ಒಟ್ಟು 385 ಕಡೆಗಳಲ್ಲಿ , 76 ದಾಸರು , 337 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುರಂದರದಾಸರು ಜಿಪುಣರೈ ನೀವೆಂದು ಹೇಳಿದುದು ಸುಳ್ಳಲ್ಲ ಪ ಪುರಂದರ ದಾಸಮಲ್ಲ ಅ.ಪ. ಘನತರದ ವೈರಾಗ್ಯ ತಳೆದು ದ್ವಿಜರಿಗೆಲ್ಲಧನಕನಕ ಸಂಪತ್ತು ದಾನ ಮಾಡಿದರೆಲ್ಲವನಜನಾಭನ ಸ್ತುತಿಗೆ ಶಬ್ದ ಸಂಪತ್ತೆಲ್ಲಒಸೆದು ನೀವೇ ಬಳಸಿ ನನಗೇನು ಕೊಡಲಿಲ್ಲ 1 ಖಂಜೂತನದ ಕಥೆಯನು ಹೇಳಲಾಸಲ್ಲಕಂಜನಾಭನ ಮಹಿಮೆ ಬಣ್ಣಿಸುವ ನೆವದಲ್ಲಿರಂಜನೆಯ ಶಬ್ದಗಳ ಸವಿದುಂಡೆಯಲ್ಲಿಎಂಜಲವನುಳಿದೆನಗೆ ಕಿಂಚಿತ್ತು ಬಿಡಲಿಲ್ಲ 2 ಕೃಪೆಮಾಡಿ ಕ್ಷಮಿಸುವುದು ವಿಪುಲ ಭಕ್ತಿಗಳಿಂದಜಪತಪದಿ ಕನ್ನಡದ ನಿಮ್ಮ ಭಾರತಮಲ್ಲ ಕೃಪಣವತ್ಸಲ ಗದುಗು ವೀರನಾರಾಯಣನ ಸಫಿಲ ಜ್ಞಾನವ ಗಳಿಸಿ ನಮಗೇನು ಕೊಡಲಿಲ್ಲ 3
--------------
ವೀರನಾರಾಯಣ
ಪ್ರಥಮಾಂಗ | ಪ್ರಥಮಾಂಗ ಪೃಥ್ವಿಸುರಾರ್ಚಿತ | ಅತುಳ ಮಹಿಮ ಗುರು ಪ ದಶವರೂಢನ ಕುಶಲವ ತ್ವರಿತದಿ ವಸುಧಿಜೆಗರುಹಿದ | ಅಸಮಚರಿತ ಗುರು 1 ಕುಂಜರ ಪುರಪತಿ | ಭಂಧನ ಭಾವಿ ಕಂಜಜ ಕಾಯೊ ಮೃತ್ಯುಂಜಯವಂದಿತ 2 ಅಧಮಾದ್ವೈತರ | ಮದವಳಿಯಲು ನಡು ಸದನನ ಸುದತಿಯ | ಉದರೊಳುದಿಸಿದ 3 ನಿಕರ ತರಿದ ಪಾ | ವಕ ಸಖ ವೃಕೋಪದರ | ಸುಖ ತೀರ್ಥರಗುರು 4 ಹೇಮೋದರಪಿತ | ಶಾಮಸುಂದರನ ಪ್ರೀತ ಪ್ರೇಮದ ಸುತ | ಸುತ್ರಾಮನಮಿತ ಗುರು 5
--------------
ಶಾಮಸುಂದರ ವಿಠಲ
ಪ್ರಾಣದೇವನ ನಮಿಪೆ ನಮೋ ಪ್ರಾಣಕಧೀಶನೆ ಶರಣು ನಮೋ ಕಾಣಿಸು ಹರಿಯಂಘ್ರಿಯನು ನಮೋ ಪ್ರಾಣ ಪಂಚÀರೂಪಾತ್ಮ ನಮೋ ಪ. ಅಂಜನೆ ಆತ್ಮಜ ಕುವರ ನಮೋ ಸಂಜೀವನ ಗಿರಿ ತಂದೆ ನಮೋ ನಂಜುಂಡನ ಪ್ರಿಯ ಜನಕ ನಮೋ ಕಂಜಾಕ್ಷನ ದಾಸಾರ್ಯ ನಮೊ1 ಆಪ್ತವರ್ಗ ನಿರ್ಧೂತ ನಮೋ ಶಕ್ತ ಜರಾದಿ ಹಂತ ನಮೋ ತಪ್ತಕಾಂಚನ ಸುದೀಪ್ತ ನಮೊ 2 ಏಕವಿಂಶತಿ ಮತಧ್ವಂಸ ನಮೋ ಶ್ರೀಕಳತ್ರಪ್ರಿಯ ಪಾತ್ರ ನಮೋ ಏಕ ಚತುರ ನವಗ್ರಂಥ ನಮೋ ಜೋಕೆಯಿಂದ ನಿರ್ಮಿಸಿದೆ ನಮೋ 3 ಮುಕ್ತ ಜೀವರ ಸ್ತುತ್ಯ ನಮೋ ಯುಕ್ತಿವಂತ ಜಗದ್ವ್ಯಾಪ್ತ ನಮೋ ಶಕ್ತಿವಂತ ಶುದ್ಧಾತ್ಮ ನಮೋ ಭಕ್ತಭರಿತ ಹರಿಪ್ರೀತ ನಮೋ 4 ನಮೋ ನಮೋ ಶ್ರೀಗೋಪಾಲ ಕೃಷ್ಣವಿಠ್ಠಲನಿಗೆ ಪ್ರಿಯಬಾಲ ನಮೋ ನಮೋ ಶ್ರೀ ಭಾರತಿಲೋಲ ನಮಿಸುವೆ ಚಳ್ಳಕೆರೆಯ ಪಾಲ 5
--------------
ಅಂಬಾಬಾಯಿ
ಪ್ರಾಣನಾಥ ನಮಾಮಿ ಸಾಷ್ಟಾಂಗ ಪಾತುಮಾಂ ಪವಮಾನಿ ಕೃಪಾಂಗ ಪ. ದಾತಾರ ರಘುನಾಥದೂತ ವಿಖ್ಯಾತ ಸೀತಾಮಾತಾಪದಾಬ್ಜ ಪ್ರಣೀತಾ- ನೇಕವಾನರಯೂಥ ಸುಶೀಲ ಭೂತಳ ಭೂರಿಜೀವನಪಾಲ 1 ಆಂಜನೇಯ ಸುರಂಜನ ಮೂರ್ತಿ ಕಂಜನಾಭದಾಶ್ರಯವರ್ತಿ ಭಂಜನಾಸುರನಿಕರ ನಿರ್ಲೇಪ ರಂಜನಾತ್ಮ ನಿರಂಜನರೂಪ 2 ಕರಕೃತಾಂಜಲಿಮನೋಹರ ಶುಭಕಾಯ ವರ ಲಕ್ಷ್ಮೀನಾರಾಯಣ ಪ್ರೀಯ ಪರಮ ಪಾವನ ನೇತ್ರಾವತಿ ನದೀತೀರ ವರ ಮಣಿಪುರಮುಖ್ಯ ಪ್ರಾಣ ಸಾಕಾರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಫಲಾಹಾರವ ಮಾಡೊ ಪರಮಪುರುಷನೆ ಲಲನೆ ಲಕುಮಿಯ ಕರಕಂಜದಿಂದ ಪ. ಕದಳಿ ಕಾಮಾರೆ ಖರ್ಜುರ ಕಿತ್ತಳೆ ಕಂಚಿ ಬದರಿ ಬೆಳಲು ಬಿಕ್ಕೆ ಹಲಸು ದ್ರಾಕ್ಷಿಗಳು ಮಧುರಮಾವು ಮಾದಳ ತೆಂಗಿನಕಾಯಿ ತುದಿಮೊದಲಾದ ಪರಿಪರಿ ಫಲಗಳು 1 ಉತ್ತತ್ತೆ ಜೇನು ಅಂಜೂರ ಸೇಬು ದಾಳಿಂಬೆ ಮತ್ತಾದ ತುಮರೆ ಪರಗಿ ಕಾರೆ ಕವಳಿ ಕತ್ತರಿಸಿದ ಕಬ್ಬು ಜಂಬುನೇರಳೆಹಣ್ಣು ಒತ್ತಿದ ಬೇಳೆ ನೆನೆಗಡಲೆ ಕರ್ಬುಜೀಹಣ್ಣು 2 ಹಾಲು ಸಕ್ಕರೆ ಬೆಣ್ಣೆ ತುಪ್ಪ ಸೀಕರಣೆಯು ಸಾಲುರಸಾಯನ ಸವಿಯೆಳನೀರು ಮೂಲೋಕದೊಡೆಯ ಹಯವದನ ವೆಂಕಟರೇಯ ಪಾಲಿಸೊ ಲಕುಮಿಯ ಕರಕಂಜದಿಂದ 3
--------------
ವಾದಿರಾಜ
ಬಂಟನಾಗಿ ಬಾಗಿಲ ಕಾಯ್ವೆ ಹರಿಯ ಪ ವೈಕುಂಠದ ಸೊಂಪಿನ ದಾಸರ ಮನೆಯ ಅ ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆಬರುವ ಹೋಗುವರ ವಿಚಾರಿಸುತಿರುವೆಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀಹರಿಯ ಸಮ್ಮುಖದ ಓಲಗದೊಳಿರುವೆ 1 ತೊತ್ತು ತೊಂಡನಾಗಿ ಬಾಗಿಲ ಕಾಯ್ವೆಚಿತ್ರದ ಚಾವಡಿ ರಜವನು ಬಳಿವೆಮುತ್ತಿನ ರಂಗವಲ್ಲಿಯನಿಟ್ಟು ಬರೆವೆರತ್ನಗಂಬಳಿ ಹೊತ್ತು ಹಾಸುವೆನು 2 ವೇಳೆವೇಳೆಗೆ ನಾನೂಳಿಗವ ಮಾಡುವೆಆಲವಟ್ಟಿಗೆ ಚಾಮರವ ಬೀಸುವೆತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀಲೋಲನ ಕೊಂಡಾಡಿ ಪಾಡುವೆನು 3 ಎಂಜಲ ಹರಿವಾಣಂಗಳ ಬೆಳಗುವೆಕಂಜನಾಭನ ಪಾದಕಮಲವ ತೊಳೆವೆರಂಜಿಪ ಕುಸುಮದ ಮಾಲೆ ತಂದಿಡುವೆಸಂಜೆಗೆ ಪಂಜಿನ ದಾಸನಾಗಿರುವೆ 4 ಮೀಸಲೂಳಿಗವ ನಾ ಮಾಡಿಕೊಂಡಿರುವೆಶೇಷ ಪ್ರಸಾದವ ಉಂಡುಕೊಂಡಿರುವೆಶೇಷಗಿರಿ ಕಾಗಿನೆಲೆಯಾದಿಕೇಶವನದಾಸರ ದಾಸರ ದಾಸರ ಮನೆಯ 5
--------------
ಕನಕದಾಸ
ಬಡವನ ಮನೋರಥ ಪೂರೈಸು ಸಿರಿಕೃಷ್ಣ ಒಡೆಯ ನೀನಲ್ಲದೆ ಪೂರೈಸುವರಿಲ್ಲ ಪ ಕಿವಿಯು ನೀಡಿದುದಕೆ ಎನಗೊಮ್ಯಾದರು ಮನೋ ಕುವರಿಯ ಭೃತ್ಯತನ ಕೊಡು ಕಂಡ್ಯ ಸುವಿಮಲತರ ಮತಿಯಾದ ವಿಷ್ಣುರಾತೋ ದ್ಭವನ ಬಳಿಯಲೊಮ್ಮೆ ನಿಲಿಸಯ್ಯಾ ಹರಿಯೆ 1 ನಯನವು ಕೊಟ್ಟದಕೆ ಎನ್ನೊಮ್ಮೆ ರಣದಿ ವಿ ಜಯನ ಬಳಿಯಲೊಮ್ಮೆ ನಿಲಿಸಯ್ಯಾ ಭಯದಿ ಸೂತರ ಸುಮ್ಮನಿಹ ಭೀಷ್ಮಕ ಕುರುಪ ತಿಯರ ಸಭೆಯಲೊಮ್ಮೆ ನಿಲಿಸಯ್ಯ ಹರಿಯೆ 2 ರಸನವು ಎನಗಿನ್ನು ಕೃಪೆಮಾಡಿದುದಕೆ ಗೋ ರಸವ ಕದ್ದು ಮೆಲುವ ಕಾಲದಲ್ಲಿ ಇಸಕೊಂಬ ಗೋವಳರ ಒಳಗೆ ಎನ್ನನು ಒಬ್ಬ ಶಿಶುವಿನ ಮಾಡಿ ಪುಟ್ಟಿಸು ಕಂಡ್ಯ ಹರಿಯೆ 3 ಎನಗೆ ತ್ವಗೇಂದ್ರಿಯವ ದಯಮಾಡಿದದಕಿನ್ನು ಕರ ಕಂಜರದಿ ಅನುವಾದಿಷ್ಟಕ ಭಾವ ಸರಯು ಯಮುನಾ ತೀರ ಜನಿತವಾಳುಕ ಭಾವವನು ಕೊಡು ಹರಿಯೆ 4 ನಾಶಿಕವು ಇತ್ತದಕೆ ಗೋಪಿಯ ವಿಹಾರದಿ ವಾಸುದೇವವಿಠಲ ನಿನ್ನ ಕೊರಳೊಳಿದ್ದ ಸೂಸಿ ಬಿದ್ದ ಮಾಲಿಕೆಯ ಕುಸುಮಂಗಳ ಬಲು ವಾಸನ ಲÉೂೀಲುಪ ಮಧುಕರ ಭಾವ ನೀಡೊ 5
--------------
ವ್ಯಾಸತತ್ವಜ್ಞದಾಸರು
ಬಣ್ಣಿಸಲಳವಲ್ಲ ನಿಮ್ಮ ಪ್ರ ಸನ್ನ ಮೂರುತಿ ಯಲಗೂರ ವಾಸ ಹನುಮಾ ಪ ಅಂಜನಿಯುದರದಲಿ ಜನಿಸೀ ತೇಜ ಪುಂಜ ರಾಮನ ಸೇವೆಯಲಿ ಮನನಿಲಿಸಿ ಕಂಜ ಛವನ ಪಟ್ಟ ಧರಿಸಿ ಬಲು ರಂಜನೆ ಮೆರೆದ ಭಕ್ತಾಗ್ರಣಿಯೆನಿಸಿ 1 ಜ್ಞಾನ ಭಕುತ ವೈರಾಗ್ಯದಲಿ ಸರಿ ಉರಗ ಲೋಕದಲಿ ಮಾನನಿಧಿಯೇ ವಿಕ್ರಮದಲಿ ಚರ ಣಾಗತೆ ರಕ್ಷಕ ನೇಮ ಬರದಿರಲಿ2 ಮೂರವ ತಾರದಿ ಬಂದು ದೀನೋ ದ್ಧಾರಣ ಮಾಡಿದೆ ಸದ್ಬೋಧ ಗರದು ಕಾರುಣಿ ಗುರುವಾಗೆಂದೆಂದು ಸಹ ಕಾರದಿ ಮಹಿಪತಿ ಸುತಗೊಲಿದಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರಯ್ಯ ಕೃಷ್ಣ ಬಾರೈ ಬಾಹದಿದ್ದಡೆಕಾರುಣ್ಯನಿಧಿಯೆಂಬ ಕಥೆಯ ಅ-ದಾರು ಬಣ್ಣಿಪರು ವೇದಾಂತದೇವಿಯರೆಮ್ಮದೂರುವರೀಗೆ ಪ. ಕುಂಜರವರದ ನೀಲಾಂಜನವರ್ಣ ನೀಕಂಜನೇತ್ರನೆ ಕಾಮನಯ್ಯಮಂಜುಳಮೂರ್ತಿ ಮನೋಹರಕೀರ್ತಿ ಪ್ರ-ಭಂಜನನೊಡೆಯ ಬಾರೊ 1 ಮಂದರಗಂಧದ ಮಂದಮಾರುತ ಬಂದಚಂದಿರಮುಡಿದ ಚದುರಬಂದಕಂದರ್ಪನರವಿಂದನೆಂಬ ಕಣೆಯ ತೊಟ್ಟ ಮಂದರಧರನೆ ಬಾರೊ2 ನೋಡುವೆ ನುಡಿಸುವೆ ಪಾಡುವೆ ಬಯಕೆಯಬೇಡುವೆ ಹಯವದನನಮಾಡುವೆ ಪೂಜೆಯ ಕೂಡುವೆ ನಿನ್ನೊಡ-ನಾಡುವೆನೊ ಬೇಗನೆ ಕಾಡದೆ ಬೇಗ ಬಾರೊ 3
--------------
ವಾದಿರಾಜ
ಬಾರೆನ್ನ ಸಖಿಯೇ ಕರೆದು ತೋರಿಸೇ ಪ ಕರೆದು ತೋರಿಸೇ ಕಂಜನಯ್ಯಾನಾ| ಕರಿವರ ದಾಯಕ ಕರುಣಾ ಸಾಗರನಾ 1 ಸರಸಿಜ ಲೋಚನ ಮುಕುಟ ಕುಂಡಲನಾ| ಕೌಸ್ತುಭ ಕೇಯೂರ ಧರನಾ 2 ಮದನ ಶರಕ ಗುರು ಮಾಡುವರೇನೇ| ಮಧುಹರ ಮುನಿವದು ಉಚಿತ ವೇನೇ 3 ಒಂದರಗಳಿಗೆಯ ಮರೆದಿರ ಲಾರೆ| ಇಂದು ನೀ ಧನ್ಯಳ ಮಾಡಲೆ ನೀರೆ4 ಬೆರೆದು ಬಿಡುವನಲ್ಲಾ ಸಕಲಂತರ್ಯಾಮಿ| ನೆರೆದನು ಗುರು ಮಹಿಪತಿ ಸುತಸ್ವಾಮಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೊ ಮಹೇಶತನಯ ಗಣೇಶ ವರ ವಿಷ್ಣುಪದಕÀಭಿಮಾನಿ ವಿಘ್ನೇಶ ಪ ನಿನ್ನ ಪೂಜಿಸಿ ಧರ್ಮರಾಜನು ಗೆದ್ದ ನಿನ್ನ ಪೂಜಿಸದೆ ದುರ್ಯೋಧನ ಬಿದ್ದ ನಿನ್ನ ಪೂಜಿಸಿ ರಾಮ ಸತಿಯನೆ ಪಡೆದ ನಿನ್ನನರ್ಚಿಸದ ದಶಕಂಠನು ಕೆಟ್ಟ 1 ಸುರಮುಖ್ಯರೆಲ್ಲರು ನಿನ್ನ ಪೂಜಿಪರು ಪರಮಾತ್ಮನಿಗೆ ನೀನು ಮರಿಮಗನಿರುವಿ ಸುರಮುನಿ ದಿತಿಜಾದಿಗಳಿಗತಿಪ್ರಿಯನೆ ಸರುವರಿಂದಲು ಮೊದಲು ಪೂಜೆಗೊಂಬನೆ 2 ರಾಜೀವಾಕ್ಷಗೆ ಸತ್ಯಾದೇವಿಯೊಳ್ಜನಿಸಿ ಮೂಜಗದಲಿ ನೀನು ಪೂಜ್ಯನೆಂದೆನಿಸಿ ಕಂಜಜತನಯನ ಹೆಮ್ಮಗ ಕಂಡ್ಯಾ 3
--------------
ವಿಶ್ವೇಂದ್ರತೀರ್ಥ
ಬಾರೊ ಹನುಮ ಬಾರೊ ಭೀಮ ಬಾರೊ ಮಧ್ವಮುನಿಪ ಪ. ಬಾರೊ ರಾಮಕೃಷ್ಣ ವೇದವ್ಯಾಸರ ಪ್ರಿಯ ಭಕ್ತ ಅ.ಪ. ಅಂಜನೇಯ ಸುತನು ಆಗಿ ಸಂಜೀವನ ಗಿರಿಯ ತಂದೆ ಕಂಜಲೋಚನೆಯ ವಾರ್ತೆ ಮಂಜುಭಾಷಣ ರಾಮನಿಗರುಹಿದೆ 1 ಪಾಪಿ ಕೌರವ ಕುಲವ ಕೊಂದು ದ್ರೌಪದಿಯ ಕಾಯ್ದ ಮಹಿಮ ಶ್ರೀಪತಿ ಶ್ರೀ ಕೃಷ್ಣನ ಭಜಿಸಿದ ಭೂಪ ಭೀಮಸೇನ ಬೇಗ 2 ಭೂಸುರ ಜನ್ಮದಲಿ ಬಂದು ಆಸೆಯಿಂದ ಆಶ್ರಮ ಕೊಂಡು ದೋಷಿ ಅನ್ಯಮತವ ಮುರಿದು ಭೂಸುರರ ಕಾಯ್ದ ಮಧ್ವ 3 ಸಕಲ ಸುಜನರ ಸೇವೆ ಕೊಂಡು ಮುಕುತಿಮಾರ್ಗಪ್ರದ ನೀನಾಗಿ ಭಕುತಿಮಾರ್ಗವ ತೋರಿ ಎನ್ನ ಹೃತ್ಕಮಲ ಮಧ್ಯದಲಿ ನಿಲ್ಲೊ 4 ಗೋಪಾಲಕೃಷ್ಣವಿಠ್ಠಲನ ರೂಪ ನೋಡುವ ಕೃಪೆಯ ಮಾಡೊ ಶ್ರೀಪತಿ ಶ್ರೀ ಶ್ರೀನಿವಾಸಗೆ ನೀ ಪ್ರೀತಿಕರನೆಂದು ನಮಿಪೆ 5
--------------
ಅಂಬಾಬಾಯಿ
ಬಾರೋ ಬೇಗ ತೋರೋ ಮುಖವನು ನಿನ್ನ ಬಾರಿಗೆ ಬಿದ್ದೆನು ಪಾರಗಾಣಿಸೊ ಪ ಅಂಗಜನಯ್ಯಾ ಭುಜಂಗ ಶಯನಾ ಶ್ರೀ ರಂಗ ಎನ್ನಾ ಅಂತರಂಗಕ್ಕೆ ನೀ 1 ಕಂಜಲೋಚನ ನಾ ನಿನಗಂಜಲಿ ಮುಗಿಯುವೆ ಕುಂಜರೇಶ ವರದ ಭುಜಂಗ ಶಯನ2 ಘನ್ನಮಹಿಮ ಸನ್ಮತಿಯ ಪಾಲಿಸು ಪ್ರ ಸನ್ನ ಪ್ರಾಣನಾಥ ವಿಠಲರಾಯನೆ 3
--------------
ಬಾಗೇಪಲ್ಲಿ ಶೇಷದಾಸರು
ಬಾರೋ ವೆಂಕಟಗಿರಿನಾಥ| ದಯ- ದೋರೈ ಭಕುತರ ಪ್ರೀತ ಪ. ಮಾರಪಿತ ಗುಣಹಾರ ಮಂದರ- ಧಾರ ದೈತ್ಯಸಂಹಾರ ಸುಜನೋ ದ್ಧಾರ ಮಮಹೃದಯಾರವಿಂದಕೆ ಬಾರೋ ಕೃಪೆದೋರೋ ವೆಂಕಟ ಅ.ಪ. ವೃಷಭಾಸುರನೊಳು ಕಾದಿ ಸಾ- ಹಸವ ಮೆರೆಸಿದ ವಿನೋದಿ ವಶಗೈದು ದೈತ್ಯನ ಶಿರವ ಕತ್ತ- ರಿಸುತಲಿ ನೀನಿತ್ತೆ ವರವ ವಸುಧೆಯೊಳಗಿಹ ಸುಜನರನು ಮ- ನ್ನಿಸುತಲಿಷ್ಟವನಿತ್ತು ಕರುಣಾ- ರಸದಿ ಸಲಹುವ ಬಿಸಜನಾಭ ಶ್ರೀ- ವೃಷಭಾಚಲವೊಡೆಯ ವೆಂಕಟ 1 ಅಂಜನೆಯೆಂಬಳ ತಪಕೆ ಭಕ್ತ- ಸಂಜೀವನೆಂಬ ಶಪಥಕೆ ರಂಜಿಪ ಪದವಿತ್ತೆ ಮುದದಿ ಖಿಲ- ಭಂಜನಮೂರ್ತಿ ಕರುಣದಿ| ಮಂಜುಳಾಂಗ ಶ್ರೀರಂಗ ಸುರವರ ಕಂಜಭವವಿನುತಾದಿ ಮಾಯಾ- ರಂಜಿತಾಂಘ್ರಿ ಸರೋರುಹದ್ವಯ ಅಂಜನಾಚಲವೊಡೆಯ ವೆಂಕಟ 2 ಶೇಷನ ಮೊರೆಯ ತಾ ಕೇಳಿ ಬಲು ತೋಷವ ಮನಸಿನೊಳ್ತಾಳಿ ದೋಷರಹಿತನೆಂದೆನಿಸಿ ಕರು- ಣಾಶರಧಿಯ ತಾನೆ ಧರಿಸಿ ಶ್ರೀಶ ಹರಿ ಸರ್ವೇಶ ನತಜನ- ಪೋಷ ದುರ್ಜನನಾಶ ರವಿಶತ- ಭಾಸ ಕೌಸ್ತುಭಭೂಷ ವರ ಶ್ರೀ- ಶೇಷಾಚಲವಾಸ ವೆಂಕಟ 3 ಮಾಧವವಿಪ್ರ ವಿರಹದಿ ಭ್ರಷ್ಟ ಹೊಲತಿಗಳನು ಸೇರ್ದ ಮುದದಿ ಸಾದರದಲಿ ನಿನ್ನ ಬಳಿಗೆ ಬರೆ ನೀ ದಯಾನಿಧಿ ಕಂಡು ಅವಗೆ ಶೋಧಿಸುತ ಪಾಪಗಳೆಲ್ಲವ ಛೇದಿ ಬಿಸುಡುತ ನಿಂದು ವೆಂಕಟ- ಭೂಧರದ ನೆಲೆಯಾದ ನಾದವಿ- ಭೇದಬಿಂದು ಕಲಾದಿಮೂರುತಿ 4 ಧನಪತಿಯೊಳು ತಾನು ಸಾಲ ಕೊಂಡ ಘನಕೀರ್ತಿಯಿಂದ ಶ್ರೀಲೋಲ ವನಿತೆ ಪದ್ಮಾವತಿಪ್ರೀತ ಭಕ್ತ- ಜನಸುರಧೇನು ಶ್ರೀನಾಥ ವನಧಿಶಯನ ಮುರಾರಿ ಹರಿ ಚಿ- ಧ್ವನಿನಿಭಾಂಗ ಸುಶೀಲ ಕೋಮಲ ವನಜನಾಭ ನೀಯೆನ್ನ ಕೃಪೆಯೊಳ- ಗನುದಿನದಿ ಕಾಯೊ ಕೃಪಾಕರ 5 ಛಪ್ಪನ್ನೈವತ್ತಾರು ದೇಶದಿಂದ ಕಪ್ಪವಗೊಂಬ ಸರ್ವೇಶ ಅಪ್ಪ ಹೋಳಿಗೆಯನ್ನು ಮಾರಿ ಹಣ- ಒಪ್ಪಿಸಿಕೊಂಬ ಉದಾರಿ ಸರ್ಪಶಯನ ಕಂದರ್ಪಪಿತ ಭಜಿ- ಸಿರ್ಪವರ ಸಲಹಿರ್ಪ ಕುಜನರ ದರ್ಪಹರಿಸುತ ಕಪ್ಪಕಾಣಿಕೆ ಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6 ಚಾರುಚರಣತೀರ್ಥವೀಂಟಿ ನಿನ್ನೊ- ಳ್ಸಾರಿ ಬರುವ ಪುಣ್ಯಕೋಟಿ ಸೇರಿದೆ ಕೊಡು ಮನೋರಥವ ಲಕ್ಷ್ಮೀ- ನಾರಾಯಣನೆನ್ನೊಳ್ದಯವ ತೋರು ನಿರತ ಸಮೀರಭವ ವರ- ದಾರವಿಂದದಳಾಕ್ಷ ತಿರುಪತಿ ವೀರ ವೆಂಕಟರಮಣ ಮದ್ಬಹು-ಭಾರ ನಿನ್ನದು ಪಾಲಿಸೆನ್ನನು 7
--------------
ತುಪಾಕಿ ವೆಂಕಟರಮಣಾಚಾರ್ಯ
ಬಿಡು ಬಿಡು ವಣಮಾತಿನ ಸೊಗಸು | ಕುಡಿ ಸ್ವಾನಂದ ಬಳ್ಳಿಯ ಚಿಗಿಸು ಪ ಶೃತಿ ಶಾಸ್ತ್ರಜ್ಞಾನವ ಪಡೆದು | ಕ್ಷಿತಿಯೊಳು ಹೆಮ್ಮೆಯ ಮದ ಜಡಿದು | ಪ್ರತಿಯನಗಿಲ್ಲೆನುತಲಿ ನುಡಿದು | ಮತವಾದಕ ನಿಲುವರೆ ನಡದು 1 ಅಂಜನಿಲ್ಲದ ಉಪಕರಣದಂತೆ | ವ್ಯಂಜನಿಲ್ಲದ ಪಾಕಗಳಂತೆ | ರಂಜನಿಗನುಭವ ದೂರಂತೆ | ಕಂಜನಾಭನ ನೆನೆವಂತೆ 2 ತನ್ನೊಳು ನಿಜಘನದಾವರತಾ | ಮುನ್ನಾದನು ಶಬ್ದಕ ಹೊರತಾ | ಇನ್ನಾರ ಬೆರಿ ಸಂತರ ತ್ವರಿತಾ | ಮನ್ನಿಸಿ ಮಹಿಪತಿಜನಗುರುತಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು