ಕಲಭಯಾನೆ ಕಂಜಲೋಚನೆ ಕದವತೆಗೆಯೆಲೆ ಭಾಮಿನಿ
ನಾಂ ಬಳಲಿ ಬಂದೆನು ಭಾಮಿನೀ ಪ.
ಬಳಲಿ ಬಂದರೆ ಒಳ್ಳಿತಾಯಿತು ತಳರ್ವುದಿಲ್ಲಿಂ ನಿಲ್ಲದೆ
ನಾಂ ಕದವ ತೆಗೆಯೆನು ಸಾರೆಲೆ ಅ.ಪ.
ಭಾಪುಭಾಪೆಲೆ ಕೋಪಗೈವುದು ಚಾಪಲ್ಯಾಂಬಕಿ ಯೆನ್ನೊಳು
ಓವನಲ್ಲೇ ಕೋಪಸಲ್ವುದೆ ಈ ಪರಿಯೊಳ್ ಪೇಳ್ವುದು
ನೀ ನೀಪರಿಯೊಳ್ ಪೇಳ್ವುದು 1
ಪರಿ ಕಪಟನಾಟ್ಯವ ಮಾಳ್ಪರೇ
ಓಪೆÀನೆಂದು ಕೂಗುತಿರುವ ಭೂಪನಾವನು ಸಾರೆಲೋ
ನಾನೋಪೆ ಯಾರಿಗೆ ಸಾರೆಲೊ 2
ನೀರೆ ಮುಕ್ತಾಹಾರೆ ಸ್ಮರವೈಯ್ಯಾರೆಯಿಂತು ಪೇಳ್ವರೇ
ಕೇಳ್ ನೀರನಾನೆಲೆ ಶ್ರೀಕರೆ 3
ನೀಂ ಜಾರನಂದದಿ ಕಾಣುವೆ
ನೀನಾರು ಪೇಳು ನೋಡುವೆ 4
ದೇವಿಕೇಳು ವಸುದೇವ ದೇವಕಿಕುಮಾರ ನಾನೆಲೆ ಭಾಮಿನೀ
ಸುಕುಮಾರನಾನೆಲೆ ಭಾಮಿನೀ
ಭಾವಜಾತನ ಬಾಣಕೀಯದೆ ಕಾವುದೆನ್ನನು ಕಾಮಿನೀ
ದಯೆತೋರು ಮನೋಮೋಹಿನೀ5
ದೇವಕೀಸುತನಾದರೊಳ್ಳಿತು ನಾವು ಬಲ್ಲೆವು ಸಾರುನೀಂ
ಮಾವನನ್ನೆ ಮಥಿಸಿ ಬಂದ ಮಹಾಮಹಿಮನೆ ಸಾರು ನೀಂ, ಆಹ
ಭಾವಿಸೀ ಭಯಪಡುವೆನೇಂ 6
ಭೀಷ್ಮಕಾತ್ಮಜೆ ಭೇಷಜಾಂಬಕಿ ಹಾಸ್ಯ ಮಾಡದೆ ಬೇಗನೆ
ನಾಂ ಬೇಡಿಕೊಂಬೆನು ನಿನ್ನನು 7
ದೋಷವೆಣಿಸದೆ ಪೋಷಿಸೆನ್ನ ಮದೀಶ ಹಾಸ್ಯವ ಮಾಡಿದೆ
ಶೇಷಶೈಲನಿ ವಾಸ ಎನ್ನನು ಪೋಷಿಸೆಂದಳು ವಿನಯದಿ
ಕೈಪಿಡಿದ ದೇವನ ಮೋದದಿ 8
ಜಯಜಗನ್ನಾಥ ಭಕ್ತಾಭಯಪ್ರದ ಶ್ರೀಕರ
ಜಯದೇವ ದಯಾಸಾಗರ ಶೇಷಗಿರೀಶ ಶ್ರೀಧರ 9