ಚಿಂತೆಮಾಡಲಿ ಬೇಡೋ ಮನವೇ
ಭ್ರಾಂತಿಪಡಲಿ ಬೇಡೋ ಪ
ಚಿಂತೆಭ್ರಾಂತಿಗಳೆಲ್ಲ ಕಂತುಜನಕಗೆಂದು
ಸಂತಸವಹಿಸು ನಿನಗೆಲ್ಲಿದೆ ಕೇಡೋ ಅ.ಪ
ಮಾನವಮಾನವೆಲ್ಲ ಮನವೆ
ಹೀನಭಾಗ್ಯ ಸಕಲ
ಧ್ಯಾನದಾಯಕ ಶ್ರೀವೇಣುಗೋಪಾಲಗೆಂದು
ಆನಂದ ತಾಳುಮತ್ತ್ಹಾಳು ನಿನಗಿಲ್ಲೋ 1
ದು:ಖ ಸಂಕಟವೆಲ್ಲ ಮನವೆ
ಮಿಕ್ಕ ಕಂಟಕವೆಲ್ಲ
ಅಖಿಲವ್ಯಾಪಕ ಶ್ರೀಭಕುತಿದಾಯಕಗೆಂದು
ಸುಖವಹೊಂದು ಮತ್ತು ದು:ಖ ನಿನಗಿಲ್ಲೋ 2
ಕುಂದು ನಿಂದೆಯೆಲ್ಲ ಮನವೆ
ತಾಪ ನಿಖಿಲ
ಸಿಂಧುನಿಲಯ ನಮ್ಮ ತಂದೆ ಶ್ರೀರಾಮನಿಗೆಂದು
ನಂಬು ಭವಬಂಧ ನಿನಗಿಲ್ಲೋ 3