ಜನನಿ ಜಾನಕೀ ನೀದಯಮಾಡೇ
ಜಗದೀಶ್ವರ ನಾಯಕೀ ಪ
ಫಣಿವಿಲಾಸನ ಪ್ರೀಯೆ ಭಜಕರ
ಮನವಿಗಳ ನೀಕಾಯೆ ತಾಯಳೇ
ಪ್ರಣವರೂಪಳೆ ಪ್ರಣಮಿಸುವೆ
ತ್ರಿಣಯಸಖನಾರಾಣಿ ಸುಂದರೀ 1
ಸರ್ವತಂತ್ರಳೆ ಸಾಕ್ಷರೂಪಿಣಿ
ದುರ್ಮದಾಂತಕಿ ದುಃಖದೂರಳೆ
ನಿರ್ವಿಕಲೆ ಗೀರ್ವಾಣೆ ಶುಭಕರಿ
ಉರ್ವಿಪಾಲಿಕಳಾದ ಸೀತೆಯ 2
ಆದಿಶಕ್ತಿ ಅನಂತರೂಪಳೆ
ವೇದಮಾನಿನಿ ವಾದಿಭೀಕರಿ
ಪಾದಸೇವ ಕನಿಷ್ಟಮೊದಗಿಸೆ
ಭೂಧರಗೆ ನಿಜರಾಣಿ ವೈಭವೆ 3
ರಂಗನಾಯಕಿ ರಾಧೆ ಶ್ರೀ ಜಯ
ಮಂಗಳಾಂಗಿ ಸಮೋದೆ ನಿಚ್ಚಲೆ
ಜಂಗಮಾರ್ಚಿತ ಗುರುವು ತುಳಸೀ
ಬೆಂಗಳೂರೊಳಗಿರುವ ಕಾರಣ4