ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಆಳ್ವಾರಾಚಾರ್ಯ ಸ್ತುತಿಗಳು (1) ಆಂಜನೇಯ ನೋಡಿರೈ ಕಣ್ದಣಿಯಾ ಸಜ್ಜನರೆಲ್ಲ ಪಾಡಿರೈ ಮನದಣಿಯಾ ಪ ಗಾಢಭಕುತಿಯನಾಂತು ಭಜನೆಯ ಮಾಡುವರ ದುರಿತಗಳನೋಡಿಸಿ ಕೂಡೆನಿರ್ಮಲರೆನಿಸಿ ಪೊರೆವಾ ರೂಢನಹ ಮಾರುತಿಯ ಮೂರ್ತಿಯ ಅ.ಪ ಉಡಿಯೋಳ್ ಘಂಟೆಗಳೆಸೆಯೆ ಚರಣದೊಳುಳ್ಳ ತೊಡರುಗಗ್ಗರಮುಲಿಯೆ ರ್ಕಡೆಯ ಕರ್ಣದಿ ಪೊಳೆಯೆ ಕಡಗ ಮಣಿಮಕುಟಗಳ ಪೇರುರ ದೆಡೆಯ ವಜ್ರದಪದಕ ಮೊದಲಹ ತೊಡಿಗೆಗಳ ಸಡಗರದೊಳೊಪ್ಪುವ ದೃಢತರದ ಮಾರುತಿಯ ಮೂರ್ತಿಯ 1 ಭರದಿಂದ ಶರನಿಧಿಯಾ ಲಂಘಿಸಿ ಪೊಕ್ಕಾ ನಿರುಪಮತರ ಲಂಕೆಯ ಗುರಿಗೊಂಡರಸಿ ಸೀತೆಯಾ ಕಂಡಾರಘು ವರನುರುಮುದ್ರಿಕೆಯ ಕರದೊಳಿತ್ತಾರಮಣಿಯಿಂ ವಿ ಸ್ಫುರಿಪ ಚೂಡಾಮಣಿಯ ಕೈಕೊಂ ಡಿರದೆ ಬಂದೊಡೆಯಂಗೆ ಸಲಿಸಿದ ಪರಮಬಲಯುತನಮಳಮೂರ್ತಿಯ 2 ವಾದವಿದೂರನನು ಪಾವನ ಮೃದು ಪಾದಾರವಿಂದನನು ವೇದಾಂತವೇದ್ಯನನು-ಸನ್ನುತಪರ ನಾದಾನುಮೋದನನು ಸಾದರದೊಳೈತಂದು ಪ್ರಾರ್ಥಿಪ ಸಾಧುಸಂತತಿಗೊಲಿದು ಪರಮಾ ಮೋದದಿಂ ಪರಮಾರ್ಥವಿಷಯವ ಬೋಧಿಸುವ ಮಾರುತಿಯ ಮೂರ್ತಿಯ 3 ರಂಗನಾಥನದೂತನ ಸತ್ಕರುಣಾಂತ ರಂಗನಾರ್ತಪ್ರೀತನ ಕಂಗೊಳಿಸುವ ನೂತನಪುರವರದೊಳು ಹಿಂಗದೊಪ್ಪಿರುವಾತನ ಮಂಗಳಾತ್ಮನ ಮೋಹದೂರನ ಸಂಗರಹಿತನ ಸತ್ಯಚರಿತನ ರಂಗದಾಸಪ್ರಣಿತಮಹಿಮೋ ತ್ತುಂಗ ಶ್ರೀ ಮಾರುತಿಯ ಮೂರ್ತಿಯ 4
--------------
ರಂಗದಾಸರು
ಎಂತು ಶೋಭಿಸುತಿಹಳು ಈ ಕನ್ನಿಕೆಸಂತೋಷದಿಂದಲಿಸುರರುಸ್ತುತಿಸುತಿರಲುಪಮಂಧರಗಿರಿ ತಂದು ಸಿಂಧುವಿನೊಳಗಿಟ್ಟುಚಂದದಿಂ ಮಥಿಸಲಮೃತ ಪುಟ್ಟಲುಬಂದು ದಾನವರ ಪಹರಿಸಬೇಕೆನುತಿರಲುನಿಂದರುಸುರರುಮುಂದೋರದೆ ಚಿಂತಿಸೆಇಂದಿರಾಪತಿ ಇವರ ಭಾವವಕಂಡುಮನದಲಿ ಹರುಷಪಡುತಲಿಬಂದು ಅಸುರರ ಸುರರ ಮನ್ನಿಸಿನಿಂದ ಶ್ರೀ ಗೋವಿಂದ ಮುದದಲಿ 1ಸಾಲಾಗಿ ಕುಳಿತಿರಿ ಮೇಲಾದಮೃತವನ್ನುಲೀಲೆಯಿಂದಲಿ ಬಡಿಸುವೆನೆನ್ನಲುಕೇಳಿಅಸುರರು ಹರುಷತಾಳಿ ಸಂಭ್ರಮದಿಂದಸಾಲಾಗಿ ಕುಳಿತು ಆ ವೇಳೆ ನೋಡುತಲಿರಲುಶ್ರೀ ರಮಣ ಕರದಲ್ಲಿ ಕಲಶವÀಲೀಲೆಯಿಂದಲಿ ಪಿಡಿದು ನಿಲ್ಲಲುತಾಳಿ ಹರುಷವ ದಾನವರು ಸÀು-ಮ್ಮಾನದಿಂದಲಿ ನೋಡÀುತಿಹರು 2ಗಂಗೆಯ ಪಡೆದ ಪಾದಗಳ ಶೃಂಗಾರಅಂದಿಗೆ ಕಿರುಗೆಜ್ಹೆ ಸರಪಣಿಯುಚಂದುಳ್ಳ ಬೆರಳುಗಳಿಗೆ ಪಿಲ್ಲಿ ಕಿರುಪಿಲ್ಲಿ ಕಾ-ಲುಂಗರಗಳನಿಟ್ಟು ರಂಭೆಯಂತ್ಹೊಳೆಯಲುಬಂದಿ ಬಾಪುರಿ ಥಳಥಳಿಸುತಲಿಚಂದದನಾಗಮುರಿಗಿ ತಾಯಿತಸುಂದರಹಸ್ತಕಡಗ ಹಾಸರಇಂದಿರಾಕ್ಷಿ ಕೈ ಬಳೆಗಳ್ಹೊಳೆಯುತ 3ಹಲವು ಸೂರ್ಯರ ಕಾಂತಿ ಹೊಳೆವೊ ಪೀತಾಂಬರಸರಿಗೆ ಅಂಚಿನ ಕುಪ್ಪುಸವನೇ ತೊಟ್ಟುನಡುವಿಗೆ ನವರತ್ನ ಬಿಗಿದ ಪಟ್ಟೆಯನಿಟ್ಟುಸಡಗರದಲಿ ಆಣೆಮುತ್ತಿನ ಸರಗಳುಸರಗಿ ಏಕಾವಳಿಯು ವಜ್ರದಪದಕಗಳು ಥಳಕೆಂಬ ಸರಗಳುಕೊರಳ ಗೆಜ್ಜೆಟ್ಟಿಕೆಯು ಕಂಠಿಯುಮುರಳಿಸರ ಕಠ್ಠಾಣಿವಲಿಯುತ 4ಹೊಳೆವೊಗಲ್ಲಕೆ ಥಳಥಳಿಪ ಅರಿಶಿನಹಚ್ಚಿಹೊಳೆವೊ ಮೀನ್ ಬಾವುಲಿ ಕರ್ಣದಲಿಗಿಳಿಗೆಜ್ಜೆ ಚಳತುಂಬು ಬುಗುಡಿ ಬಾವುಲಿ ಚಂದ್ರಮುರುವುಸರಪಳಿಗಳು ಥಳಥಳ ಹೊಳೆಯಲುಆಣಿಮುತ್ತಿನ ಮುಖುರ ಬೇಸರಿಜಾಣೆ ನಾಶಿಕದಲ್ಲಿ ಹೊಳೆವ ಬು-ಲಾಕುನಿಟ್ಟಿ ಬೆಳಕು ಗಲ್ಲದಮೇಲೆ ಥಳಥಳ ಹೊಳೆವ ಕಾಂಚಿಯು 5ಸಣ್ಣ ಬೈತಲೆ ಬಟ್ಟು ಚಂದ್ರ ಸೂರ್ಯರ ನಿಟ್ಟುಹಿಂದೆ ಜಡೆಬಿಲ್ಲೆ ಗೊಂಡ್ಯಗಳನಿಟ್ಟುಚಂದ್ರ ಸೂರ್ಯರ ಪೋಲ್ವ ಚೌರಿ ರಾಗಟಿ ಜಡೆಬಂಗಾರ ಹೊಳೆಯುತ್ತ ಬಡನಡು ಬಳಕುತ್ತಕಂಗಳ ಕಡೆನೋಟದಿಂದಲಿಭಂಗಪಡಿಸುತ ಅಸುರ ಕೋಟಿಯಮಂದಗಮನದಿ ಅಡಿಯನಿಡುತಲಿಬಂದಳಮೃತದ ಕಲಶ ಪಿಡಿಯುತ 6ಕಂಗಳುಮುಚ್ಚಿ ಕುಳಿತಿರಲು ದಾನವ ಪಂಕ್ತಿಮುಂದೆ ಕಾಲ್ಗೆಜ್ಜೆ ಧ್ವನಿಯ ಮಾಡುತಅಂದಿಗೆ ಸರಪಣಿನಾದ ತುಂಬಲು ಭರದಿಸುಂದರಿ ಬಂದಿಹಳೆÀಂದು ದಾನವರೆಲ್ಲಮಂದಹಾಸದಿ ಮೈಮರೆತು ಮತ್ತೊಂದು ತೋರದೆ ಕಳವಳಿಸುತಲಿರೆಇಂದಿರೇಶನು ದೇವೆತೆಗಳಿಗೆಪೊಂದಿಸಿದ ಅಮೃತವನು ಹರುಷದಿ 7ಕಲಕಲಕೂಗುತ ಕಲಹಕೆನ್ನುತ ಬರೆಬಲವು ಸಾಲದೆ ಹಿಂದಿರುಗಲವರುಸುರರುಪುಷ್ಪದ ಮಳೆಕರೆದರು ದೇವನವರಋಷಿಗಳು ನೆರೆದು ಸ್ತುತಿಸಿ ಕೊಂಡಾಡಲುಪರಮಪುರುಷನೆ ಪುಣ್ಯಚರಿತನೆಗರುಡ ಗಮನನೆ ಉರಗಶಯನನೆಸರಸಿಜಾಕ್ಷನೆ ನಮಿಪೆವೆನ್ನುತಸನಕಾದಿಗಳು ಸಂಸ್ತುತಿಸೆ ದೇವನ 8ಪರಶಿವನಿದ ನೋಡಿ ಪರಿಪರಿ ಪ್ರಾರ್ಥಿಸಿತರುಣಿಯ ರೂಪವ ನೋಡಲನುವಾಗಲುಸರಸಿಜಾಕ್ಷನ ಸ್ತ್ರೀರೂಪ ನೋಡುತಲಿ ಮೈಮರೆದು ಕೈಮುಗಿದು ಕೊಂಡಾಡಿ ಸುತ್ತಿಸಿದನುಮರಳಿ ಭಸ್ಮಾಸುರನ ಭಾಧೆಗೆತರಹರಿಸಿ ಮುಂದೋರದಿರುವಸಮಯದಲಿ ಸ್ತ್ರೀರೂಪ ತಾಳುವತ್ವರದಿ ರಕ್ಷಿಸಿ ಪೊರೆದ ದೇವನು 9ಕಮಲಸಂಭವನಯ್ಯಕಮಲಜಾತೆಯ ಪ್ರಿಯಕಮಲಾಕ್ಷಕಂಸಾರಿಕರುಣಾನಿಧೆಶರಣು ಶರಣೆನ್ನುತ ನಭವ ತುಂಬಲು ಸ್ವರಸುರಗಂಧರ್ವರು ಪಾಡಿಪೊಗಳುತಿಹರೊ ದೇವಕನಕಗರ್ಭನ ಪಿತನೆ ರಕ್ಷಿಸುಕಮಲನಾಭ ವಿಠ್ಠಲನೆ ನಮಿಸುವೆಸವಿನಯದಿ ನಿನ್ನ ಸ್ತುತಿಪ ಭಾಗ್ಯವಕರುಣಿಸೆನಗೆ ಶ್ರೀ ಕರುಣಾನಿಧಿಯೆ 10
--------------
ನಿಡಗುರುಕಿ ಜೀವೂಬಾಯಿ