ನಿರ್ವಿಕಲ್ಪರೂಪವೇ ಆನಂದರುಪವೇ
ಸರ್ವಾಧಾರ ಚಿನ್ನಭಾ ನೀನೆ ಆ ಸ್ವಯಂಪ್ರಭಾ ಪ
ನೀ...... ಅನುಭವದಿ ಮನಗಾಣುವಧೀ
ಭಾವಾತೀತ ಬೋಧವಾ ನಿತ್ಯಾನಂದದಾತ್ಮವಾ
ಕಲ್ಪನೆ ಎರಡರ ಮಧ್ಯದೊಳಿರುವ ಕಲ್ಪನೆ ಸಾಕ್ಷಿರೂಪವೇ
ಪೂರ್ಣಾನಂದ ನೀನಿಹೆ 1
ಈ........... ತೋರಿಕೆ ಎಲ್ಲಾ ಕಲ್ಪಿತಾ
ಮನಸಿನದೆಲ್ಲ ಜೀವಿತಾ
ಮನವೇ ಚಿತ್ತಾಕಾಶ ತಾ
ಪರಿ ಈ ತೋರಿಕೆ ಮಿಥ್ಯಾ
ಚಿನುಮಯ ಮಾತ್ರ ನೀನಿಹೆ
ಶಂಕರಗುರುವಿನ ಬೋಧವೇ2