ನಡಿ ನೀರೇ ಪೋಪಾ ದೇವಿ ಇದ್ದೆಡೆಗೆ|
ಕಡು ಕೋಪವ್ಯಾಕ ಶ್ರೀರಮೆ ಕೂಡ ಎನಗೆ ಪ
ಫುಲ್ಲ ಲೋಚನೆ ಕುಂದರದನೆ ಸುಫಣಿ ವೇಣಿ|
ಮಲ್ಲಿಕಾ ಮಂದಸ್ಮಿತೆ ಚಲ್ಪಕದಪು|
ಬಿಲ್ಲು ಕಾಮನ ಸೋಲಿಪ ಭ್ರೂಲತೆಯುಳ್ಳ|
ಸಲ್ಲಲಿತಾಂಗಿಯಾವಾಗ ಕಂಡೆಪೆನೆ 1
ಹುಣ್ಣಿಮೆ ಚಂದ್ರನ ಮಂಡಲ ಪೊಳೆವಾ|ಪೊಂ|
ಬಣ್ಣವದನೆ ಮಹಾಸಿಂಹನ ಜರೆವಾ|
ಸಣ್ಣ ನಡುವಿನಿಂದೊಪ್ಪುವ ಸಿರಿಯನು|
ಕಣ್ಣಾರೆನೋಡಿ ಮತಾಡುವೆ-ನೇಳೆ 2
ಬರಬಾರದು ದೇವಿಯಗಲಿ ಬಂದರ|
ಸ್ಥಿರವಾಗದು ಅರಫಳಿಗೆನ್ನ ಮನಸು|
ಗುರುಮಹಿಪತಿ ಸುತ ವರದ ದೇವತೆಯಾಗಿ|
ಧರೆಯೊಳು ಮೆರವಾ ಶ್ರೀ ಲಕ್ಷೀಯ ತೋರೆ3