ಆಲದೆಲಿಯ ಮ್ಯಾಲ ಮಲಗ್ಯುಂಗುಟ ಚಪ್ಪರಿವನು ನೀನಾರೈ
ಮೂಲರೂಪದ ನಿಜದೋರದೆ ಬಾಲಕನಾಗಿಹ ನೀನಾರೈಧ್ರುವ
ಚಲುವ ಕಂಗಳ ನೋಡದಲ್ಹೊಳವುತ ಜಲದೊಳಗಾಡುವನಾರೈ
ಕಾಲುಡಿಗಿಸಿ ಬೆನ್ನಿಲೆ ಬಲು ಕಠಿಣವ ತಾಳಿದವ ನಿನಾರೈ 1
ಕೋರ್ಹಲ್ಲಿಲಿ ಬೇರನೆ ಅಗಳ್ಯಾಡುತ ದೋರುವ ನೀನಾರೈ
ನರಮೃಗರೂಪದಿ ತರಳಗೊಳಿದು ಭರದಲಿ ಬಂದವನಾರೈ 2
ಒಪ್ಪಿಲಿ ಮೂರುಪಾದ ಭೂಮಿಯೊಪ್ಪಿಸಿಕೊಂಡವನಾರೈ
ಚಪ್ಪಗೊಡಲಿ ಕೈಯಲಿ ಪಿಡಕೊಂಡು ಇಪ್ಪವ ನೀನಾರೈ 3
ಬಳ್ಳಿಹಿಡಿದು ಕಲ್ಲನೆ ಉದ್ಧರಿಸಿದ ಮಲ್ಲನು ನೀನಾರೈ
ಗೊಲ್ಲತೆಯರ ಮೋಹಿನಿ ಎಳಿದಾಡುವ ಚಲುವನು ನೀನಾರೈ 4
ಚದುರನು ನೀನಾರೈ
ಕುದುರೆಯನೇರಿ ಹದನದಿ ತಿರವ್ಯಾಡುವ ರಾವುತನಾರೈ 5
ಕುರುಹುದೋರದೆ ನರನಾರಿಯರ ರೂಪದಲ್ಯಾಡಿದವನಾರೈ
ಬಡಿಸಿದವ ನೀನಾರೈ 6
ಅಗಣಿತ ಗುಣದಲಿ ಬಗೆ ಬಗೆ ಅಡುವ ಸುಗುಣ ನೀನಾರೆ ೈ
ಝಗಝಗಿಸುವ ಜಗನ್ಮನೋಹರನಾಗ್ಯಾಡುವ ನೀನಾರೈ 7
ಖೂನ ಕುರುಹದೋರಿದ ಭಾನುಕೋಟಿ ತೇಜನಹುದೋ ಬಾರೈ
ದೀನ ಮಹಿಪತಿ ಸನಾಥಮಾಡಿದ ದೀನೋದ್ಧಾರಹುದಹುದೈ 8