ಅನ್ಯವನರಿಯೆನು ಮತ್ತೆಂದು ಅನ್ಯವ ಅರಿಯೆನುನಿನ್ನ ಕಾಂಬೆ ಕಂಡದನೆಲ್ಲ ನಿರ್ವಿಕಾರ ಬಗಳೆ ಕೇಳು ಪ ತನ್ನ ಹೆಂಡತಿಯನೀಗ ತನ್ನ ಸುತನು ರಮಿಸುತಿರಲುಭಿನ್ನದಿಂದ ಕಂಡೆನಾದರೆ ಮೆಚ್ಚಬೇಡಎನ್ನಲಿ ಇಚ್ಚೆ ಬೇಡ ಹೊನ್ನುರನ್ನವು ಮುಂದೆ ಇರಲು ಹರಿದುದಾದರೆಎನ್ನ ಚಿತ್ತ ನಿನ್ನ ಮೇಲೆ ಎನಗೆ ಆಣೆ ಸತ್ಯ-ವೆನ್ನು ಇದು ತಪ್ಪದೆನ್ನು 1 ಪಡೆದ ತಾಯಿ ತಾನು ಹೋಗಿಕಂಡವನ ಕೂಡುತಿರಲುಮಿಡುಕು ಹುಟ್ಟಿತಾದರೆ ನಾನು ಸತ್ಯ ಬಿಟ್ಟೆ-ನಾದರೆ ನೀನು ದೊರೆವುದೆಂತು ನಿನ್ನ ಕರುಣವೆಂತು2 ತಂದೆ ಕೆಡಹಿ ಕೊರಳನೀಗ ನಂದನನನು ಕೊರೆಯುತಿರಲುಎಂದೆನಾದರೆ ಮನದಿ ಇವನ ಜ್ಞಾನಿಯಲ್ಲವು ನಾನು ಏನು ಅಲ್ಲವುಸುಂದರವ ಚಿದಾನಂದ ಬಗಳೆ ಎಂದು ಕಾಣದಿರಲುಎಂದು ಎಂದಿಗೆ ನಿನ್ನ ಚರಣ ಭಕ್ತನಲ್ಲವುನಾನು ಮುಕ್ತನಲ್ಲವು 3
ಆಣೆಕಲ್ಲಾಡಿದಳೇ ಆನಂದದಲಿ ಬಗಳೆಸೆಣಸುವ ವೈರಿಗಳ ಶಿರಗಳ ಪಿಡಿದು ಪ ಮೊಂಡ ಮೂಕರ ತಲೆಯ ಮೂಳ ಮೂಸರ ತಲೆಯಭಂಡತನದಿ ಬಗುಳುವ ಪಾಪಿಯಚಂಡಾಲರ ತಲೆಯ ಚರಿಗೇಡಿಯ ತಲೆಯಪುಂಡರ ತಲೆಯನಂದು ಎನ್ನ ಕಣ್ಣಮುಂದೆ ತಾನು 1 ಒಂದೊಂದು ಎರಡು ಎಂದುಮುಂದೆ ಮೂರು ನಾಲ್ಕು ಎಂದುಹಿಂದೆ ಆದುದು ತಪ್ಪಿತು ಥೂ ಥೂ ಎಂದುಇಂದಿದು ಸದ್ಗುರು ರಾಯನ ಗುಸ್ತೆಂದುಚೆಂದದಿ ಆಡಿದಳೆ ಎನ್ನ ಕಣ್ಣ ಮುಂದೆ ತಾನು 2 ನಾನು ಎಲ್ಲಿದ್ದರೆ ತಾನಲ್ಲಿದ್ದಾಡುತಧ್ಯಾನವೆನ್ನಯ ಮೇಲೆ ಇಟ್ಟುಕೊಂಡುಮಾನನಿಧಿ ಚಿದಾನಂದ ರಾಣಿ ಬಗಳೆಏನ ಹೇಳಲಿ ನಿದ್ರೆ ನೀರಡಿಕೆಯಿಲ್ಲದೆ ಎನ್ನ ಕಾಯುತ
ಇಂದಿರೆಯರಸನ ಛಂದದಿಂದ ಭಜಿಸೋ | ಮನದಲಿ ನೀ ನಿಲಿಸೊ ಪ ಕುಂದನು ಎಣಿಸದೆ ಬಂದು ಕಾಯ್ವ ನಿನ್ನಾ |ನೆಂದು ಕಂದ ಬಲು ಘನ್ನಾ ಅ.ಪ. ಪಾದದ ಮೂಲವು | ಪಾತಾಲವು ಎಂದೂ | ಉಪರಿ ರಸಾತಲವೆಂದುಪಾದದ ಪರ್ವವು | ಮಹಾ ತಲಾಖ್ಯ ಲೋಕ | ಉಪರಿ ತಲಾತಲ ಲೋಕ ||ಸಾಧಿಸು ಜಂಘೆಗಳ್ | ದ್ವಯವೆ ಸುತಲ ಲೋಕ |ಚಿಂತಿಸಿ ಕಳೆ ಶೋಕ ||ಮೋದದ ಊರು ದ್ವಯ | ವಿತಲಾತಲವೆನ್ನೂ | ಮುಂದೆ ಸಾಗುತಲಿನ್ನು 1 ಭೂರಿ ಲಲಾಟವೆ | ತಪಸಿಗಳಾಸ್ಥಾನಾ | ಶಿರ ಬ್ರಹ್ಮನ ಸ್ಥಾನ 2 ಮುನ್ನ ಸೂಕ್ಷ್ಮ ಚಿಂ | ತನೆಯೇ ಬಲು ಕಷ್ಟ | ಎಂದೆನುತ ವಿಶಿಷ್ಟಘನ್ನ ಮಹಿಮ ಹರಿ | ತಾಳಿದ ಬೃಹದ್ರೂಪ | ಅದುವೆ ವಿರಾಟ್ರೂಪಾ ||ನಿನ್ನ ಬಿಂಬ ಗುರು | ಗೋವಿಂದ ವಿಠಲನ್ನ | ಮತ್ತೆ ಸ್ಥೂಲವನ್ನಾ ನನ್ನೆಯೆಂದೈಕ್ಯವೆ | ಚಿಂತಿಸೋದು ಮುನ್ನ | ಒಲಿವನು ಗುಣ ಪೂರ್ಣ 3
ಇದು ಏನು ಚರಿಯಾ ವೆಂಕಟರಾಯ ಇದು ಏನು ಚರಿಯಾ ಪ ಇದು ಏನು ಚರಿಯಾ ಶ್ರೀಯದುಕುಲ ತಿಲಕನೆ ಸದನತ್ರಯವ ಬಿಟ್ಟು ಹುದುಗಿಕೊಂಡಿರುವುದು ಅ.ಪ ಕನಕಪರ್ವತದಲ್ಲಿ ದಿನದಿನ ಮಾಡುವ ಘನ ಪೂಜೆಯನೆ ನೀನೆನಿಸದಿರುವುದು 1 ಪೊಂಬಣ್ಣಾಂಬರವುಟ್ಟು ಹೊಂಬಣ್ಣಾಂಬರವಿಟ್ಟು ಕಂಬೆಣ್ಣೆಯನೆ ಬಿಟ್ಟು ದಿಗಂಬರನಾಗಿದ್ದು 2 ಬುತ್ತಿ ಮೊದಲಾದ ಉತ್ತಮನೈವೇದ್ಯ ಹೊತ್ತಿಗುಂಬೋದು ಬಿಟ್ಟು ತುತ್ತುಗಾಣದಿರುವೋದು 3 ಭಾಗ್ಯವಂತನು ನೀನು ಭಾಗ್ಯರೂಪಳು ರಾಣಿ ಭಾಗ್ಯತನವ ಬಿಟ್ಟು ನಿರ್ಭಾಗ್ಯನಾಗಿರುವೋದು 4 ದಾತಗುರುಜಗನ್ನಾಥ ವಿಠಲ ಜಗದಿ ನಾಥನಾಗದೆ ಅನಾಥನಾಗಿರುವೋದು 5