ಜಯ ಜಯ ಕರುಣಾಕರ ಗುರುದೇವ
ವಾಸುದೇವ ಧ್ರುವ
ಮುನಿಜನ ಪಾಲಕ ದೀನ ದಯಾಳ
ಅನಾಥ ಬಂಧು ಶರಣಾಗತ ವತ್ಸಲ
ಸನಕಾದಿಗಳೊಂದಿತ ಸಿರಿಸುಖಲೋಲ
ಅನುದಿನ ಅಣುರೇಣುಕ ನೀನೆ ಸುಕಾಲ 1
ಪತಿತ ಪಾವನ ಪರಮ ಉದಾರ
ಭಕ್ತವತ್ಸಲ ಮಾಮನೋಹರ
ಅತಿಶಯಾನಂದ ಸುಜ್ಞಾನಸಾಗರ
ಚತುರ್ದಶ ಭುವನಕೆ ನೀ ಸಹಕಾರ 2
ದೇಶಿಕರಿಗೆ ದೇವ ನೀನೇ ನಿಧಾನ
ವಿಶ್ವಪಾಲಕ ಸ್ವಾಮಿ ನೀ ಸುಗುಣ
ಭಾಸ್ಕರ ಕೋಟಿ ತೇಜ ನೀನೇ ಪೂರ್ಣ
ಲೇಸಾಗ್ಹೊರಿಯೊ ದಾಸ ಮಹಿಪತಿ ಪ್ರಾಣ3