ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಾಸಿ ತಿಮಿರದಿನಪ ಪ ಈಶನ ವರಸುತ ದಾಸ ಜನರ ಹಿತ ಪಾಶಾಂಕುಶ ಹಸ್ತ ಅ.ಪ ವಿದ್ಯೆ ಪ್ರದಾಯಕ ಬುದ್ಧಿ ಪ್ರಬೋಧಕ ಸಿದ್ಧಿದ ಶ್ರೀ ಬೆನಕ ಹೊದ್ದಿ ನೆನೆವ ಭಕ್ತರುದ್ಧರಿಸುವ ಶಕ್ತ ಮುದ್ದು ಮುಖವ ತೋರಿತ್ತ 1 ಗಿರಿಜೆ ಸತ್ಕುವರನೆ ದ್ವಿರದ ಸುವದನನೆ ಶರಣರ ಪಾಲಿಪನೆ ಪೊರೆಯನ್ನ ಸದ್ದಯದಿ 2 ಕಿಂಕರ ಶಂಕರ ಶತ್ರುಭಯಂಕರ ಶಂಖಚಕ್ರಾಬ್ಜಧರ ಪಂಕಜ ಮುಖವ ತೋರ 3 ರಕ್ತ ವಸ್ತ್ರಾನ್ವಿತ ರಕ್ತ ಗಂಧಾಕ್ಷತ ರಕ್ತ ಮಾಲಾದಿಧೃತ ಭಕ್ತ ಜನಾವನ ಶಕ್ತನೆ ನೀ ಎನ್ನ ಚಿತ್ತದಿ ಪೊಳೆಯೊ ಘನ್ನ 4 ವೇದನಿಕರ ಸುಗೀಯ ಸಾಧು ಸಜ್ಜನ ಸಮ್ಮತ 5 ಇಂಬಿಟ್ಟಿಯೆಂದು ನಿನ್ನ ಅಂಬರೊ ಸುಗುಣಸಿಂಧು 6 ವಕ್ರವ ತುಂಡಿಪ ಕತದಿಂದಲಪ್ಪ ವಕ್ರತುಂಡನು ನೀನಪ್ಪ ಶಕ್ರ ಪೂಜಿಸಿದನು ವೃತ್ರನ ವಧೆಗಿನ್ನುಪಕ್ರಮದಲೆ ತಾನಿನ್ನು 7 ಪರಿವಾರಸಹಿತ ಘನ್ನ ಧುರದಲ್ಲಿ ಬಿದ್ದನು ವರ ಧರ್ಮ ಗೆದ್ದನು ಎರಗಿ ಅರ್ಚಿಸಿ ನಿನ್ನನು 8 ದುರಳ ದಶಾನನ ಸರಕುಮಾಡದೆ ನಿನ್ನ ಗರುವದಿಂದಿರಲವನ ಪರಿಭವ ಕಾರಣವಾದುದೆಂಬರು ಕಣ ಶರಣಜನಾಭರಣ 9 ನೇಮದಿರುತಿದ್ದು ಹೇ ಮಹಿಮ ಖರ ದಶಶಿರನನ್ನು ಧುರದಲ್ಲಿಗೆದ್ದನು ಕರುಣೆಯೆ ಒರೆಯಲೇನು 10 ಕೋರಲು ಸಿದ್ಧಿ ಅಂದು ತೋರಿದೆ ಕರುಣವ ಚಾರುಕರದಿ ಅವನಾರೈಸಿ ಕರುಣಾರ್ಣವ 11 ಮುಪ್ಪುರ ಗೆದ್ದನು ಮುಕ್ಕಣ್ಣ ನಿನ್ನನು ತಪ್ಪದೆ ನೆನೆದವನು ಅಪ್ಪನೆ ನಿನ್ನಯ ಗೊಪ್ಪ ಚರಿತ್ರೆಯ ಇಪ್ಪಂತೆ ಪೇಳಿಸಯ್ಯ 12 ಸೃಷ್ಟಿಕರ್ತನು ತನ್ನ ಸೃಷ್ಟಿಗೈಯ್ಯಲು ಮುನ್ನ ಮುಟ್ಟಿಭಜಿಸಿದ ನಿನ್ನ ಎಷ್ಟೆಂತ ಪೇಳಲಿ ಶ್ರೇಷ್ಠಗುಣಾವಳಿ ಅಷ್ಟೆಲ್ಲ ನೀನೆ ಬಲ್ಲಿ 13 ಮಾಧವ ಪೊಂದಿದ ನಿನ್ನನವ ದ್ವಂದ ವಿವಾಹಾದುದು 14 ಭಾರತ ಬರೆಯಲು ಆಕಾರ ನೋಡಲು ತೋರದೆ ಇರುತಿರಲು ಶೂರನೆ ನಿನ್ನನು ಅರಿಸಿ ವ್ಯಾಸನು ಬೀರಿದ ಮಹಿಮೆಯನು 15 ಏನು ಕರುಣವಯ್ಯ ಶ್ರೀನಿಕೇತನಿಗೈಯ್ಯಾ ತಾನೆ ಇತ್ತಿಹನಯ್ಯ ಆನತಿಸಲು ಇಷ್ಟ ಮಾಣಲು ಸಂಕಟ ನೀನು ಕೊಡೆನುತದಟ 16 ಭಜಿಪರ ಭಾಗ್ಯದ ಯಜಿಪರಭೀಷ್ಟದ ತ್ಯಜಿಪರ ಸಂಕಟದ ಪಡಿ 17 ಜಯ ಜಯ ಕಾಪಿಲನೆ ಫಾಲ ಜಯ ಗಜಮುಖನೆ 18 ದ್ವಾದಶ ನಾಮವ ಆದರದಿಂದಾವ ಓದುವ ಕೇಳುವವ ಆದಿ ಪೂಜಿತನೊಲಿವ 20 ವಿದ್ಯಾರಂಭದಿ ಮುದ್ದು ವಿವಾದÀದಿ ಪೊದ್ದಲ್ಲಿ ನಿರ್ಗಮದಿ ಯುದ್ಧದಿ ನಿನ್ನನು ಬದ್ಧದಿ ನೆನೆವನು ಗೆದ್ದಪನೈ ಅವನು 21 ಏಕವಿಂಶತಿಪದ ಕೋಕನಪುಷ್ಪದ ಶ್ರೀಕರ ಮಾಲೆ ಇದ ಶ್ರೀಕಾಂತ ವರಭಕ್ತ ನೀ ಕರುಣಿಸೆಂದಿತ್ತ ಸ್ವೀಕರಿಸೈ ಮಹಂತ 22 ಬೆಂಗಳೂರಿನಲಿ ತುಂಗರೂಪದಲ್ಲಿ ಕಂಗೊಳಿಸುತಲಿಲ್ಲಿ ಹಿಂಗದೆ ಪೊರೆವೆನೆಂದ 23 ಬಾಲಕೃಷ್ಣಾರ್ಯರ ಬಾಲ ಲಕ್ಷ್ಮೀನಾರಾಯಣನೆಂಬ ಸತ್ಪೆಸರ ತಾಳಿದ ಶರಣನು ಮೇಳೈಸೀನುತಿಯನು ಓಲಗಿಸಿದ ನಿನ್ನನು 24 ಪೊಂದುವ ಮೋದವನು ಇಂದುಧರನ ಸುತನಂದದಿ ಸದ್ಭಕ್ತವೃಂದ ರಕ್ಷಿಪ ಸಂತತ 25 ನಮೋ ಸಾಕುವ ಮಹಿಮ ನಮೋ ಭೀಕರ ಬಿಡಿಸೆನ್ನ ನೀ ಕರುಣಿಸು ಮುನ್ನ ಶ್ರೀಕಾಂತ ಭಕ್ತಿಘನ್ನ 26 ಮಂಗಳ ಸದ್ವಿದ್ಯಾಬುದ್ಧಿದ ಜಯ ಜಯ ಮುಂಗಳ ಸಿದ್ಧದನೆ ಮಂಗಳ ವರ್ಧಿತನೆ 27
--------------
ಲಕ್ಷ್ಮೀನಾರಯಣರಾಯರು
ಉರುಠಾಣೆ ಮಾಡುವೆ ಅರಸ ನಿನಗೆ ನಾ ಪ ಸ್ಮರಶತ ಸುಂದರ ಸರ್ವಲೋಕೇಶ್ವರ ಚರಣಸೇವೆಕಳ ಕರುಣದಿ | ನೋಡು ದ- ಶುಭ ಚರಿತ ಅ.ಪ ಕರಕಮಲವ ದಯಮಾಡು | ನಿನಗೆ ನಾ ಅರಿಸಿನ ಪೂಸುವೆ ಸರಸಿಜನಯನ 1 ದಿಟ್ಟ ಲಲಾಟವ ಕೊಟ್ಟರೆ | ಕುಂಕುಮ ವಿಟ್ಟು ತಿದ್ದುವೆನು ಸೃಷ್ಟಿಗೊಡೆಯನ 2 ಪರಮ ಪುರುಷ ನಿನ್ನ | ಶಿರಕೊರಳಿಗೆ ನಾ ಧರಿಸಿ ಲೇಪಗೈಯ್ಯುವೆ ಪ್ರಾಣೇಶಾ 3 ಪರುಷೋತ್ತಮ ಭಾಸ್ಕರ ಕುಲತಿಲಕ 4 ಹೇಮದ ತಟ್ಟೆಯ ತಾಂಬೂಲವ | ಗುರು- ರಾಮವಿಠಲ ತವಕದಿ ಸ್ವೀಕರಿಸೈ 5
--------------
ಗುರುರಾಮವಿಠಲ
ನೀಲ ಸುಂದರ ಲೀಲವಿಗ್ರಹನೆ ಪ ಭಂಜನ ಬಾರೈ ಉರುಟಣೆಗೆ ಅ.ಪ. ಸಾರಸ ರೇಖರಂಜಿತ ಪಾದಪಂಕಜಕೆ ನವ್ಯಮಾದ ಸುಗಂಧ ಚೂರ್ಣವ ನಿಂದು ಲೇಪಿಸುವೆ 1 ಫಾಲ ಫಾಲ ದೇಶದಿ ನಾಂ ಇಂದು ತಿಲಕವ ತಿದ್ದಿ ನಿಲವೆನು ಪ್ರಾಣ ನಾಯಕನೆ 2 ಸಾಧು ರಕ್ಷಣ ದಕ್ಷ ರಾಕ್ಷಸ ಶಿಕ್ಷ ಭುಜಯುಗಕೆ ಶ್ರೀಧರಿತ್ರೀಫಾಲ ಲೋಲನೆ ಗಂಧವ ಲೇಪಿಸುವೆ 3 ಕಂಬುಕಂಠ ಶ್ರೀಕಂಠ ಮಿತ್ರನೆ ನಿನ್ನಯ ಕಂಠಕೆ ನಾಂ ಅಂಬುಜೋಪಮ ಹಸ್ತದಿ ಗಂಧವ ನಿಂದು ಲೇಪಿಸುವೆ 4 ಚಕೋರ ಚಂದ್ರನೆ ಮಾಲೆಯನರ್ಪಿಸುವೆ ಧೇನುನಗರ ಶ್ರೀರಾಮಚಂದ್ರನೆ ವೀಟಿಯ ಸ್ವೀಕರಿಸೈ 5
--------------
ಬೇಟೆರಾಯ ದೀಕ್ಷಿತರು
ಸೀಸ ಪದ್ಯ ರಘುನಾಯಕ ನಿನ್ನ ರಾತ್ರಿ ಹಗಲು ನೆನೆವೆ ರಾಘವಾ ಕೈಪಿಡಿದು ಸಲಹನ್ನನು ಪ ಸೀತಾ ಮನೋಹರಾ | ಶ್ರೀ ರಾಮಚಂದಿರಾ ಪಾತಕಾಮೃಗವಳಿದು | ಪರಮಧೀರಾ 1 ಶಬರಿ ಫಲಗಳ ತಿಂದು | ಶಾಶ್ವತಾ ಫಲವಿತ್ತು ಅಗಣಿತಾಗುಣಧಾಮ | ಆನಂದ ರಾಮ 2 ಸೇತು ಮಾರ್ಗದೊಳಿಂದ | ಆತ ರಾವಣನ ಕೊಂದ ಸೀತೆಯನು ತಂದ ಪ್ರಖ್ಯಾತಮಹಿಮಾ 3 ಲೋಕದೊಳು ನೇಮ ನಿನ್ನ | ಪಾಪಹರ ನಾಮ ವಾಲ್ಮೀಕಿ ಜಪಿಸಿದಾ ಶ್ರೀ ರಾಮನಾಮ 4 ಶ್ರೀ ಕಾಂತ ನರಸಿಂಹ ವಿಠಲಾ | ಸ್ವೀಕರಿಸೈಗಂಧವಾದೇವ 5
--------------
ಓರಬಾಯಿ ಲಕ್ಷ್ಮೀದೇವಮ್ಮ
ಸ್ವೀಕರಿಸೈ ಕರುಣಾಕರ ಶ್ರೀವರ ಲೋಕವಂದಿತ ಪ್ರಭುವೆ ಪ ಮಾಕಮಲಾಸನ ನಾಕಪಾಲವಂದ್ಯ ಮಾತುಳಾಂತಕ ಮಧುಸೂದನ ಶ್ರೀಹರಿ ಅ.ಪ ಮಾವು ಮಾದಳ ದ್ರಾಕ್ಷ ಬಾಳೆ ಕಿತ್ತಳೆ ಮೊದಲಾದ ಫಲಗಳೆಲ್ಲ ಮಾಧವ ನೀನಿದನಾರೋಗಣೆ ಮಾಡು ಶ್ರೀ ರಮಣಿಯ ಪ್ರಿಯ ಶ್ರೀನಿವಾಸನೆ ಬೇಗ 1 ನಾನಾ ವಿಧದ ಫಲ ಹಾಲು ಸಕ್ಕರೆ ಬೆಣ್ಣೆ ನಾರಾಯಣ ನಿನಗೆ ಬಾಲೆ ಲಕುಮಿ ಪರಮಾದರದಿಂದಲಿ ಸೇವೆಗೆ ಪರಮಾನ್ನವನರ್ಪಿಸುವಳು2 ತನುವೆಂಬೊ ತಟ್ಟೆಯೊಳಿರಿಸಿ ಫಲವ ನಿ- ರ್ಮಲಮನವೆಂಬ ವಸ್ತ್ರವನ್ಹೊದಿಸಿ ಸನ್ಮತವೆಂಬ ಸಾರಣೆಮಾಡಿ ನಮ್ಮ ಗುರುಕರುಣದ ರಂಗವಲಿಯನ್ಹಾಕುವೆ 3 ನವವಿಧ ಭಕುತಿಯ ನಳನಳಿಸುವ ವೀಳ್ಯ ಚಲುವ ಶ್ರೀ ಹರಿ ನಿನಗೆ ಸವಿನಯ ನುಡಿಗಳ ಮಂತ್ರ ಪುಷ್ಪಗಳು ಸನಕಾದಿವಂದ್ಯ ಸರ್ವೇಶ ಶ್ರೀ ಕೃಷ್ಣ 4 ಕ್ಷೀರ ಸಾಗರವಾಸಿ ಶ್ರೀ ಭೂರಮಣನೆ ಮಾರಜನಕ ಹರಿಯೆ ಕಾರುಣ್ಯಸಾಗರ ಕಮಲನಾಭ ವಿಠ್ಠಲ ಪಾರುಗಾಣಿಸೊ ಭವಸಾಗರದಿಂದಲಿ5
--------------
ನಿಡಗುರುಕಿ ಜೀವೂಬಾಯಿ
ಸ್ವೀಕರಿಸೈ ಲೋಕನಾಥನೆ ಪ್ರಖ್ಯಾತಪ್ರಿಯನೆ ತಾಂಬೂಲವ ಪ ನೀಲವೇಣಿಯು ಜಾಲಮಾಡದೆ ಶೀಲದಿಂ ಈ ವೀಳ್ಯವ ವೇಳೆಯರಿತು ತಂದಿಹೆನು ಗೋಪಾಲಬಾಲ ತಾಂಬೂಲವ 1 ಕಮಲ ನಯನೆ ಕಮಲವದನೆ ವಿಮಲ ಮನದಲಿ ವೀಳ್ಯವ ತಾಂಬೂಲವ 2 ಗಾನಲೋಲನೆ ದೀನಪಾಲನೆ ಪ್ರಾಣನಾಥವಿಠಲನೆ ಸಾನುರಾಗದಿ ತಂದ ವೀಳ್ಯವ ಪ್ರಾಣನಾಥನೆ ಕರುಣದಿಂ3
--------------
ಬಾಗೇಪಲ್ಲಿ ಶೇಷದಾಸರು
ಸ್ವೀಕರಿಸೈ ವೀಳ್ಯಮಿದನು ಶ್ರೀಕರಾಬ್ಜಪಾಣಿಯಿಂ ಪ. ಲೋಕನಾಥ ಪಾಲಿಸೆನ್ನ ಶ್ರೀಕಟಾಕ್ಷದಿಂದಲೆ ಅ.ಪ. ಪಚ್ಚಕರ್ಪೂರಯಾಲದಿಂದ ಹೆಚ್ಚು ವಾಸನೆಯನುತಳೆದ ಅಚ್ಯುತನೆ ವೀಳ್ಯಮಿದನು ಮೆಚ್ಚಿ ನೀಡುತಿರುವೆನು 1 ತಟ್ಟೆಯನ್ನು ಪಿಡಿದು ಎನ್ನ ರಟ್ಟೆಗಳಿದು ನೊಂದವೈ ಸಿಟ್ಟುಮಾಡದೀಗ ದಯದಿ ದಿಟ್ಟಿಸೈ ಮದೀಶನೇ 2 ಲಲಿತಗಾತ್ರ ಎನ್ನೊಳಿಂತು ಚಲಮಿದೊಳ್ಳಿತೇನೆಲೈ ಜಲಜನೇತ್ರ ಶೇಷಶೈಲನಿಲಯ ನಿನ್ನ ನಮಿಪೆನೈ 3
--------------
ನಂಜನಗೂಡು ತಿರುಮಲಾಂಬಾ
ಹಾಕುವೆ ಸುಮಾಲಾ ಸುಶೀಲಾ ಸ್ವೀಕರಿಸೈ ಕರುಣಾಕರ ಕಂಠದಿ ಪ ಅರಳಿದ ಮಲ್ಲಿಗೆ ಸುರಸು ಶಾವಂತಿಗೆ ಪರಿಮಳ ಪುಷ್ಪದ ಸರವನು ಶಾವಂತಿಗೆ ಪರಿಮಳ ಪುಷ್ಪದ ಸರವನು ವಿರಚಿಸಿ 1 ಜೀವದೊಡೆಯ ಪರದೇವತೆ ನೀನೆಂಬೊ ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 2 ಶಾಮಸುಂದರ ನಿನ್ನ ನೇಮದಿ ನೆನೆವೆನು ಭಾಮೆಯನಗಲದೆ ಪ್ರೇಮದಿ ಪೊರೆ ಎಂದು 3
--------------
ಶಾಮಸುಂದರ ವಿಠಲ