ಎಲ್ಲಿ ಹೋಗುವೆ ಮನದಿ ನಿಲ್ಲೊಂದು ಘಳಿಗೆ
ಸೊಲ್ಲ ಲಾಲಿಸು ಲಕ್ಷ್ಮೀವಲ್ಲಭನೆ ನೀನು ಪ
ನಡುನೀರೊಳಾಡುವೆಯೊ ಅನಿಮಿಷನು ನೀನಾಗಿ
ಕಡುಭಾರದಿಂದಿಳಿವ ಗಿರಿಯನೆತ್ತುವೆಯೊ
ಅಡವಿಯೊಳು ಚರಿಸುವೆಯೊ ಬಗೆದು ಬೇರನು ತಿನ್ನ
ಲೊಡೆಯುವೆಯೊ ಕಂಭವನು ಘನ ಮಹಿಮೆಯಿಂದ 1
ಬೇಡಿ ದೈತ್ಯನ ನೀನು ಮೂರಡಿಯ ಭೂಮಿಯನು
ಕಡು ಚೆಲ್ವ ಪಾದದಿಂದದಳೆಯ ಪೋಗುವೆಯೊ
ಕೊಡಲಿಯೊಳು ಭೂಭುಜರ ಸಂತತಿಯ ಕೋಪದಿಂ
ಕಡಿಕೊಂಬೆ ನೀನೆಂದು ಜಗವೆಲ್ಲ ಹೊಗಳುತಿದೆ 2
ವಾರಿಧಿಯ ಕಟ್ಟುವೆಯೊ ಬೆಟ್ಟವನು ತಂದಿಕ್ಕಿ
ನಾರಿಯರ ಸೇರುವೆಯೊ ಕಡು ಮಮತೆಯಿಂದ ಶ-
ರೀರದೊಳು ನಾಚಿಕೆಯ ಹೊರಗಿಡುವೆಯೊ ನೀನು
ವಾರುವನನೇರುವೆಯೊ ಈರೈದ ತೋರುವೆಯೊ3
ಬೆಟ್ಟದೊಳು ನಿಲ್ಲುವೆಯೊ ಕಟ್ಟುವೆಯೊ ರೊಕ್ಕವನು
ಶೆಟ್ಟಗಾರನುಯೆಂದು ಪೆಸರಿಟ್ಟೆಯೊ
ವರಾಹ ತಿಮ್ಮಪ್ಪನೆಂಬುದನು
ದೃಷ್ಟಿಯಲಿ ನೋಡಿ ಕಿವಿಗೊಟ್ಟು ಮಾತಾಡು 4