ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಇದ್ದರೇನು ನಿನ್ನ ಸಂಗದ ಸಂಗಡ ಬಾರದೇನು ದಾನ ಧರ್ಮವ ಮಾಡಿದ್ದೊಂದು ಬೆನ್ನಬಿಡದದೇನು ಪ ಆಳು ಕಾಳು ಮಂದಿ ಮನುಷರು ಬಹಳವಿದ್ದರೇನು ಮಾಳಿಗೆ ಕೈಸಾಲೆ ಚಂದ್ರಶಾಲೆಯಿದ್ದರೇನು ನೀಲ ಮುತ್ತು ಕೆಂಪಿನುಂಗುರ ಕೈಯಲಿದ್ದರೇನು ಕಾಲನವರು ಎಳೆಯುತಿರಲು ನಾಲಗೆಗೆ ಬಾರದೇನು 1 ನೆಟ್ಟ ಹತ್ತಿಲು ತೋಟ ತೆಂಗು ಎಷ್ಟುತಾನಿದ್ದರೇನು ಮಹಿಷಿ ಸಾವಿರವಿದ್ದರೇನು ಪಟ್ಟೆ ಶಾಲು ಚಿನ್ನದ ಕುಳದ ಘಟ್ಟಿಯಿದ್ದರೇನು ಕಟ್ಟಿಯಿಟ್ಟ ಗಂಟುನಿನ್ನ ಸಂಗಡ ಬಾರದೇನು 2 ಲಕ್ಷವಿತ್ತ ಜಯಿಸಿ ರಾಜ್ಯ ಪಟ್ಟವಾದರೇನು ಕಟ್ಟಿದಾನೆ ಮಂದಿ ಕುದುರೆ ಹತ್ತಿರಿದ್ದರೇನು ನೆಟ್ಟನೆ ಜೀವಾತ್ಮ ಗೂಡ ಬಿಟ್ಟು ಪೋಗದೇನು ಕುಟ್ಟಿ ಕೊಂಡಳುವುದರೆ ಮಂದಿ ಎಷ್ಟು ಇದ್ದರೇನು 3 ಮಕ್ಕಳು ಮೊಮ್ಮಕ್ಕಳು ಹೆಮ್ಮಕ್ಕಳಿದ್ದರೇನು ಚಿಕ್ಕ ಪ್ರಾಯದ ಸತಿಯು ಸೊಸೆದಿಕ್ಕಳಿದ್ದರೇನು ಲೆಕ್ಕವಿಲ್ಲದ ದ್ರವ್ಯ ನಿನಗೆ ಸಿಕ್ಕುಯಿದ್ದರೇನು ಡೊಕ್ಕೆ ಬೀಳೆ ಹೆಣವ ಬೆಂಕಿಗಿಕ್ಕಿ ಬರುವರೋ 4 ಹೀಗೆ ಎಂದು ನೀನು ನಿನ್ನ ತಿಳಿದು ಕೊಳ್ಳಬೇಕೋ ಆಗೋದ್ಹೋಗೋದೆಲ್ಲ ಈಶ್ವರಾಜÉ್ಞ ಎನ್ನ ಬೇಕೋ ವೈರಿ ಕೋಣೆ ಲಕ್ಷ್ಮೀರಮಣನ ಭಜಿಸಬೇಕೋ ಯೋಗ ಮಾರ್ಗದಿಂದ ನೀನು ಮುಕ್ತಿ ಪಡೆಯ ಬೇಕೋ 5
--------------
ಕವಿ ಪರಮದೇವದಾಸರು
ಟೀಕಾರ್ಯ - ಟೀಕಾರ್ಯ ಪ ಕಾಕು ಮತಗಳ ವಿ | ವೇಕದಿ ಖಂಡನ ಅ.ಪ. ಎತ್ತಾಗಿರುತಿರೆ | ಶಾಸ್ತ್ರಬೋಧ ಶ್ರುತಉತ್ತಮ ಸಂಸ್ಕøತಿ | ಪೊತ್ತು ಜನಿಸಿದೆ 1 ಲಕ್ಷವಿತ್ತನೀ | ಲಕ್ಷಿಸದಲೆ ಮುನಿತ್ರ್ಯಕ್ಷನಂಶರಿಂ | ಭಿಕ್ಷುಕನಾದವ 2 ಮಧ್ವಶಾಸ್ತ್ರ ದು | ಗ್ದಾಬ್ಧಿ ಮಥಿಸಿ ಬಹುಶುದ್ಧ ಸುಧೆಯ ನೀ | ಮೆದ್ದು ಉಣಿಸಿದೆ 3 ಮೌನಿ ಮಧ್ವಕೃತ | ಮಾನ ಲಕ್ಷಣಕೆಗಾನ ಮಾಡ್ದೆ ಪ್ರ | ಮಾಣ ಪದ್ಧತಿಯ 4 ಪದ್ಧತಿಯಿಂದಲಿ | ವಿದ್ಯಾರಣ್ಯರಸದ್ದಡಗಿಸಿದೆಯೊ | ಬುದ್ಧಿ ಚಾತುರ್ಯ 5 ಯೋಗಿ ವರೇಣ್ಯನೆಕಾಗಿನಿ ತೀರಗ ಭಾಗವತರ ಪ್ರಿಯ 6 ಮಾವಿನೋದಿ ಗುರು | ಗೋವಿಂದ ವಿಠಲನಭಾವ ಕುಸಮದಿಂ | ದೋವಿ ಪೂಜಿಸುವ 7
--------------
ಗುರುಗೋವಿಂದವಿಠಲರು