ಇಂದಿರೇಶಾನಂದ ಕಂದನೇ
ಮಂದರಧರ ಗೋವಿಂದ ಗೋಪತಿಯೇ ಪ
ಮುದ್ದು ಮೋಹನ ಕೃಷ್ಣಾ
ಸಿದ್ಧನಾಗಿಹೆ ನೀ
ಇದ್ದು ನೀ ಇಲ್ಲದಂತೆನ್ನಾ
ಬುದ್ಧಿವಂತನೆ ನೀನು ಕದ್ದು ಪೋಗುವೆಯೊ 1
ಮರೆತು ನಾಬಿಟ್ಟೆನು
ಧರೆಯೊಳು ನಿನಗೆ
ಪರಮ ಪುರುಷ ಹರಿಯೇ
ತುಂಬಿ ಭರಿತನಾಗಿರುವಿ 2
ಮೃಡಸಭಾ ನಿನಗೆ
ತಡಮಾಡದೆ ಪಿಡಿದು
ದೃಢದಿಂ ಕಟ್ಟುವೆ ಕಡಲೊಡೆಯನೇ 3
ವಾಸುದೇವನೇ ಜಗ
ದೀಶ ಗೋಪಾಲಾ
ಈಶ ಶಾಂತಿಯ ಪಾಲಿಪಾ
ಶೇಷ ಶಯನನೆ ಸರ್ವೇಶಾ ಶ್ರೀ ಗುರುವೇ 4