ಶ್ರೀ ಭೂಮಿದುರ್ಗ ಮತ್ತೇಭೇಂದ್ರಿಗಮನೆ ಸ್ವ
ರ್ಣಾಭ ಗಾತ್ರೆ ಸುಚರಿತ್ರೆ | ಸುಚರಿತ್ರೆ ಶ್ರೀ ಪದ್ಮ
ನಾಭನ್ನ ಜಾಯೆ ವರವೀಯೆ 1
232 ದರಹಸಿತವದನೆ ಸುಂದರಿ ಕಮಲ ಸದನೆ ನಿ
ವಿಧಿ ವಿಧಿ ಮಾತೆ ಲೋಕಸುಂ
ದರಿಯೆ ನೀ ನೋಡೆ ದಯಮಾಡೆ 2 233 ತ್ರಿಗುಣಾಭಿಮಾನಿ ಎನ್ನವ ಗುಣದ ರಾಶಿಗಳ
ವರವೀಯೆ ನಿನ್ನ ಪಾದ
ಯುಗಳಕ್ಕೆ ನಮಿಪೆ ಜಗದಂಬೆ 3
234 ಪ್ರಳಯ ಕಾಲದಲಿ ಪತಿ ಮಲಗ ಬೇಕೆನುತ ವಟ
ದೆಲೆಯಾಗಿ ಹರಿಯ ಒಲಿಸಿದಿ | ಒಲಿಸಿದಿ ಜಗದ ಮಂ
ಗಳ ದೇವಿ ನಮಗೆ ದಯವಾಗೆ 4
235 ತಂತು ಪಟದಂತೆ ಜಗದಂತರ್ಬಹಿರದಲ್ಲಿ
ಕಾಂತಮೊಡಗೂಡಿ ನೆಲೆಸಿಪ್ಪೆ | ನೆಲೆಸಿಪ್ಪೆ ನೀನೆ
ನ್ನಂತರಂಗದಲಿ ನೆಲೆಗೊಳ್ಳೆ 5
236 ಈಶಕೋಟಿ ಪ್ರವಿಷ್ಟೆ ಈಶ ಭಿನ್ನಳೆ ಸರ್ವ
ದೋಷವರ್ಜಿತಳೆ ವರದೇಶ | ವರದೇಶ ಪತಿದೊಡನೆ
ವಾಸವಾಗೆನ್ನ ಮನದಲ್ಲಿ 6
237 ಆನಂದಮಯಿ ಹರಿಗೆ ನಾನಾಭರಣವಾದೆ
ಪಾನೀಯವಾದೆ ಪಟವಾದೆ | ಪಟವಾದೆ ಪಂಕಜ
ಪಾಣಿ ನೀನೆಮಗೆ ದಯವಾಗೆ 7 238ಮಹದಾದಿ ತತ್ವಗಳ ವಹಿಸಿ ನಿನ್ನುದರದೊಳು
ದ್ರುಹಿಣಾಂಡ ಪಡೆದೆ ಪತಿಯಿಂದ | ಪತಿಯಿಂದ ಶ್ರೀಲಕ್ಷ್ಮಿ
ಮಹಮಹಿಮಳೆ ಎಮಗೆ ದಯವಾಗೆ 8
238 ಆವ ಬ್ರಹ್ಮಾದಿ ದೇವರೆಲ್ಲರು ತವ ಕೃ
ಪಾವ ಲೋಕನದಿ ಕೃತಕೃತ್ಯ | ಕೃತಕೃತ್ಯರಾಗಿ ಹರಿ
ದೇವಿ ನಾ ಬಯಸುವುದು ಅರಿದಲ್ಲ 9
240 ಪಕ್ಷೀಂದ್ರವಾಹನನ ವಕ್ಷಸ್ಥಳವಾಗಿ
ಅಕ್ಷಯಜ್ಞಾನಿ ಸುಖಪೂರ್ಣೆ | ಸುಖಪೂರ್ಣೆ ಕಮಲದ
ಳಾಕ್ಷಿ ನೋಡೆನ್ನ ದಯದಿಂದ 10
241 ಹಲವು ಮಾತ್ಯಾಕೆ ಶ್ರೀಲಲನೆ ಶ್ರೀಜಗನ್ನಾಥ ವಿ
ಮನದಲ್ಲಿ ವಾಸವಾಗೆಲ್ಲ
ಕಾಲದಲಿ ಅವಿಯೋಗಿ 11