ಸಾರಿ ಭಜಿಸಿರೋ | ವಿಜಯ ಗುರುಗಳೆಂಬರಾ ಪ
ಚಾರು | ಚರಣ ತೊರ್ಪರಾ ಅ.ಪ.
ಸತ್ರಯಾಗದೀ ಗಂಗೆ | ಕ್ಷೇತ್ರ ತೀರದಿಭ್ರಾತೃವರ್ಗವೂ ಅವರ ತುತಿಸಿ ಕಳುಹಲೂ 1
ಗಿರಿಜೆ ರಮಣನಾ ಪುರವ | ಸಾರಿ ಬೇಗನೇಮಾರ ಕೇಳಿಯಾ ನೋಡಿ | ಗಿರಿಯ ತ್ಯಜಿಸಿದಾ 2
ಚತುರವದನನಾ ದಿವ್ಯ | ಸತ್ಯಲೋಕವಾಚತುರ ಸೇರುತಾ ಅವನ | ಸ್ತುತಿಯ ಮಾಡಿದ 3
ವೇದ ಪಠಿಸುತಾ | ಬಧಿರನಂತಿರೇವದಗಿ ಸಾಗಿದಾ | ನಾರ್ದ ದೂತನೂ4
ಹರಿಯೆ ಕಾಣುವೆ ಎಂದು | ತ್ವರದಿ ಬಂದನೂಹರಿಯ ಮಾಯವಾ ಜಗದಿ | ಯಾರು ಅರಿವರು 5
ನಿದ್ರೆ ಬಂದವಾ | ನಂತೆ ಮಲಗಿಹಾಭದ್ರ ಮೂರ್ತಿಯಾ ತಾನು ಕಾಲಿಲೊದ್ದನು 6
ಪಾದ ಒತ್ತುತಾಮೋದ ಬಡಿಸಿದಾ ತಾನು | ಸಾಧು ಮುನಿಯನು 7
ಹರಿಯೆ ಪರನೆಲ್ಲಾ | ಹರಿಯ ಸರ್ವಜ್ಞಾಹರಿಗಿನ್ನಿಲ್ಲವೋ | ಸಮರು ಅಧಿಕರವಾ 8
ಎಂದು ಸ್ಥಾಪಿಸೀ | ತಾನು ಬಂದು ನಿಂತನುಛಂದದಿಂದಲಿ ಯಜ್ಞ | ಸಾಂಗಗೈಸಿದಾ 9
ಪದಸುಳ್ಹಾದಿಯಾ | ರಚಿಸಿ ಮೋದದಿಂದಲೀವೇದ ಸಾರವಾ | ಜನಕೆ ಬೋಧಿಸೀರುವಾ 10
ಪವನನಯ್ಯನಾ ಗುರು | ಗೋವಿಂದ ವಿಠಲನಾಸ್ತವನ ಮಾಡುತ ತಾನು | ಭವವ ಕಳದನಾ 11