ಶುಭ ಮಂಗಳಂ
ಮಂಗಳಂ ಹರಿಸಚ್ಚಿದಾನಂದಗ
ಮಂಗಳಂ ಅಚ್ಯುತಾನಂತ ಗೋವಿಂದಗೆ
ಮಂಗಳಂ ವಿಧಿಭವಾಮರ ವಂದ್ಯಗೆ ಪ
ಆನಂದ ಕೋಶಗ ಅಖಿಳಜನಪೋಷ
ದಾನವಿನಾಶಗ ದೇವೇಶಗ
ವನಮೂಲಭೂಷಗವರದ ಹೃಷೀಕೇಶಗ
ಮುನಿಜನೋಲ್ಲಾಸಗ ಧರಿಣೀಶಗೆ 1
ಮಾಯಾ ವಿಮುಕ್ತಗ
ಸಕಲಗುಣಯುಕ್ತಗ ವಿರಹಿತಂಗೆ
ಭಕ್ತಾನುರಕ್ತಗ ಚಿಂತ್ಯ ಅವ್ಯಕ್ತಗ
ಅಕುತೋಭಯದಾ ತಗ ಜದಧಾತಗೆ 2
ವರಯದುರಾಯಗ ನಂದ ಕುಮಾರಗ
ಸುರಸಹಕಾರಗ ಸುಂದರಗ
ದುರಿತ ಸಂಹಾರಗ ಅಮಿತಾವತಾರಗ
ಗುರುಮಹೀಪತಿ ನಂದ ನೋದ್ಧರಗೆ 3