ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟರಮಣನೆ ಸಂಕಟಹರಣನೆ ಶಂಖ ಚಕ್ರ ಪೀತಾಂಬರನೆ ಪ ಪಂಕಜನಾಭನೆ ಪರಮಗೋವಿಂದನೆ ಲಂಕೆ ವಿಭೀಷಣ ನಿಗಿತ್ತವನೇ ಅ.ಪ ಹಿಂದನ ಕರ್ಮದಿನೊಂದೆನು ನಿನ್ನಯ ಕಂದನಮೊರೆಯನು ಲಾಲಿಪುದೂ ಬಂದಿಸಿ ಭವಗಳ ಹೊಂದಿಸೊ ನಿಜಪುರ ಚಂದದೆ ಕ್ಷಿತಿಯೊಳ್ ಪಾಲಿಪುದೂ 1 ಘಾಸಿ ಬಿಡಿಸಿ ನಿಜದಾಸನ ಮಾಡೆಲೊ ಈಶನೆ ಕೇಶವ ಮೂರಿತಯೇ ಆಸೆಯ ತೀರಿಸಬೇಕೈಯಾ ಭವ ನಾಶನೆ ಪಾರ್ಥವ ಸಾರಥಿಯೆ 2 ಪರಿಪರಿ ಭವಗಳ ಹರಿಯುವನೆನ್ನುತಾ ಕರದೊಳು ಕಂಕಣ ಕಟ್ಟಿರುವೇ ಮೊರೆ ಬಿದ್ದೆನು ಶ್ರೀ ತುಲಸೀರಾಮನ ಸ್ಮರಣೆಯ ಹೃದಯದೊಳಿಟ್ಟರುವೆ 3
--------------
ಚನ್ನಪಟ್ಟಣದ ಅಹೋಬಲದಾಸರು