ನಕ್ಷತ್ರದಾರತಿ ಬೆಳಗೀರೇ ಜಗ
ದ್ರಕ್ಷ ಕೃಪಾನಿಧೇ ಪಕ್ಷಿವಾಹನಗೆ ಪ
ಪಕ್ಷಿಯು ತಾನಾಗಿ ಪ್ರಜ್ವಲಿಪಾ
ಯಕ್ಷರಕ್ಷಕ ಸರ್ವಶಿಕ್ಷಾ ದಯಾಕರ
ಲಕ್ಷ್ಮೀಪತಿಯಾದ ಮೋಕ್ಷದಾಯಕಗೇ 1
ಆದಿರೂಪನಿಗೆ ಆಧ್ಯಾತ್ಮನಾದವನಿಗೆ
ಸಾಧುಶಿಖರನಾದ ಸರ್ವಸ್ವತಂತ್ರಗೆ
ನಾದಬಿಂದು ಕಳೆಯೊಳಾಡುತಿರುವವಗೆ 2
ಅಖಿಳಾಂಡಕೋಟಿ ಬ್ರಹ್ಮಾಂಡನಾಯಕನಿಗೆ
ಪ್ರಕಟಿತಮಾಗಿಹ ಪರತತ್ವಗೆ
ಚಿಕಟಾಯಿಸಿದ ನಮ್ಮ ಗುರುವು ತುಲಸಿರಾಯಾ
ಸಖನಾದ ಶಿವಗೆ ಶಂಕರಗೆ ಶ್ರೀಹರಿಗೆ 3