ಒಟ್ಟು 547 ಕಡೆಗಳಲ್ಲಿ , 72 ದಾಸರು , 346 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮೂರುತಿಯ ತೋರಸೋ | ರಂಗಯ್ಯಾ ಪ ನಿನ್ನ ಮೂರುತಿಯ ತೋರಿಸೆನ್ನ ಕಂಗಳಿಗೆ ದಯ | ವನ್ನು ಬೀರಿ ಭವಭಯ ಬನ್ನವನು ಬಿಡಸೋ ರಂಗಯ್ಯಾ ಅ.ಪ. ಅರುಣನಖಾಂಗುಲಿ ಹೊಳೆವಾ | ಕೋಮಲ ಪಾದಾ| ಎರಡು ಜಂಘೆ ಜಾನುರವಾ |ಕಟಿ ಜಗದು | ದರನಾಭಿ ಸಿರಿವತ್ಸವಾ | ಕಂಬುಗ್ರೀವದ | ಕರಚತುಷ್ಟಯ ಮೆರೆವಾ | ಕರುನಗೆದಂತಾ | ಧರಮಿರುಪಕದಪುಶೃತಿ | ಅರಗಂಗಳನಾಸಾ | ಪೆರೆ ನೋಸಳಲಳಕದಾ ರಂಗಯ್ಯಾ 1 ಕೌಸ್ತುಭ ಕೇಯೂ | ರನ್ನು ತೋಳಬಂದಿ ಸ್ಪುರದಾ | ಕಡಗ ಮುದ್ರಾಂ | ಅಂದುಗೆ ಗೆಜ್ಜೆ | ನೀಲ ಪರಿ ಮಂದ ಮತಿಯೆನ್ನದೆ ಕರುಣಿಸಿ ರಂಗಯ್ಯಾ2 ನಿನ್ನ ಕಳೆಗಳ ತೋರಿಸಿ | ಹಮ್ಮಮತೆಯಾ | ಮನ್ನೀನವಗುಣ ಬಿಡಸೆ | ಸಂತರ ಕೈಯಾ | ಅನುದಿನ ಒಪ್ಪಿಸಿ | ಸನ್ನುತ ಮಹಿಪತಿ | ಚಿನ್ನನೊಡೆಯನೇ ಬಹ | ಜನ್ಮ ಜನ್ಮಾಂತರದಲಿ ತನ್ನವನೆಂದೆನಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವ ನಾನಲ್ಲವೇ ರಂಗಯ್ಯ ನನ್ನವ ನೀನಲ್ಲವೇ ಪ ನಿನ್ನವ ನಾನಲ್ಲವೆಂದರೆ ಬಿಡಲೊಲ್ಲೆ ಎನ್ನ ಕೈಬಿಡಲೊಲ್ಲೆ ಎಂಬುದ ನಾ ಬಲ್ಲೇ ಅ.ಪ ಧನವನು ಕೊಡಬೇಕೇ ರಂಗಯ್ಯ ಮನೆಮಠಗಳು ಬೇಕೇ ಕನಕಲಕ್ಷ್ಮಿ ವೈಕುಂಠವಿರಲ್ಕೆ ಧನ ಮನೆ ಮಠಗಳ ಯೋಚನೆಯೇಕೆ 1 ಜನಕನು ನೀನಲ್ಲವೇ ರಂಗಯ್ಯ ತನಯನು ನಾನಲ್ಲವೇ ತನುಮನಧನಗಳು ನಿನಗೇ ಸಲ್ಲವೇ ಎನಗಿರ್ಪುದು ನಿನ್ನ ಭಜನೆಯೊಂದಲ್ಲವೇ 2 ನನ್ನದೇನಿಹುದಯ್ಯ ರಂಗಯ್ಯ ನಿನ್ನದೇ ನಿಜವಯ್ಯ ನಿನ್ನ ಕೈಗೊಂಬೆ ನಾನಾಗಿಹೆನಯ್ಯಾ ಎನ್ನವ ನೀ ಮಾಂಗಿರಿಯ ರಂಗಯ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನೊಳಗಿರಿಸೆನ್ನ ಚಿತ್ತ ಚೆಲ್ವ ಪನ್ನಗಶಯನ ಶ್ರೀ ಆದಿರಂಗಯ್ಯ ಪ ಪರನನ್ನೊಳಗೆ ನಾ ಕಂಡು ನಿನ್ನೊಳಗೆ ನಾನೈಕ್ಯ ಇನ್ನೆಂದಿಗಾಗುವುದೊ ಇನಕುಲದ ಮಣಿಯೆ 1 ಎಂಟಾರರೊಳಗೆನ್ನ ಅಂಟಲೆಸಗೊಡಬೇಡ ಭಂಟನಾಗಿರು ವೈಕುಂಠನಾಯಕನೆ 2 ಕಾಕುಲದ ಕತ್ತಲೆಗೆ ನೂಕದಿರು ನೀಯೆನ್ನ ಏಕನಾಯಕನೆ ಕೇಳಿದು ಸತ್ಯಸಿದ್ಧಂ 3 ದೇಶಿಕಾಯೇನಮಃ ದಾಸನಗಿರುತಿರುವೆ ದೋಷರಹಿತಾಗುರುವು ಶ್ರೀತುಲಶಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ನೀ ತಂದೆ ನಾಕಂದನಯ್ಯ ರಂಗಯ್ಯ ಪ ಪಾತಕಿಯು ನಾನೆಂದೆ ಘಾತಕನು ನಾನೆಂದೆ ನೀತಿಗಳ ಕಲಿಸೆಂದೆನೈ ತಂದೆ ನಿನ್ನ ಹಿಂದೆ ಅ.ಪ ತಂದೆ ನೀ ಕರೆತಂದೆ ಎಂದು ನಂಬುತೆ ಬಂದೆ ತಂದೆ ನೀ ಕೈಬಿಟ್ಟು ಹಿಂದೆ ನಿಂದೆ ನಿಂದೆಯಲಿ ನಾನೊಂದೆ ಬಂದೆ ಭವದಲ್ಲಿ ಮಂದರೋದ್ಧಾರ ಗೋಪಾಲ ತಾಪವತಂದೆ 1 ಹಿಂದೆ ಜನ್ಮಂಗಳಲಿ ಬೆಂದು ಬಳಲಿದೆನಯ್ಯ ಇಂದು ನರಜನ್ಮದಲಿ ಬಂದೆನಯ್ಯ ಬಂಧು ಬಳಗವಕಾಣೆ ಕಂದು ಕುಂದಿದೆನಯ್ಯ ಇಂದೀವರಾಕ್ಷ ಸಾನಂದ ಭೈರವೀಪ್ರಿಯಾ2 ಮುಂದಿನಾ ಪಥವಾವುದೆಂದರಿಯೆ ಮದನಾಂಗ ಮಂದಮತಿಯನು ನೀಗಿಸೆಂದೆನುವೆ ರಂಗ ಬಂದ ಸುಖದು:ಖಗಳನೊಂದೆಣಿಸು ನೀಲಾಂಗ ಕರವ ಪಿಡಿ ಮೋಹನಾಂಗ 3 ಎಂದು ತವಪಾದಾರವಿಂದವನು ಸೇರಿಸುವೆ ಅಂದು ಜನ್ಮವು ಸಫಲವೆಂದು ನಂಬಿರುವೆ ಮುಂದೆ ಜನ್ಮಗಳಿಲ್ಲ ಎಂದು ನಾನಂಬಿರುವೆ ಸಂದೇಹವೇತಕೆ ನಿನ್ನ ಸೂತ್ರದೋಲ್ ಮೆರೆದೆ 4 ಮಂದಾಕಿನೀಜನಕ ನಂದಗೋಪನ ಕಂದ ಇಂದೀವರಾಕ್ಷ ಮುಚುಕುಂದವರದಾ ಎಂದೆಂದು ವಂದನೆಯ ಮಾಳ್ಪುದೆನಗಾನಂದ ಇಂದದನು ಕರುಣಿಸೈ ಮಾಂಗಿರಿಯ ಗೋವಿಂದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನೆ ಜಗದಾನಂದದಾಯಕ ರಂಗಾ ದೀನರಕ್ಷಕ ನೀನೊಬ್ಬನೇ ರಂಗಾ ಪ ಎನ್ನಂಥ ಶರಣಾರ್ಥಿ ಎಷ್ಟಾದರುಂಟಯ್ಯ ನಿನ್ನಂಥ ದಾತಾರ ಇನ್ನುಂಟೆ ರಂಗಾ ಅ.ಪ ಬಾಲನ ಪೊರೆದವನಾರಯ್ಯಾ ಪಾಂಚಾಲಿಗೆ ಒಲಿದವನಾರಯ್ಯ ಬಲುದೀನನು ನಾನೊಬ್ಬನಹುದಯ್ಯ1 ಮಾನ ನಿನ್ನದು ಪ್ರಾಣ ನಿನ್ನದು ಸ್ಮರನಯ್ಯ ನಾನು ನಿನ್ನವನೋ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನೆನ್ನೊಳಡಗಿದೆಯೊ ರಂಗಯ್ಯ ನಾನಿನ್ನೊಳಡಗಿಹೆನೆ ಪ ನೀನೆನ್ನೊಳಡಗಿಹುದೇನೂ ಅಚ್ಚರಿಯಿಲ್ಲ ನಾನಿನ್ನೊಳಡಗಿಹುದೆನೆ ಸಂದೇಹವಯ್ಯ ಅ.ಪ ಆತ್ಮಾರಾಮನು ನೀನು ರಂಗ | ನಿಜಾತ್ಮಪ್ರಕೃತಿ ನಾನು [ಆತ್ಮೋದ್ಧಾರಕ ನಿನ್ನಬಿಟ್ಟರಾನಿಲ್ಲವೋ ರಂಗ] 1 ಒಬ್ಬಳೆಂಜಲ ತಿಂದೆ ರಂಗ ನೀನೊಬ್ಬಳಿಗಕ್ಷಯವಿತ್ತೆ ಒಬ್ಬರೊಳು ಜನಿಸಿ ಮತ್ತೊಬ್ಬರೊಳು ಬೆಳೆದೆ ಇನ್ನೊಬ್ಬನಾನೊಬ್ಬ ಇನ್ನೊಬ್ಬರಿಲ್ಲವೋ ರಂಗ 2 ಕೊಡುವೆನೆನ್ನೊಳಗಿಹುದರಂಗಯ್ಯ ಹಿಡಿಯೆನ್ನ ಕರವ ಪಡೆವೆನದನೆ ಅಯ್ಯ ಕೊಡಬೇಡ ಜನುಮವ ತಡವೇಕೆ ಮಾಂಗಿರಿಯಯ್ಯ ನೀನೊಲಿದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ ಪ ಮಧುವೈರಿ ತಾಯಿಯಂದದಿ ಕಾಯೊ ಅ.ಪ ಏನಾಗುವ ಪ್ರೀತಿ ನಿನ್ನಿಂದ ಎನಗಯ್ಯ ಜ್ಞಾನಾದಿ ಆನಂದ ಸುಗುಣ ಸಿಂಧು ದೀನ ಬಾಂಧವ ನಿನ್ನಧೀನದವ ನಾನಯ್ಯ ನಿತ್ಯ ಪವಮಾನ ಹೃತ್ಸದನ 1 ವಿದ್ಯ ಬುದ್ಧಿ ಜ್ಞಾನ ಮನಕರಣ ಶಕ್ತಿ ಸದ್ಧೈರ್ಯ ಸುಖನಿಧಿಯು ನಿರ್ಭೀತ ಪದವಿ ಅದ್ವಯನೆ ನೀನೆನಗೆ ಅನಿಮಿತ್ತ ಬಂಧು ಹರಿ ಸಿದ್ಧಿಸೈ ಈ ಜ್ಞಾನ ಸರ್ವಕಾಲದಿ ದೇವ 2 ನಾನು ನನ್ನದು ಎಂಬ ದೋಷದ ಮಕರಿ ಗಾನೆ ಸಿಕ್ಕಿದ ತೆರದಿ ಮೊರೆಯುತಿಹೆನೊ ದಾನವಂತಕನೆ ಶ್ರೀ ಜಯೇಶವಿಠಲ ದೀನ ಕರಿಯನು ಪೊರೆದ ತೆರದಿ ಸಲಹೊ ಎನ್ನ 3
--------------
ಜಯೇಶವಿಠಲ
ನುಡಿ ಎನ್ನಪ್ರಿಯನಾ ನೀತಂದು ತೋರೆ ಸುಜ್ಞಾನೇ ಪ ಕನಸಿನೊಳಗ ಕಂಡ ಪರಿಯಾ ರೂಪವ ದೋರಿ| ನೆನವಿನೊಳಗಿಟ್ಟು ಮಯವಾದನೇ 1 ಅಂಗಯ್ಯ ಲಿಂಗದಂತೆ ಸುಲಭವಾಗಿ ನಮ್ಮ| ಸಂಗ ಸುಖವ ಬೀರಿದನೇನೇ 2 ಗುರುಮಹೀಪತಿ ಸುತಪ್ರಭು ಕರುಣಾಮೂರ್ತಿ| ತರಳೆಯ ತಪ್ಪ ನೋಡಬಹುದೇನೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡುವಾ ಬನ್ನಿರೆ ರಂಗಯ್ಯನ ನೋಡುವಾ ಬನ್ನಿರೇ ಪ. ಬೇಡಿಕೊಳ್ಳುವ ನಾವು ಅ.ಪ. ಕುಂಭಮಾಸದಲಿ ಭಕ್ತರು ಬಿಟ್ಟಾನಂದಮಂಟಪದಿನಿಂದು ಪೂಜೆ ಗೊಂ[ಬ] ಹರುಷದಿ ಮಂದಹಾಸದಿ ಬಂದ ಶ್ರೀರಂಗನ 1 ಹಂಸ ಯಾಳಿ ಸಿಂಹ ಆನೆಯು ಮೊದಲಾದ ಗರುಡ ಹನುಮ ಕಲ್ಪ ವೃಕ್ಷವು ಸರ್ಪವಾಹನವೇರಿ ಅರ್ಥಿಯಿಂದಲೆ ಬರುವ ಶ್ರೀರಂಗನ 2 ಶುದ್ಧದಶಮಿಯಲಿ ರಂಗಯ್ಯ ಮುದ್ದು ಸತಿಯರ ಒಡಗೊಂಡು ಅ ಲ್ಲಿದ್ದ ಮಂಟಪದಲಿ ಹರುಷದೀ ತಾನಿ[ದ್ದ] ಶ್ರೀರಂಗನ 3 ತೆಪ್ಪಮಂಟಪವ ಭಕ್ತರೆಲ್ಲ ವಿಸ್ತಾರದಲಿ ಕಟ್ಟಿ ಪತ್ನಿಸಹಿತಲೆ ತೆಪ್ಪವ ಹತ್ತಿ ಸುತ್ತಿಸುತ್ತಿ ಮೂರುಬಾರಿ ಬರುವ [ಶ್ರೀರಂಗನ] 4 ಮಧ್ಯಮಂಟಪದಿ ತಾನಿದ್ದು ಭಕ್ತರಿತ್ತ [ಸವಿಯಾದ] ಕ್ಷೀರವು ಉದ್ದಿನವಡೆ ಹುಗ್ಗಿ ಮೆದ್ದು ಬರುವ ಶ್ರೀಮುದ್ದುರಂಗನ 5 ಪುಷ್ಪಬಾಣಂಗಳು ಸುತ್ತಿಬಿಡುವ ಚಕ್ರಬಾಣಂಗಳು ನಕ್ಷತ್ರಬಾಣಂಗಳ ಲಕ್ಷ್ಮಿಯೆದುರಲರ್ತಿಯಿಂದಲೆ ನೋಡಿ ನಿಂದ ಶ್ರೀರಂಗನ 6 ತಾ ಕರುಣದಿಂದಲೆ ತೀರ್ಥಸ್ನಾನವನಿತ್ತು ಬರುವ ವೆಂಕಟರಂಗನ 7
--------------
ಯದುಗಿರಿಯಮ್ಮ
ನೋಡೆ ಕಣ್‍ದಣಿಯಾ ಪ ಪಾಡುವೆ ಪೊಗಳುವೆ ನೋಡುತ ನಲಿಯುವೆ ನೋಡೆ ಕಣ್‍ದಣಿಯಾ ಅ.ಪ ನೋಡೆ ಕಣ್‍ದಣಿಯಾ ನೋಡೆ ಕಣ್‍ದಣಿಯಾ 1 ನೋಡೆ ಕಣ್ ದಣಿಯಾ ನೋಡೆ ಕಣ್ ದಣಿಯಾ 2 ನೋಡೆ ಕಣ್ ದಣಿಯಾ ನೋಡೇ ಕಣ್ ದಣಿಯಾ 3 ನೋಡೆ ಕಣ್‍ದಣಿಯಾ ನೋಡೇ ಕಣ್ ದಣಿಯಾ 4 ನಾರದವಂದ್ಯನ ನೀರಜಪಾದಕೆ ಮಾಡೆ ವಂದನೆಯ ನೀರಜನೇತ್ರ ಮಾಂಗಿರಿಯ ರಂಗಯ್ಯನ ಪಾಡೆ | ಮನದಣಿಯಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪದುಮಾವತಿ ಕಾಂತ ಪ ಬ್ರಹ್ಮಾದ್ಯರ ತಾತ ಅ.ಪ. ನಿನ್ನ ದರ್ಶನವು ಸಂಸಾರ ಸಮೇತ | ಬೇಡನೆ ಜನವ್ರಾತ ಮನ್ನಿಸಲಿಲ್ಲವೊ ನಾನವರ ಮಾತ | ಪಾವನ ಶುಭಚರಿತ ನಾ ಮಾಡಿದೆ ಶಪಥ ಸದ್ಗುಣ ಗಣಭರಿತ 1 ದ್ವಿಜರಾಜ ವರೂಥ ಇದು ಏನಧಿಕವೊ ನಿನ್ನಸಮದಾತ | ರಿಲ್ಲವೊ ಶುಭಗಾಥ ಭವ ಶರಧಿಗೆ ಪೋತ ನಾಗಯ್ಯಾತ್ವರಿತ 2 ವತ್ಸರ ಪ್ರತಿಪದ ಬುಧಸಹಿತ ಊಧ್ರ್ವಪುಂಡ್ರವಿಡುತ ಏರಿದೆ ಪರುವತ ಸಿರಿ ನಿನ ಕಂಡೆವೊ ತಾತ 3 ಸುಕೃತ | ಈ ದಿನ ಒದಗುತ ಫಲವಾದುದಕೆ ನಾವೆಲ್ಲ ಬಹುಪ್ರೀತ | ರಾದೆವು ಶ್ರೀಕಾಂತ ಉತ್ಸವ ನೋಡುತ ಒಲಿದು ನಿನ್ನ ತೀರ್ಥಪ್ರಸಾದವ ಕೊಳುತ | ನಾವಿದ್ದೆವೊ ಸತತ 4 ತುಂಗ ವಿಕ್ರಮನೆ ರಣದೊಳು ನಿರ್ಭೀತ | ಬಲರಿಪು ಸಹಜಾತ ಗಾಂಡೀವಿಯ ಸೂತ ಗಂಗಾಜನಕನೆ ತ್ರಿಗುಣಾತೀತ | ಭುವನದಿ ವಿಖ್ಯಾತ ರಂಗೇಶವಿಠಲನೆ ನಾ ನಿನ್ನ ದೂತ | ಯದುಕುಲ ಸಂಭೂತ 5
--------------
ರಂಗೇಶವಿಠಲದಾಸರು
ಪಾದ ಪ ಪಾದ ಪಾದ ಪಾದ 1 ಸರಸಿಜೋದ್ಭವ ವಂದ್ಯ ಪಾದಪುರಹರ ನಮಿತ ಪರಿಪೂರ್ಣ ಪಾದನರಗೆ ಸಾರಥಿಯಾದ ಪಾದಕೌರವ ಮೂಲ ಮುರಿದಿಟ್ಟ ಪಾದ2 ದಿವಿಜರಾಜನಿಗೊಲಿದ ಪಾದಅವಿವೇಕಿ ದಾನವರ ಕೊಂದ ಪಾದಬುವಿ ಗಯಾಪುರ ಶ್ರೇಷ್ಠ ಪಾದಭವ ಹಿಂಗಿಪಾದಿಕೇಶವ ಪಾದ3
--------------
ಕನಕದಾಸ
ಪಾದಾನಂಬು ಮನವೇ|ಶ್ರೀರಂಗಯ್ಯನ| ಪಾದಾನಂಬು ಮನವೇ ವೇದಕಗೋಚರವಾದಾ ಪ ಹೆಜ್ಜೆಯರಡರೊಳು ಮೂಜಗವಡಗಿಸಿ| ನಿರ್ಜರ ನದಿಯ ಪಡೆದಾ 1 ಬಿಸಜಾಸಖಾ-ತನುಜ ಎಸಿಯೇ ವಾಸು ಕೀಶರಾ| ವಾಸವ ಜನ ಕಾಯ್ದಾ2 ಪಲವು ಕಾಲದಿ ಮುನಿ ಮುಳಿದ ಕಾರಣದಿಂದ ನೆಲದೊಳು ಶಿಲೆಯಾದ ಲಲನೆಯ ನುದ್ದರಿಸಿದ 3 ಮದವೇರಿ ಕುರುರಾಯ ಮೊದಲೇ ತಾಏಳದಿರೆ| ಬುಧಜನ ನೋಡಲಾಗ ವದಗ ದುರುಳಿಸಿದಾ 4 ಇಂದು ಧರಜರಕೈಯ್ಯಾ ಮದನೆಯನು ಕೊಳುವಾ| ತಂದೆ ಮಹಿಪತಿ ಸ್ವಾಮಿ ನಂದನ ಜೀವನವಾದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾರುಗಾಣವುದೆಂದಿಗೊ ರಂಗಯ್ಯ ಪ ಘೋರಾಹಂಕಾರವ ಬಿಟ್ಟು ನಿನ್ನಯಪಾದ ಸೇರುವುದಿನ್ನೆಂದಿಗೊ ಅ.ಪ ಬಿಟ್ಟುಬಿಡುವುದೆಂದಿಗೆ 1 ವಾಸುದೇವನೆ ನಿಮ್ಮ ಪಾದಾರವಿಂದದೊಳು ವಾಸವಾಗುವದೆಂದಿಗೊ 2 ಸಮವ ಮಾಡುವುದೆಂದಿಗೊ 3 ತಟ್ಟನೆ ಸೇರಿಸಯ್ಯ 4 ಭಕ್ತಿನಾಮವನು ಕೊಡಿಸಯ್ಯ 5
--------------
ಯದುಗಿರಿಯಮ್ಮ
ಪಾಲಯಮಾಂ ಪರಮೇಶಚಿತಕಾಲಿ ಸಂತತಮಂಬಿಕೇಶಭೂರಿಲೀಲ ಶಂಕರವಿಯತ್ಕೇಶಕರುಣಾಲಯಹೃತಪಶುಪಾಶಧೃತಶೂಲ ವಿಶಾಲ ಕಪಾಲ ಕರಾಲಕಂ-ಕಾಲಿಕಾಕೂಲ (?) ವಿಲೋಲಾಸ್ಥಿಮಾಲಾ ಪ ವಾರಣಾಸುರ ಚರ್ಮಚೇಲಸುರವಾರಸೇವಿತ ಗಾನಲೋಲಭಕ್ತಾಧಾರ ಸಕಲ ಜಗನ್ಮೂಲನಿರ್ವಿಕಾರ ಮೃಕಂಡು ಕಸಾಲಹಾರ ಹೀರ ಮಂದಾರ ಪಟೀರ ನೀಹಾರಗೋಕ್ಷೀರ ಕರ್ಪೂರ ಸುಧಾರಸಗೌರ1 ವ್ಯೋಮತರಂಗಿಣೀಜೂಟಜಿತಕಾಮಪಾಲಿತ ಸರ್ವಖೇಟವಿತತಾಮಲಾಂಬರ ಪುಷ್ಪವಾಟರಘುರಾಮಪೂಜಿತ ಪಾದಪೀಠಪೂರ್ಣಕಾಮಾತಿಧಾಮಾಭಿರಾಮ ನಿಸ್ಸೀಮಸುತ್ರಾಮ ಮುಖ್ಯಾಮರಸ್ತೋಮಲಲಾಮ 2 ಗೋಪತಿರಾಜಿತುರಂಗಘೋರಪಾಪಾಂಧಕಾರಪತಂಗದಿವ್ಯತಾಪಸಹೃದಯಾಬ್ಜಭೃಂಗವಿಶ್ವವ್ಯಾಪಕನಿಗಮಾಂತರಂಗಯಾಮಿನಿಪಕಲಾಪಾದ್ರಿಚಾಪರಮಾಪತಿರೂಪನಿರ್ಲೇಪ ಕೆಳದಿ ರಾಮೇಶ ಚಿದ್ರೂಪ 3
--------------
ಕೆಳದಿ ವೆಂಕಣ್ಣ ಕವಿ