ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ |
ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ಪ
ದುರುಳ ಪಾಮರ ಸಂಕರನೆಂಬುವನು |
ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ |
ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ |
ವರರು ಇರದಂತಾಗೆ ಸುಜನರು ಕೂಗೆ 1
ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ |
ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ |
ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ |
ನಳಿನನಾಭನ ಚರಣ ಮನದಲಿಟ್ಟ ಪರಣಾ 2
ಇಪ್ಪತ್ತು ಒಂದು ದುರ್ಮತದ ವರ ಕುವಾಕು |
ಸರ್ಪನನ್ ಗರುಡ ಶೀಳಿದಂತೆ ಕೇಳಿ |
ಇಪ್ಪ ಬಲು ಅಜ್ಞಾನ ಓಡಿಸಿ ಸುಜ್ಞಾನ |
ತಪ್ಪದಲೆಗರದು ಸಂತರನೆಲ್ಲ ಪೊರೆದು 3
ಮಿಥ್ಯ |
ಪಂಚವಿರಹಿತ ಹರಿ ಪರನೆಂದು ಸಾರೀ |
ಚಂಚಲವ ಪರಿಹರಿಸಿ ಮರುತ ಮತ ಉದ್ಧರಿಸಿ |
ಕಾಯ ಸುಖ ತೀರ್ಥರಾಯಾ4
ಸುರರಾದಿಗಳ ಮಣಿಯ ಆರಾರು ನಿನಗೆಣೆಯೇ |
ಅರಸಿದರೆ ಕಾಣೆ ಹರಿ ಪದಗಳಾ ಆಣೆ |
ಶಿರಿ ವಿಜಯವಿಠ್ಠಲನ್ನ ಭಜಿಸುವ ಯತಿರನ್ನ |
ಶರಣಪಾಲಕ ಪೂರ್ಣಪ್ರಜ್ಞ ಗುಣಪೂರ್ಣ 5