ದೇಶಿಕರಿಗೆ ದೇವ ನೀನಹುದಯ್ಯ
ಲೇಸು ಲೇಸಾಗಿ ಪಾಲಿಸೊ ಎನ್ನಯ್ಯ ಧ್ರುವ
ಅನಾಥನಾಥ ನೀನೆ ಸಾನುಕೂಲ
ಅನುದಿನ ಮಾಡುವೆ ನೀ ಪ್ರತಿಪಾಲ 1
ಅಣುರೇಣುಕ ಸಾಹ್ಯ ಮಾಡುವ ಸ್ವಾಮಿ
ನ್ಯೂನ ನೋಡದೆ ತಪ್ಪು ಮಾಡುವಿ ಕ್ಷಮೆ 2
ನೀನೆ ಸಕಲಕೆಲ್ಲ ಸಲಹುವ ದಾತ
ಜನವನದೊಳು ಘನಗುರು ಸಾಕ್ಷಾತ 3
ದೇವಾದೀದೇವ ಶ್ರೀದೇವ ಅವಧೂತ
ಭವ ಹರ ಗುರು ನೀನೆ ಸದೋದಿತ 4
ದೀನಮಹಿಪತಿ ಸ್ವಾಮ್ಯಹುದೋ ಕೃಪಾಲ
ಭಾನುಕೋಟಿತೇಜ ನೀನೆ ಅಚಲ 5