ಒಟ್ಟು 117 ಕಡೆಗಳಲ್ಲಿ , 42 ದಾಸರು , 116 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ವೆಂಕಟೇಶಾ ಸರ್ವೋತ್ತಮಾನೆ ಶ್ರೀಶಾ ಪ ರಮಾರಮನೆ ಸದ್ಧಿ ಮಾಕರಾಕರ್Àಮುಖ ಸುಮಾನಸಾನತ ಸಮೀರನಗಧೀಶಾ ಅ.ಪ ವರವೈಕುಂಠದಿಂದ ಈ ಧರಾತಳಕೆ ಬಂದ ಚರಣಕಮಲಕೆ ಶರಣು ಮಾಳ್ಪರ ಕುರುಣಿಸೀ ಭವ ಅರಣದಾಟಿಪ 1 ಧರೇಶ ತೊಂಡನೃಪಗೆ ನೀ ದರಾರಿ ಇತ್ತವಗೆ ಧರಾಸುರೇಶನ ಜರತರಿದು ಬಹು ತ್ವರದಿ ಯೌವನ ಖರೆಯನೀಡಿದಿ 2 ಇಭರಾಜ ನಿನ್ನ ನುತಿಸೆ ಅಭಯವಿತ್ತೆಘನ್ನಾ ಶುಭಕರನೆ ನಿನ್ನ ಪ್ರಭಾವ ಕೇಳಿದೆ ಪ್ರಭುವೆ ಎನ್ನ ಭವಭಯಾಕಳಿಯೊ ಸ್ವಾಮಿ 3 ಮಹಾನುಭಾವ ಎನ್ನ ಮನದಲಿ ವಹಿಸಿದೇ ನಿನ್ನ ಗಹನಮಹಿಮನೆ ಮಹಾಪರಾಧವ ಸಹನ ಮಾಡೆಲೊ ಅಹೀಶಗಿರಿವಾಸ 4 ಪಾತಕಾದ್ರಿಕುಲಿಶಾ ನೀ ವಿಧಾತಾದಿಸುರಕುಲೇಶಾ ನೀತಗುರು ಜಗನ್ನಾಥವಿಠಲ ನಿಜ ದೂತಜ£ಕÀತಿ ಪ್ರೀತಾನಾಗುವೊ ದಾತಾ 5
--------------
ಗುರುಜಗನ್ನಾಥದಾಸರು
ಬಯಸೋದು _ ಉತ್ತಮ ಸಂಗ - ಬಯಸೋದು ಪ ಬಯಸೂವುದುತ್ತಮ ಸಂಗ | ಭವಭಯ ಪರಿಹರಿಸೂವ ಸಂಗ | ಆಹಭಯ ದೂರಾಭಯಪ್ರದ | ದಯ ಪೂರ್ಣ ಹರಿಯ ಹೃ-ದಯ ವ್ಯಾಪ್ತವಾದಂಥ | ವಿಯದೊಳು ಕಾಂಬಂಧ ಅ.ಪ. ವಿಭವ | ಹೇತು ಇವರೆಂದು ಖ್ಯಾತಿಲಿ ಇರುವ | ಬೊಮ್ಮದಿವಿಜೇಡ್ಯ ವೈಕುಂಠನವ | ಮೃಗ್ಯನವರಿಂದನಾಗುತಲಿರುವ | ಆಹಅವನ ಪದ ಕಮಲದಿ | ಧೃವ ಚಿತ್ತ ಉಳ್ಳವರವರಿಗೆಂಬರು ವೈ | ಷ್ಣವಾಸ್ಯರೆಂದೆನುತಲಿ 1 ತಾಪ ಶಮನ | ಸೇವಿಪರ ಹೃದಯಾಂತಃಕರಣ | ಆಹದಿರುತ ತೋರಿಕೊಳ್ಳೆ | ತಾರೇಶನಂದದಿಪರಿತಾಪವಿನ್ನುಂಟಿ | ಮರಳಿ ಅಂಥವನಿಗೆ 2 ಶುದ್ಧಾಂತಃಕರಣರ ಭಕ್ತಿ | ಪಾಶಬದ್ದನಾಗಿಹ ಹರಿಮೂರ್ತಿ | ಇಂಥಶುದ್ಧರ ವಸ ಹರಿಕೀರ್ತಿ | ಇಂದದಗ್ದ ಪಾಪದ ಮೂಟೆ ಭರ್ತಿ | ಆಹಊಧ್ರ್ವ ಪುಂಡ್ರವು ಶಂಖ | ಮುದ್ರಾದಿ ಚಿನ್ಹಿತಶಬ್ದರಿವರು ಪ್ರ | ಸಿದ್ಧ ಭಾಗ್ವತರೆಂದು 3 ಕಾಮ ಕಾರ್ಮಾಅವಿದ್ಯದಿಂದ | ದೇಹಭೂಮಿಯೊಳುತ್ಪನ್ನದಿಂದ | ಜಾತಿಬ್ರಾಹ್ಮಣಾಹಂಭಾವದಿಂದ | ಶೂನ್ಯಶ್ರೀಮನೋಹರ ಜೀವರಿಂದ | ಆಹಸಾಮಸನ್ನುತ ಭಿನ್ನ | ನೇಮ ತಿಳಿದು ತಾರ-ತಮ್ಯವ ತಿಳಿದವ | ಪ್ರೇಮ ಭಕ್ತನವನು 4 ನೋವು ಸಂತೋಷಗಳೆಂಬ | ದ್ವಯಭಾವಗಳ್ಸಮತೇಲಿ ಉಂಬ | ಜ್ಞಾನಿದೇವ ದೇವಗೆ ಪ್ರಿಯನೆಂಬ | ಬುದ್ಧಿಲೋಪಿ ಅವರ ಭಜಿಸೆ ತುಂಬ | ಆಹಗೋವ ಪಾಲಕ ಗುರು | ಗೋವಿಂದ ವಿಠ್ಠಲಕಾವನು ಬೆಂಬಿಡದೆ | ಈ ವಿಧ ಭಕುತರ 5
--------------
ಗುರುಗೋವಿಂದವಿಠಲರು
(ಅ) ಪರತರ ಕರುಣಾಕರ ವಿಧಿಮುಖ ಸುರವರ ನುತಚರಣಯುಗ ಪಾಹಿ ಪ ಭವಭಯಸಾಗರ ತರಣಿಯೆಂದೆನಿಸಿದೆ ತವಪದ ಧ್ಯಾನವ ಸದಾ ಕೊಟ್ಟೆನ್ನನು 1 ತರಳನ ಬಾಧಿಪ ದುರಳನ ಸಭೆಯಲಿ ನರಮೃಗ ರೂಪವ ತಾಳಿ ನೀ ಬಂದೆಯೋ 2 ಸಕಲ ಚರಾಚರದೊಳಗೆ ನೀನಿರುವುದು ಪ್ರಕಟಿಸಿ ತೋರಿದೆ ಶ್ರೀಕಾಂತ ಶಾಶ್ವತ 3
--------------
ಲಕ್ಷ್ಮೀನಾರಯಣರಾಯರು
(32ನೇ ವರ್ಷದ ವರ್ಧಂತಿ) ಶ್ರೀಶ ಆಶಾಪಾಶದಿಂದಲಿ ಘಾಸಿಯಾದೆ ಬರಿದೆ ವಾಸವಾರ್ಜಿತ ಪಾದಪಂಕಜ ದಾಸಪೋಷಣ ಭೂಷಣಾಚ್ಯುತ ಪ. ಮತ್ತೆರಡು ಮೂವತ್ತು ವರುಷಗಳುತ್ತಮ ಕೃತ್ಯದಲಿ ಸತ್ಯ ಶೌಚಾಚಾರ ಭಕ್ತಿಗಳಿತ್ತು ಕೃಪಾರಸದಿ ಭೃತ್ಯನನು ಪೊರೆದಿತ್ತ ಮೋಹದ ಕತ್ತಲೆಯ ವಶಕಿತ್ತು ಬಿಡುವುದೇ ಶ್ರೀಶ 1 ನಿನ್ನ ಚರಣಾನನ್ಯ ಶರಣರ ಮುನ್ನ ಪೊರೆದ ತೆರದಿ ಇನ್ನು ಪೊರೆವುದಕೇನುಪೇಕ್ಷ ಪ್ರ- ಪನ್ನ ಪಾಲಯದಿ ಚಿನ್ಮಯಿನಂದೈಕ ಭರಿತ ಮ- ಭವ ಮಾಧವ 2 ಕೂರ್ಮ ವರಾಹ ನರಹರಿ ವಾಮನ ಭಾರ್ಗವನೆ ರಾಮಕೃಷ್ಣ ಜನಾದಿ ಮೋಹನೆ ಕಾಮಗಾಶ್ವ ಚರನೆ ರಾಮ ವಿಧುರಿತ ಪಾಪಚಯ ಕಮ- ಲಾ ಮನೋಹರ ಸುಂದರಾನನ 3 ಕಾಲ ಕರ್ಮವಿದೂರ ಯಮುನಾಕೂಲ ಕೇಳೀಲೋಲಾ ಮಂದ ಮರಾಳಗಮನ ಶೀಲಾ ನೀಲ ಮೇಘ ನಿಭಾಂಗ ಪಂಕಜ ಮಾಲಯದುಕುಲಬಾಲ ಪಾಲಯ 4 ನೀರಜಾಸನ ನಿಮ್ನನಾಭ ಸುರಾರಿವನ ಕುಠಾರಾ ಜಾರ ಚೋರ ವಾರಿಜಾಸನ ವಂದ್ಯ ಕರುಣಾ ಪೂರ ಸುರಪರಿವಾರ ಪಾಲಯ 5 ತಂದೆ ತಾಯಿ ಗುರು ಬಂಧು ಸೋದರನಂದನ ಸಖನೆಂದು ಮುಂದೆ ಭವಭಯದಿಂದ ನಿನ್ನನು ಹೊಂದಿದೆ ನಾ ಬಂದು ಹಿಂದೆ ಮಾಡಿದ ಕುಂದನೆಣಿಸದೆ ಇಂದು ಕರಪಿಡಿ ಎಂದು ಬಯಸುವೆ 6 ವಿನುತ ಚರಣಾ ಏಸು ಪೇಳುವುದಿನ್ನು ಎನ್ನನು ಪೋಷಿಸು ಬಹು ಕರುಣಾ ಶೇಷಗಿರಿ ನಿಲಯಾಕುವರದ ಕೃ- ಪಾಶ್ರಯನೆ ತವದಾಸ ಪಾಲಿಸು 7
--------------
ತುಪಾಕಿ ವೆಂಕಟರಮಣಾಚಾರ್ಯ
(ವಿನಾಯಕ ಚತುರ್ಥಿಯಂದು ಶರ್ವಿನ ಗಣಪತಿಯನ್ನು ನೆನೆದು) ಗಣಪತೀ ಕೊಡು ನಮಗೆ ಶ್ರೀಶನಲಿ ಮತಿ ಪ. ತನು ಮನದಲಿ ಶ್ರೀವಿನಿಯನ ಸ್ಮರಿಸಲು ವುಣಿಸುವ ಸುಖ ಸಂದಣಿಗಣ ನಿರವಧಿ 1 ವಿಘ್ನ ಸಮೂಹವ ವೋಡಿಸಿ ಭವಭಯ ಭಗ್ನಗೈಸಿ ನಿರ್ವಿಘ್ನದಿ ಕರುಣಿಸು 2 ಪರಶು ಪಾಶಾಂಕುಶಧರ ಕರುಣಾಕರ ಸಿರಿವರ ವೆಂಕಟವರ ವಲಿವಂದದಿ 3 ಶ್ರೀಹರಿ ಸಂಕೀರ್ತನ ; ನಾಮ ಮಹಾತ್ಮೆ
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀಹರಿಯ ಮೋಹಿನಿ ರೂಪ) ನೋಡಿರೊ ಸ್ತ್ರೀರೂಪವ ನೋಡಿರೋ ಪ. ನೋಡಿರೊ ಹರಿಯ ಸ್ತ್ರೀರೂಪ ಸ್ತುತಿ ಮಾಡಿರೊ ಮಹಿತಾ ಪ್ರತಾಪ ಅಹ ಜೋಡಾದ ಸತಿಯರ ನೋಡಿ ನಗುತ ನಲಿ- ದಾಡುವ ಶ್ರೀಕೃಷ್ಣ ಪ್ರಹುಡೆಯಾಗಿರುವುದ ಅ.ಪ. ಭಾರ್ಗವ ವಾಸರದಲ್ಲಿ ಯತಿ ವರ್ಗವೆಲ್ಲವು ಸೇರುತಿಲ್ಲಿ ಪಂಚ ಮಾರ್ಗಣಪಿತನಿದಿರಲ್ಲಿ ಅಷ್ಟವರ್ಗೋಪಚಾರಗಳಲ್ಲಿ ವಿಧಿ ಭರ್ಗ ವಂದ್ಯ ಪ್ರಭು ದುರ್ಗಾರಮಣ ಸತ್ವ ಸರ್ಗಪಾಲನ ಸನ್ಮಾರ್ಗದಿ ಸ್ತುತಿಪುದ 1 ಧೀರಮರಾಸುರರಂದು ಕ್ಷೀರವಾರಿಧಿ ತಡಿಯಲ್ಲಿ ಬಂದು ಬಹು ಮಂದರ ಕಟ್ಟಿ ನಿಂದು ಸುಧ ಸಾರವ ತೆಗೆಯಲು ಕಾರುಣ್ಯದಲಿ ದಾನ ವಾರಿಗಳಿಗೆ ಕೊಟ್ಟ ನಾರಾಯಣಿಯನ್ನು 2 ನಾಯಕ ಧೀರ ಕಂಜ ನಿವಹ ರಕ್ಷಿಸು ಗಂಭೀರಾ ಅಹ ಪವನಾವತಾರನ ಸ್ತವನಕೊಲಿದು ಬಂದ ಕವಿ ಶೇಷಗಿರಿವಾಸ ಭವಭಯಹಾರಿಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅನ್ನಪೂರ್ಣೇಶ್ವರಿ ನಿನ್ನ ಪಾದಕೆ ಶರಣು | ಮನ್ನಿಸಿ ಕರುಣದಿ ಎನ್ನನುದ್ಧರಿಸವ್ವ ಪ ಮಾತೆ ನೀನೆನ್ನನು | ಪ್ರೀತಿಯೊಳ್ ಸಲಹವ್ವ || ದಾತೆಯೆ ಭವಭಯ (ದ) | ಭೀತಿಯೊಳೆನ್ನ ಪೊರೆ 1 ಸರಸಿಜಾಂಬಕಿ ಯೆನ್ನ | (ಸ) ರಸೆ (ಸುಗುಣೆ) ರನ್ನೆ | ಭಾರ | ಗಿರಿಜೆ ನಿನಗಪಿ9ಸಿದೆ2 ಭಾವಭಕ್ತಿಯೊಳ್ನಿನ್ನ | ಸೇವೆಯೊಳಿರುವರನ್ನೆ || ದೇವ ವಿಶ್ವೇಶ್ವರ ಪ್ರಿಯೆ | ದೇವಿ ಸಂತಸದಿ ಕಾಯೆ 3 ಸಾಧುಸಂತರ ಸೇವೆ | ಎಂದೆಂದಿಗಾದರು || ಕುಂದದೆ ಸಾಗುವರೆ | ಕಂದನಿಷ್ಟವ ಸಲಿಸೆ 4 ವಾಸುದೇವನ ಭಗಿನಿ | ಲೇಸಿನೊಳಗ್ರಜನ || ದಾಸನಾದೆನ್ನ (ವ) ರೊಳ್ | ಸಾಸಿ (ರ) ಸೇವೆಗೈಸೆ 5 ಭಗವತ್ಸೇವೆಯೊಳೆನ್ನ | ಸುಗುಣದ ಪರಂಪರೆ || ಅಗಣಿತ ವರವೀಯೆ 6 ತಾಯೆನ್ನಿಷ್ಟವನು ಪ್ರೀಯದಿಂ ಸಲಿಸುವ || ರಾಯ ಶ್ರೀಕೃಷ್ಣಾನುಜೆ | ಕಾಯೆ ಸದಾನಂದದೊಳು7
--------------
ಸದಾನಂದರು
ಅಂಬಾ ಮೂಕಾಂಬಾ ಪಾಹಿ ಭಕ್ತಾವಲಂಬಾ ಅಂಬಾ ಮೂಕಾಂಬಾ ಪಾಹಿ ಪ ಶುಂಭ ದನುಜ ಸಂಹಾರಿಣಿ ತಾರಿಣೇ ಶಾಂಭವಿ ಶೂಲಿನಿ ವರಗೌರೀ ಸಾಂಬಶಿವೇ ಸಚರಾಚರ ಸಾಕ್ಷಿಣೆ 1 ಕಾಮ ಜನನಿ ಕರುಣಾ ಜಲಧೇ ಶುಭ ಫಲದೇ ಕಾಮೇಶ್ವರಿ ಕಮಲಾಸನ ಸನ್ನುತೇ ಭೀಮ ಪರಾಕ್ರಮಿ ಭವಭಯ ಭಂಜಿನಿ 2 ವರ ಕುಟಿಜಾಚಲಪುರ ನಿಲಯೇ ಸುರಮುನಿ ಸೇವಿತೆ ಸಹೃದಯೇ ಶರಣಾಗತ ಪರಿಪಾಲಿತೆ ಸುಲಲಿತೆ ಗುರುವಿಮಲಾನಂದಭರಿತೆ ಮೂಕಾಂಬಿಕೆ ಶ್ರೀ ಶ್ರೀ ಶ್ರೀ 3
--------------
ಭಟಕಳ ಅಪ್ಪಯ್ಯ
ಇಂದಿನ ದಿನ ಸುದಿನವಿದು ನೋಡಿ ತಂದೆ ಸದ್ಗುರು ಕೀರ್ತಿಯ ಕೊಂಡಾಡಿ ಧ್ರುವ ಸಾರ್ಥಕವಾಯಿತು ಜನ್ಮಕ ಬಂದು ಕರ್ತು ಸದ್ಗುರು ಕರುಣವ ಪಡೆದಿಂದು ಮಾಯಾ ನೋಹದಸಂದು ಆರ್ಥಿ ಆಯಿತು ಮನದೊಳು ನಮಗಿಂದು 1 ಕೇಳಿದೆವು ಹರಿನಾಮದ ಘೋಷ ಹೊಳೆಯಿತು ಮನದೊಳು ಅತಿ ಉಲ್ಹಾಸ ಕಳೆದೆವು ಕತ್ತಲೆ ಜ್ಞಾನದ ದೋಷ ಬೆಳಗಾಯಿತು ಗುರುಜ್ಞಾನ ಪ್ರಕಾಶ 2 ಸೇವಿಸಿ ಸದ್ಗುರು ನಾಮಸುರಸ ಆಯಿತು ಮನ ಚಿದ್ಭನ ಸಮರಸ ಹೋಯಿತು ಭವಭಯದ ತಾ ಕ್ಲೇಶ ಮಹಿಪತಿಗಾಯಿತು ಅತಿ ಸಂತೋಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದ್ದರಿರಬೇಕು ಅನುದಿನಾ | ಒಳ್ಳೆವರ ಸಹವಾಸಾ ಪ ಅಂಗಸಂಗಗಳಿಂದ | ಮಂಗಳೋತ್ಸಾಹವಾಗಿ | ಕಂಗಳಿಗಿದಿರಿಡುವದು ಉಲ್ಹಾಸಾ1 ಸಾರಿ ಬೀರಿ ಬೋಧವಾ | ದಾರಿದೋರಿ ಭಕ್ತಿಯಾ | ದೂರ ಮಾಡುವರು | ಭವಭಯ ಕ್ಲೇಶಾ 2 ಗುರುವರ ಮಹಿಪತಿಸುತಪ್ರಭು ಸ್ಮರಣೆಯಾ | ಮರಹು ಮರೆಸುವರದರುದ್ದೇಶಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇವನಾರೆ ಮನಸೂರೆಗೈದೋಡುವಾ ನವನೀತ ಮೆಲುವಾತ ಪರಿದೋಡುವಾ ಪ ಸವಿನೋಟ ರಸದೂಟವನೆ ಬೀರುವ ಸುವಿಲಾಸ ಪರಿಹಾಸಗಳ ತೋರುವ ಅ.ಪ ಓರೆನೋಟವ ತೋರುತ ನಲಿವ ಕ್ಷೀರವ ಕುಡಿವ ಬೆರಳಲಿ ಕರೆವ ಕೊರಳಿನ ಹಾರವ ಎಡಬಲಕೆಳೆವ ಕೊರಳನು ಕೊಂಕಿಸಿ ಪರಿಪರಿ ಕುಣಿವ 1 ನೀರಜನೇತ್ರನು ನೀರದ ಗಾತ್ರನು ನಾರಿಯತನುವನು ಬರಸೆಳೆಯುವನು ಚೋರನು ಭವಭಯಹಾರನು ಧೀರನು ಶ್ರೀರಮೆಯರಸನು ಮಾಂಗಿರಿವರನು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಉದಾರಗುಣ ಶಾರದಾಮನೋಹರ ಸದಾನಂದ ರಾಮಾನುಜಂ ಪ ಮದೀಯ ಗುರುವರ ಸದಾ ಶ್ರಿತಾಕರ ತ್ರಿದಂಡಧರ ರಾಮಾನುಜಂ ಅ.ಪ ವಿಭೂತಿಯುಗ ಸತ್‍ಪ್ರಭಾವಿರಾಜಿತ ಸುಭೂಜವರ ರಾಮಾನುಜಂ ವಿಭುಂ ಭಜೇ ರಾಮಾನುಜಂ 1 ಪಾತಕನಾಶನ ಭೂತವಿಮೋಚನ ಪತಿತಪಾಲ ರಾಮಾನುಜಂ ಭೀತಿವಿದಾರಣ ಭವಭಯಹರಣ ಕರುಣಾಮಯ ರಾಮಾನುಜಂ 2 ಧರಾಂಬುಧರ ರಾಮಾನುಜಂ ಪರಾತ್ಪರ ಮಾಂಗಿರೀಶ ಪದ ಚಂಚರೀಕ ಮುನಿ ರಾಮಾನುಜಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನೆಂದರಿಬೇಕೀ ಆಟಾ ಘನಗುರು ಮಾಡಿದ ಮಾಟ ಅನುಮಾನಳಿಸಿದ ನೋಟ ಅನುಭವಕಾಯಿತು ನೀಟ ಧ್ರುವ ರಂಜಕ ಬಲುಕೊಂಡಿತು ನೋಡಿ ಅಂಜಿಕಿ ಭವಭಯ ಈಡ್ಯಾಡಿ ಪ್ರಾಂಜಲ ಸದ್ಗುರು ದಯಮಾಡಿ ಅಂಜನ ಹಚ್ಚಿದ ದುವುಡಿ 1 ಕಾಣದ ಕಂಡೆವು ಕಣ್ಣಿಲಿ ಖೂನಕ ಬಾರದು ಘನಲೀಲೆ ಜಾಣರು ಬಲ್ಲರು ಮನದಲಿ ನೆನದರು ತಾಂ ವರಿಕಿಲೆ 2 ಆಶ್ವರ್ಯವು ತಾನಾಗ್ಯದೆ ನಿಶ್ಚಯದೋರುತಲ್ಯದೆ ಪಶ್ಚಿಮಕೆ ಭಾಸುತದೆ ಸ್ವಚ್ಛವು ನೋಡಿದರದೆ 3 ರಚ್ಚಿಗೆ ತಾಂ ಬಾಹುದೆಲ್ಲ ಮುಚ್ಚಿಟ್ಟಡೆÉ ಬಾಳು ಸವಿಬೆಲ್ಲ ಅಚ್ಚಳಿಯದ ಭಕ್ತನೆ ಬಲ್ಲ ನೆಚ್ಚಿದ ಮಹಿಪತಿ ಸೊಲ್ಲ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಳಯ್ಯ ಸುಬ್ರಹ್ಮಣ್ಯ ಬೆಳಗಾಯಿ- ತೇಳಯ್ಯ ಸುಬ್ರಹ್ಮಣ್ಯ ಕೋಳಿ ಕೂಗುವದು ವನಜಾಳಿಸೌರಭ್ಯ ತಂ- ಗಾಳಿ ಬೀಸುವದು ಕರುಣಾಳು ತವಚರಣವ- ಕೀಲಾಲಜಾಪ್ತನೀಗ ಕಾಲಕಾಲದಿ ಭಕ್ತಜಾಲವನು ಜಯಗೊಳಿಸಿ ಪಾಲಿಸುವ ಪಾರ್ವತೀಬಾಲ ಭಾಸ್ಕರತೇಜ ಲೋಲಲೋಚನೆಯ ಸಹಿತ 1 ಇಂದು ಸಂಕ್ರಮಣ ದಿನ ಬಂದಿಹರು ಭಕ್ತಜನ- ವೃಂದ ಕಾಣಿಕೆ ಕಪ್ಪ ತಂದು ನಿಂದಿಹರು ಬಲ- ಸಲಹೆಂದು ಸ್ತುತಿಸೆ ಕಂದರ್ಪಸಾಹಸ್ರ ಸೌಂದರ್ಯ ಮೂರ್ತಿಯನು ಚಂದದಿಂ ಕಾಣುವಾನಂದ ಮಾನಸರು ಗೋ- ಸ್ಕಂದ ಕರುಣಾಸಿಂಧುವೆ 2 ಪೃಥ್ವಿಯೊಳಗುತ್ತಮ ಪವಿತ್ರ ಪಾವಂಜಾಖ್ಯ ಕ್ಷೇತ್ರಾಧಿವಾಸ ಲೋಕತ್ರಯ ವಿಭೂಷಣ ಪ- ಕಾರ್ತಿಕೇಯ ನಮೋಸ್ತುತೇ ಭೃತ್ಯವತ್ಸಲ ಭವಭಯಾಬ್ಧಿಕುಂಭಜ ಭಜಕ- ಪ್ರೋತ್ಸಾಹ ಪಾವನಚರಿತ್ರ ಸುತ್ರಾಮನುತ ಮೃತ್ಯುಂಜಯನೆ ಪುತ್ರನೆ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಏಳಯ್ಯ ಸುಬ್ರಹ್ಮಣ್ಯ ಬೆಳಗಾಯಿ- ತೇಳಯ್ಯ ಸುಬ್ರಹ್ಮಣ್ಯ ಕೋಳಿ ಕೂಗುವದು ವನಜಾಳಿಸೌರಭ್ಯ ತಂ- ಗಾಳಿ ಬೀಸುವದು ಕರುಣಾಳು ತವಚರಣವ- ಕೀಲಾಲಜಾಪ್ತನೀಗ ಕಾಲಕಾಲದಿ ಭಕ್ತಜಾಲವನು ಜಯಗೊಳಿಸಿ ಪಾಲಿಸುವ ಪಾರ್ವತೀಬಾಲ ಭಾಸ್ಕರತೇಜ ಲೋಲಲೋಚನೆಯ ಸಹಿತ1 ಇಂದು ಸಂಕ್ರಮಣ ದಿನ ಬಂದಿಹರು ಭಕ್ತಜನ- ವೃಂದ ಕಾಣಿಕೆ ಕಪ್ಪ ತಂದು ನಿಂದಿಹರು ಬಲ- ಸಲಹೆಂದು ಸ್ತುತಿಸೆ ಕಂದರ್ಪಸಾಹಸ್ರ ಸೌಂದರ್ಯ ಮೂರ್ತಿಯನು ಚಂದದಿಂ ಕಾಣುವಾನಂದ ಮಾನಸರು ಗೋ- ಸ್ಕಂದ ಕರುಣಾಸಿಂಧುವೆ2 ಪೃಥ್ವಿಯೊಳಗುತ್ತಮ ಪವಿತ್ರ ಪಾವಂಜಾಖ್ಯ ಕ್ಷೇತ್ರಾಧಿವಾಸ ಲೋಕತ್ರಯ ವಿಭೂಷಣ ಪ- ಕಾರ್ತಿಕೇಯ ನಮೋಸ್ತುತೇ ಭೃತ್ಯವತ್ಸಲ ಭವಭಯಾಬ್ಧಿಕುಂಭಜ ಭಜಕ- ಪ್ರೋತ್ಸಾಹ ಪಾವನಚರಿತ್ರ ಸುತ್ರಾಮನುತ ಮೃತ್ಯುಂಜಯನೆ ಪುತ್ರನೆ3
--------------
ತುಪಾಕಿ ವೆಂಕಟರಮಣಾಚಾರ್ಯ