ದಾಸ ಸಂಚಯ

ಇಂದಿನ ಕೀರ್ತನೆ

ದಯಮಾಡೊ ದಯಮಾಡೋಪಯಸಾಗರದೊಡೆಯನೆ ಶ್ರೀಕೃಷ್ಣಾ ಪ
ಬನ್ನಬಿಡಿಸುವರ್ಭಕನ ದುರಿತವಘನ್ನ ಮಹಿಮ ನೀಜವದಿಂ ತರದು 1
ನೀ ಪೊರಿಯದೆ ಜರಿದರೆ ಕಾಯ್ವರನಾ |
ಈ ಪೊಡವಿಯೊಳೆಲ್ಲೆಲಿ ಕಾಣೇ 2
ಶೇಷಗಿರಿ ನಿಲಯ ಬಿನ್ನಪ ಲಾಲಿಸೋ |
ಶ್ರೀಶ ಪ್ರಾಣೇಶ ವಿಠಲ ದಯಾಳೋ 3

--- ಶ್ರೀಶಪ್ರಾಣೇಶವಿಠಲರು