3. ನವಗ್ರಹ
ಸಕಲಗ್ರಹಬಲವು ನೀನೆ ಶ್ರೀನಿವಾಸ
ಸುಖದಾಯಕನೇ ಅಖಿಲೇಶ್ವರ ಪ
ಆರ್ತರ ಸಲಹುವ ಮಾರ್ತಂಡ ಬಲವು
ಕೀರ್ತಿಯನೀಯುವ ಚಂದ್ರನ ಬಲವು
ಪಾರ್ಥಿವರಗೈವ ಭೂ ಪುತ್ರ ಬಲವು 1
ವಿದ್ಯಾದಾಯಕನಾದ ಬುಧನ ಬಲ
ಅದ್ಭುತ ಭಯಹರ ಶ್ರೀಗುರುವೊಲವು
ಶುದ್ಧ ಸತ್ವದ ಶುಕ್ರನ ನಲಿವು 2
ಅನವರತವು ಶುಭದಾಯಕ ಶನಿಫಲ
ಅನಿಷ್ಟಹಾರಕ ರಾಹುಕೇತು ಬಲ
ಅನುದಿನ ಧ್ಯಾನಿಪೆ ಜಾಜೀಕೇಶವ 3