ಭೂಷಣವಿದು ಭೂಷಣ ಕೇಶವಧ್ಯಾನ ಪಭೂಷಣವದನಾ ವಿಭೀಷಣ ಧರಿಸುತೆನಾಶರಹಿತ ಪೌರುಷವಾಂತ ಧರಣಿಯೊಳು ಅ.ಪಶೇಷಶಯನನಾಮ ಭೂಷಣದೋಷರಹಿತ ಶಿರೋಧಿ ಭೂಷಣಶ್ರೀಶ ವಿಠ್ಠಲನಾಮ ಭೂಷಣಶೇಷಫಣಿಮಣಿಧೃತ ಭೂಷಣ1
ಕರಯುಗಗಳ ಭೂಷಣ ಹರಿಪೂಜೆಯುಶಿರಕೆ ವಂದನೆ ಭೂಷಣಹರಿಪಾದದರ್ಶನ ವರನೇತ್ರಭೂಷಣವರಕ್ಷೇತ್ರಸಂಚಾರ ಚರಣಕೆ ಭೂಷಣ 2
ಹರಿಯ ಚರಿತೆಯು ಕರ್ಣಭೂಷಣಹರಿತುಳಸಿ ನಾಸಿಕಕೆ ಭೂಷಣಹರಿಯ ಕೊಂಡಾಡುವುದೆ ರಸನೆಗೆ ಭೂಷಣಹರಿಯ ಭಜನೆಯು [ಜಿಹ್ವಾಭೂಷಣ] 3
ಧರೆಯೊಳು ಜನಿಸಿದ ಮಾನವರಿಗೆಹರಿನಾಮವೆ ಭೂಷಣಾಸಿರಿರಮಣನಾಮ ಕಿರೀಟವಯ್ಯವರದನೆಂಬುವನಾಮ ವರಕರ್ಣಾಭರಣವು 4
ಗಂಗಾಜನಕನೆಂಬ ನಾಮವೆ ಅಂತರಂಗಕೆ ಮಣಿಭೂಷಣಾರಂಗನೆಂಬುವ ನಾಮ ಹಸ್ತಸಿಂಗರದ ಪೀತಾಂಬರವು ತಾಮಾಂಗಿರೀಶನ ನಾಮ ಮಂಗಳಕರ ಭೂಷಣವೈ 5