ಇನ್ಯಾಕೆ ದೇವಿ ಮುನಿಸು ಮಾತಾಡೇ|
ನಿನ್ನ ಹಿಡಿದ ಛಲ ಗೆಲಿಸಿದ ಬಳಿಕ ಪ
ಘನ ಮಳೆಗರವ ಜೀಮ್ಯೂತಮ್ಯಾಲೇ|ತಾ|
ಮುನಿಪ ಕೋಪದಿ ಪೋಗುತಲಿಹ|
ಮನ ದೊಳಗಿದ್ದ ಚಾತಕನಂತೆ ನಿನ್ನ ಮ್ಯಾಲೆ|
ವನರುಹ ನೇತ್ರ ನಾ ಮುನಿದುದು ಕಾಣೆ 1
ಸಂಗತಿಲ್ಲದೆ ನಿನ್ನಾಂಗ ನಟ್ಟುಳಿಯಿಂದ|
ಭಂಗ ಗೊಂಡಿಹುದು|
ತುಂಗ ಪಯೋಧರೆನ್ನಂಗ ತೋಷಿಸುವ ತಾ|
ಲಿಂಗನ ಗೈಯೆ ನೀ ಮಂಗಳವದನೇ 2
ನಿನ್ನಿಂದಾಗಲಿ ಮತ್ತ ನನ್ನಿಂದಾಗಲಿ ಇನ್ನು
ಮುನ್ನಾದ ಮನದ ಗಂಟು ಬಿಟ್ಟು|
ಪನ್ನಗವೇಣಿ ಮಾತಾಡೇ ಸದ್ಗುಣದ ಸಂ|
ಪನ್ನೇ ಮಹಿಪತಿ ಸುತಗೊಲಿದ ಶ್ರೀದೇವಿ 3