(ಊ) ಕ್ಷೇತ್ರವರ್ಣನೆ
ಹುಲಿಗನಮೊರಡಿ
ಶೇಷಾದ್ರಿಯನು ನೋಡಿರೋ ಸೇವಕಪರಿ
ತೋಷಾದ್ರಿಯನು ಕಾಣಿರೊ ಪ
ಶೇಷಾದ್ರಿಯನು ನೋಡಿ ದೋಷಾದ್ರಿ ಹುಡಿಮಾಡಿ
ಶೇಷಾದ್ರೀಶನ ಪರಿತೋಷದಿಂ ಪಾಡಿ ಅ.ಪ
ಚಿನ್ನದಗಿರಿಯಂದದಿ ರಂಜಿಸುವುದು
ಬಣ್ಣದೊಳತಿ ದೂರದಿ
ಸಣ್ಣದಾಸರು ಗಿರಿ ರನ್ನಪೋಲು
ವರ್ಣಹ ಶಯನನ ಕಣ್ಣಲಿ ಕಾಣಿಪ 1
ಬಗೆ ಬಗೆ ವೃಕ್ಷಗಳು ಬನಂಗಳು
ಬಗೆ ಬಗೆ ಪಕ್ಷಿಗಳು
ಬಗೆ ಬಗೆ ಮೃಗಗಳು ಸೊಗಸಿನೊಳಿರೆ ಬಹು
ಬಗೆ ಬಗೆ ಧಾತುಗಳಿಗೆ ನೆಲೆಯಾಗಿಹ 2
ಯುಗಗಳ ಸಂಖ್ಯೆಯೊಳು ನಾಮಂಗಳು
ಯಗಳದ್ವಯ ಮೆನಲು
ಯುಗಮೊದಲೊಳಗೆ ಪನ್ನಗಗಿರಿಯನೆ ತ್ತೇತಾ
ಯುಗದಲ್ಲಿ ಹೇಮದ ನಗವೆಂಬ ಪೆಸರಿನ 3
ದ್ವಾಪರಯುಗದೊಳಗೆ ವೆಂಕಟನಾಮ
ವೀ ಪರ್ವತತಕ್ಕೊದಗೆ
ಶ್ರೀಪುಲಗಿರಿಮುಖ ರೂಪನೀಯುಗದೊಳು
ಶ್ರೀಪತಿಯುತ್ತ ನಿರೂಪದೊಳೊಪ್ಪುವ 4
ದೂರದಿ ಶೋಭಿಸುವ ದುರ್ಜನರಿಗೆ
ದೂರವೆ ಮಂದಿರವು
ಚಾರುವಿಮಾನ ಪ್ರಾಕಾರವ ತೋರಿಪ
ವಾರಿಜಾಸನ ಪಿತ ವರದ ವಿಠಲನಿಹ 5