ಇ. ಗುರುನಮನ
ವಿಷ್ಣುತೀರ್ಥರೆ ಪಾಲಿಸೀ ನಿರಂತರ
ಮಧ್ಯಗೇಹರ ಸುತನೆನಿಸಿರ್ದ ಗುರುವರ ಪ
ಮಧ್ವಶಾಸ್ತ್ರವು ಜೀರ್ಣವಾಗುವ ಸಮಯದಿ
ಬದ್ಧಾದರದಿ ಬಂದುದ್ಧರಿಸುವ ಗುರುವರ 1
ಜಾನಕೀಪತಿಯೊಳು ಲಕ್ಷುಮಣನಂತೆ 2
ವಾಲ್ಮೀಕಿಗಳ ಶಿಷ್ಯಕುಶಲವರಂತೆಯೇ
ಚೆಲ್ವ ವ್ಯಾಸರು ಅನಿರುದ್ಧರು ನಿಮಗೆ 3
ಪಾಜಕ ಕ್ಷೇತ್ರದೊಳ್ಸನ್ಯಾಸಾಶ್ರಮಿಯಾಗಿ
ರಾಜೇಶ ಹಯಮುಖ ಕೃಷ್ಣನರ್ಚಿಸಿದ 4