ಕೋಲು ಕೋಲು ಕೋಲು ಕೋಲೇಕೋಲೇ ಕೋಲನ್ನ ಪ
ಆಧಾರವನೆ ಮೆಟ್ಟಿ ಚಕ್ರಾರ ಭೇದಿಸಿನಾದದ ನಾದ ಸುನಾದವ ಕೇಳಿಶೋಧಿಸಿ ಸುಷುಮ್ನ ಮಾರ್ಗ ಮನೆಯ ಪೊಕ್ಕುಮೋದಿ ಬೆಳಗಿನೊಳ ಬೆಳಕು ತಾನಹುದೆ ಹಟ1
ಪ್ರಾಣಾಪಾನವು ಕೂಡಿ ಸರ್ಪವನೆಬ್ಬಿಸಿಜಾಣತನದ ನಾಗ ಸ್ವರವನೂದಿಮಾಣದೆ ಮುತ್ತುಗಳುದುರುವ ಬಯಲಲಿಕೇಣವಿಲ್ಲದೆ ಆಡಿಪುದೆ ಕುಂಡಲಿಯೋಗ 2
ಪೀಕುತ ನಾಲಗೆ ಕ್ಷೀರಾಹಾರದೊಳಿದ್ದುನೂಕುತಂಗಲದೊಳು ರಸನವನುತೇಕ ನಿಲ್ಲಿಸಿ ನಾಲಗೆಯಲಮೃತವನ್ನುಂಡುಮೂಕ ಸಕ್ಕರೆ ತಿಂದ ತೆರದಲಂಬಿಕ ಯೋಗ 3
ಷಣ್ಮುದ್ರೆ ಹಿಡಿದು ಷಡಂಗುಲದಲಿ ಒತ್ತಿಕಣ್ಣ ಅಂತರ್ಯದಿ ದೃಷ್ಟಿಯಿಟ್ಟುಹುಣ್ಣಿಮೆ ಚಂದ್ರನ ಕಳೆಯ ಬೆಳಗಿನೊಳುಥಣ್ಣಗೆ ಥಳ ಥಳಿಸುವುದದು ಹಟ ರಾಜ4
ವಾಯುವ ಸಮನಿಸಿ ರೇಚಕ ಪೂರಕದಿಂದಸಾಯಾಸದಲಿ ಕುಂಭಕವ ನಿಲ್ಲಿಸಿಬಾಯಿ ಮಾಡುವ ಸುನಾದವ ಲಕ್ಷಿಸಿಹಾಯಿ ಎಂದೆನಿಪ ಸುಖಹೊಂದೆ ಲಯಯೋಗ 5
ದೃಷ್ಟಿಯರ್ಧವನೀಗ ಮುಚ್ಚಿ ಸದ್ಗುರುವಾಗಿದೃಷ್ಟಿಸಿ ತನ್ನನೆ ನೋಡುತಿರೆಸುಟ್ಟು ಜೀವತ್ವವ ದೇಹಭಾವವ ಮರೆತುಮುಟ್ಟಿ ಬ್ರಹ್ಮಾದುದೆ ಅದುವೆ ಸದ್ಗುರು ಮಾರ್ಗ6
ಹೊರಗೊಂದು ಆಗದೆ ಒಳಗೊಂದು ಆಗದೆಹೊರಗೆ ಒಳಗೆ ತಾನೆ ತಾನೆಯಾಗಿಗುರು ಚಿದಾನಂದನು ಸಹಜ ತೋರುತ ಸರ್ವಪರಮ ಮಂಗಳ ಸಾಕ್ಷಿಯದು ರಾಜಯೋಗ7