ನಿತ್ಯ ಸಲಹೆ ಜನರನು ಅನ್ನಪೂರ್ಣೆ ಪ
ಉಲ್ಲಾಸದಿಂದಲಿ ಪಲ್ಲಕ್ಕಿಯ ಮೇಲೆ ನೀ
ಕುಳ್ಳಿರ್ದು ಛತ್ರ ಚಾಮರ ವ್ಯಜನಗಳಿಂದ
ಅಲ್ಲಿ ಗಲ್ಲಿಗೆ ನೃತ್ಯಗೀತ ವಾದ್ಯುಪಚಾರ
ದಲ್ಲಿ ಉತ್ಸವದಿ ಬರುವ ಸಂಭ್ರಮವಕಂಡೆ 1
ಹಾಡಿ ಪಾಡಿಸಿ ಕೊಳುತ ಚತುರ್ವಿಧ ಗೂಡಿದ
ಮಂತ್ರ ಸ್ತುತಿಗಳಿಂದಲಿ
ಕೂಡಿದ ಜನರ ಸಂದಣಿಯಲ್ಲಿ ಮನೆಯಲ್ಲಿ
ಬೇಡಿದ ಜನರಿಂಗಿಷ್ಟಾರ್ಥವ ನೀವುದ ಕಂಡೆ 2
ಮೂರು ಮೂರುತಿ ನೀನೆ ನಿರ್ಮಿಸಿ ಮತ್ತೆ
ಮೂರು ಗುಣಂಗಳ ಧರಿಸಿ
ತಾರಣ ರೂಪೆ ಸೃಷ್ಟಿಸ್ಥಿತಿಗಳನು ಸಂಹಾರವ
ಮಾಳ್ಪ ಚೈತನ್ಯ ರೂಪೆಯಕಂಡೆ 3
ಬಿಂಕವ ಮುರಿದೆ ಜನರ ಸಾಕಿನ್ನು ಭಯಂಕರವನು
ಬೀರದಿರು ತಾಯೆ ಎನ್ನ ಮಾಡಲ ಮನೆಯೊಳು ನೆಲಸಿ
ಭಕುತರನು ಶಂಕರಿ ಸಲಹೆ ದಯದೊಳನ್ನಪೂರ್ಣೆ 4
ಎಲ್ಲ ಜೀವರಿಗು ಜೀವಳು ನೀನು
ಇಲ್ಲಿನ್ನು ನಿನಗಿಂತ ಬಲ್ಲಿದರು
ಇಲ್ಲಮ್ಮ ವಿಜಯದಶಮಿಯೊಳು ನೀ ಬಂದು
ಕೊಲ್ಲೂರ ಮೂಕಾಂಬೆಯೊಳಿರ್ದುದ ಕಂಡೆ 5