ನಿನ್ನ ನಂಬಿದೆ ಓ ಶಾರದೇ ಪ
ಸನ್ನುತಾಂಗಿ ಇನ್ನೂ ಕರುಣ ಬಾರದೆ ಅ.ಪ
ಸಕಲಕಳಾಧರೆ ಸಕಲಕಲಾಧರೆ
ವಿಕಸಿತ ಸುಮಹಾರೆ ಜ್ಞಾನಸಮೀರೆ
ಪ್ರಕಟಿತ ಮಧುರ ಜಪಮಾಲಾಕರೆ
ಶಿಖಿ ವೀಣಾಧರೆ ಮೃದುತನುರುಚಿರೆ 1
ಧಾತಾ ಮನೋನ್ಮಣಿ ಧ್ವಾಂತ ಸಂಹಾರಿಣಿ
ಪಾತಕವಾರಿಣಿ ಮಾತೆ ಕಲ್ಯಾಣಿ
ಭೂತಲ ಕಣ್ಮಣಿ ರಾಗತರಂಗಿಣಿ
ಖ್ಯಾತಚರಿತ ಮಾಂಗಿರಿವರತೋಷಿಣಿ 2