ಮಾನವಿ ದಾಸರ | ನಿ ಸೇರೋಹೀನ ಮನುಜ ನಿನ್ನಘವನೆ ನೀಗುವ ಪ
ಕೃತ ಯುಗದಲಿ ಹಿರಣ್ಯಜನೆನಿಸೀವಿತತ ಮಹಿಮ ಹರಿಯನೆ ಭಜಿಸೀ ||ಸತತದಿ ಸುಜನರ ಸಂತವಿಸಿ ಸಿರಿಪತಿಯ ಸೇವಿಸೆ ಸಹ್ಲಾದ ನೆನಿಸಿದಾ 1
ಎರಡೊಂದ್ಯು ಯುಗದಲಿ ಶಲ್ಯನಾಗಿ ಜನಿಸೀಕುರುಪಗೆ ಋಣರೂಪ ಸೇವೆ ಸಲಿಸಿ ||ಉರುತರ ಭಕುತಿಲಿ ಶೌರಿಯ ನೆನೆಯುತಹರಿಪದ ಸೇರಿದ ನೃಪಕುಲ ಮೌಳೀ 2
ವರಕಲಿಯಲಿ ದ್ವಿಜನಾಗವತರಿಸೀನರಮೃಗಾಖ್ಯಸುತ ಶ್ರೀನಿವಾಸನೆನಿಸೀ ||ವರದೇಂದ್ರ ಯತಿಯಲಿ ತರ್ಕವ ಕಲಿತುದುರುಳರ ಮುರಿದತಿ ಗರ್ವದಿ ಮೆರೆದಾ 3
ಭೃಗ್ವಂಶಜ ವಿಜಯಾಖ್ಯ ದಾಸ ಬಂಧೂಋಗ್ವಿನುತನ ಪ್ರಾಕೃತದೊಳು ಪಾಡೆ ||ದಿಗ್ಗಜ ಗರ್ವದಿ ಗೆಜ್ಜೆಯ ಕಟ್ಟಿದಅಗ್ಗದ ನಟನಿವನೆನುತಲಿ ಜರೆದಾ 4
ದಾಸರ ನಿಂದ್ಯದಿ ಬಂದುದು ಅಪಮೃತ್ಯುದೋಷನೀಗೆ ಗೋಪಾಲರ ಭಜಿಸೆನ್ನ ||ಔಷಧ ಪೇಳಲು ದಾಸರ ನಾಲ್ದಶವರ್ಷಾಯುಷ್ಯವ ಪೊಂದಿದವರನಾ5
ಇಂದು ಭಾಗದಲಾನಂದದಿ ಮೀಯೇಬಂದೊದಗಿತು ಜಗನ್ನಾಥ ನಾಮಾ ||ಪೊಂದುತ ಅಂಕಿತ ಕುಣಿಯುತ ಪಾಡುತಇಂದಿರೆಯರಸನ ಛಂದದಿ ತುತಿಸಿದ 6
ಪಾವನತರ ಹರಿಕಥೆ ಸುಧೆ ರಚಿಸೀಪವನ ಮತದವರನ್ನುತ್ತರಿಸೀ ||ಪವನನ ಹೃತ್ಕಂಜದಿ ನೆಲೆಸಿಹ ಗುರುಗೋವಿಂದ ವಿಠಲ ಪದಾಬ್ಜವ ಸೇರಿದ 7