ಬಂದುದ ಕೊಂದರೆ ಹೋಗಲಿ ಮತ್ತೇ | ಹೋದುದೆಲ್ಲಾ ಹೋಗಲಿ ಶಿವನೆ ಪ ಮನದ ಆಶೆಗಳು ಕಡಿಯಲಿ ಶಿವನೆ | ಉನ್ಮನಾನಂದಕೆ ನಡೆಯಲಿ ಶಿವನೆ || ಘನವಾದ ಘನವನು ಹಿಡಿಯಲಿ ಮುಂದೆ ಜನನದ ಬಾಧೆಯು ನೀಗಲಿ ಶಿವನೆ 1 ಬಂದು ಹೋಗುದೆಲ್ಲ ನೀಗಲಿ ಶಿವನೆ |ಎಂದೆಂದು ನಿಜವೆಂಬುದಾಗಲಿ ಶಿವನೆ ||ಮಂದ ಮತಿತ್ವ ಹೋಗಲಿ ಜಗವು | ಇಂದುಧರನ ಸಮತೂಗಲಿ ಶಿವನೆ 2 ಪರಿ ಪರಿ ಕಲ್ಪನೆ ಜರೆಯಲಿ ನಾ | ಪರಮಾತ್ಮನೊಳಗಿನ್ನು ಬೆರೆಯಲಿ ಶಿವನೆ || ಗುರುಭವತಾರಕ ದೊರೆಯಲಿ ನಾ | ಪರಪುರುಷನೆಂದು ಅರಿಯಲಿ ಶಿವನೆ 3