ಗಕಣ್ದೆರೆದು ನೋಡಲಾಕ್ಷಣದಿ
ಭರದಿಂ ಮನ್ಮಥನಾ | ಕೋಪಕಿಡಿ-
ಯಿಡುತ ಫಣೆಗಣ್ಣ | ತೆಗೆದು
ನೋಡಲು ತಕ್ಷಣ | ಚಿಣ್ಣಾ
ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ
ದಗ್ಧನಾದ ಮದನಾ | ಭಸ್ಮದಂ-
ತಿದ್ದು ಮರ್ಮಸದನಾ | ಅಗ್ನಿವ್ಯಾ
ಪಿಸೆ ಬ್ರಹ್ಮಾಂಡವನಾ 26
ಸುರರು ಕಿನ್ನರರು ಗಡಗಡ ನಡುಗುತ
ಬೆರಗಾದರು ನೋಡಿ | ಅವರ-
ಶಿರವನಲ್ಲಾಡಿ |
ಚರರು ಬಂದು ರತಿಗೀ ಸುದ್ದಿಯ ಪೇಳಿ-
ದರು ದುಃಖ ಮಾಡಿ | ಕೇಳಿ
ನಾರಿಯರು ಶೋಕವಮಾಡಿ | ರತಿಯು
ನೆಲದೋಳ್ ಬಿದ್ಹೊರಳಾಡಿ | 27
ಹಾಹಾರಮಣಾ ಹಾ ನಿಜೇಶ ಹಾ
ಪ್ರಾಣಕಾಂತಕಾಮಾ | ಎನ್ನ
ಕರ್ಕಶನಿಸ್ಸೀಮ |
ಸಾಹಸ ಮಾಡುವೆನೆಂದು ಪೋಗಿ ಶಂ-
ಕರನಿಂದಲಿ ಮಡಿದೆ | ಪೇಳಿದಮಾ-
ತ್ಕೇಳದೆ ನೀ ನಡೆದೇ | ಪೋಗಬೇ-
ಡೆಂದು ನಾನು ನುಡಿದೆ 28