(Iೂ) ಕ್ಷೇತ್ರ ವರ್ಣನೆ
(1) ಶ್ರೀರಂಗ, ತಿರುಪತಿ, ಕಂಚಿ,ಮೇಲುಕೋಟೆ, ಹೆಜ್ಜಾಜಿ
ಮಂಗಳವು ಶ್ರೀರಂಗ
ಅಂಗನೆ ಮಣಿದೇವಿಗೆ ಪ
ಅಂಗಿಯಾದ ಆದಿಶೇಷ ಉ-
ತ್ತುಂಗ ವರ ವಿಭೀಷಣನಿಗೆ ಅ.ಪ
ಸಪ್ತಗಿರಿ ಶ್ರೀನಿವಾಸ
ಅಪ್ಪೀರ ಅಲರ್‍ಮೇಲಮ್ಮಗೆ
ಗುಪ್ತವಾಗಿ ಉಭಯ ರಕ್ಷ
ಸುಪ್ತ ಗೋವಿಂದರಾಜಗೆ 1
ಕಂಚಿ ವರದರಾಜನಿಗೆ
ಮಂಚದ ಪೆರುನ್ದೇವಿಗೇ
ಹೊಂಚಿ ಬ್ರಹ್ಮಯಜ್ಞದಲ್ಲಿ
ಮಿಂಚುವ ದೇವರಾಜಗೇ 2
ಯದುಶೈಲ ಚೆಲ್ವರಾಯ
ಮುದದಿ ಯದುಗಿರಿಯಮ್ಮಗೆ
ಪಾದ ಸಂಪತ್ತೆ
ಅದುಭುತರು ಯತಿರಾಜಗೆ 3
ಹೆಜ್ಜಾಜಿ ಕೇಶವನ ಪೀಠ
ಅಜ್ಜ ಶ್ಯಾಮನ ವಿರಜೆಯಲ್ಲಿ
ಮಜ್ಜನಗೈಸಿ ಸೇವೆಗಾಗಿ
ಸಜ್ಜುಗೈದ ವೈಕುಂಠಕೆ 4