ಮನವೆ ಸದಾ ಚಿಂತಿಸುವೆ ವನಜನಾಭನ ನಂಬದೆ ಪ
ಕೊನೆಗಾಣುವದೇನೊ ಫಲವೇನೊ ಅ.ಪ
ಮದಮತ್ಸರ ಕಾಮಕ್ರೋಧ ಲೋ-
ಭದಿ ಮಮತಾಸ್ಪದವಾಗಿ ಮರತೋಗಿ 1
ಗುರುಹಿರಿಯರು ನೋಡಿ ವಂದಿಸದೆ ನೀ
ಮರುಳಾಟಗಳಾಡಿ
ಪರರನಪಹಾಸಿಸಿ ಪಾಪಿ ಇವನೆನಿಸಿ
ನರಕಕ್ಕೆ ಗುರಿಯಾಗುವೆ ವೋ ಚಪಲ ಮನವೇ 2
ವೇದಮಾರ್ಗವ ಬಿಟ್ಟು ಯಾವಾಗಲು ದು-
ರ್ವಾದಗಳನು ಕೊಟ್ಟು
ಆದಿಯನುತಲಿ ಅನಾದಿಯನುತಲಿ
ಮುದಗೂಡಿ ಅತಿಭಾಷೆಗಳಾಡಿ 3
ತತ್ವ ತಿಳಿಯಬೇಕು ಜ್ಞಾನವೆಂಬೋ ಸಂ-
ಪತ್ತಿನೊಳಿರು ಸಾಕು
ನಿತ್ಯಾನಿತ್ಯವಿವೇಕ ಶ್ಯೂನವಾಗಿ
ನಿತ್ಯ ಕೆಡಬೇಡೆಲವೋ ಚಪಲಾ 4
ತ್ರಿವಿಧ ಜೀ-
ವರೊಳಿರುವನು ಮುಕುಂದ
ಗುರುರಾಮವಿಠಲ ನಿಜ ಶರಣರಿಗೆಲ್ಲ
ಪರಮಪದವಿ ಈವಾ ದೇವದೇವ 5