ಇನಿಯಗೆನ್ನೊಡನೆ ಮುನಿಸೋ ಪ್ರೀತಿಯೋ ಪೇಳೆವನಜಾಕ್ಷಿಯವನೆಸಗಿದುದಾ ಪೇಳ್ವೆನೆ ಪ
ಮೃಗಮದ ತಿಲಕವ ಪಣೆಗೆ ತಾನಿಡಲಿಲ್ಲಅಗಿಲುಗಂಧವ ಮೈಗೆ ತೀಡಲಿಲ್ಲ ಸೊಗಸು ಸಂಪಿಗೆ ಸರವಮುಡಿಸಿ ಝಗಝಗಿಪ ಮುತ್ತಿನ ಸರವಹಾಕದೆ ಎನ್ನ ಮುಗುಳು ಮೊಲೆಗೆಸೆಳ್ಳುಗುರಿಕ್ಕದಿದ್ದ ಮೇಲೆ1
ಗುರುಕುಚರ್ಚಿತ ಮೃಗಮದ ಪತ್ರವ ಸೆರಗಿನಿಂದೊರಸಿದನೆಕುಂಕುಮಗಂಧವ ಭರದಿ ಲೇಪಿಸಿದನೆ ತಾನೆತಾಂಬೂಲವ ಹರುಷದಿ ಕರದಿತ್ತನೆಆಲಿಂಗಿಸಿ ಪರಮ ಸಂತೋಷದಿ ತಿರುಗಿ ನೋಡಿದನೆ 2
ಧರಿಸಿದ ಮಿಸುನಿಯ ಆಭರಣಂಗಳ ಭರದಿಂದ ತೆಗೆದ ತಾನೆಚಿನ್ನದುಂಗುರವ ಬೆರಳಿಗೆ ನಲಿದಿಟ್ಟನೆತರುಣಿ ಬಾರೆಂದು ನಂಬುಗೆಗೊಟ್ಟನೆಶ್ರೀ ಕೆಳದಿಯ ಪುರದ ರಾಮೇಶ ಎನ್ನನೆರೆದು ಮನ್ನಿಸಿದನೆ3