ಮೃಡ ಶಂಭೋ | ಪ
ಅದ್ರಿಧರ ಪ್ರಿಯ ಅದ್ರಿ ಕೃತಾಲಯ |
ಅದ್ರಿಜಾಮಾತಾದ್ರಿ ರಿಪುನುತ |
ಪತಿ ಪಾಪಾದ್ರಿ ಕುಲಿಶಕನ |
ಕಾದ್ರಿಶರಾಸನ ಮುದ್ರಿತ ಪಾಣೇ1
ಉನ್ನತದಿಂದಲಿ ಮನ್ಮಥ ಬರಲುದ |
ಹನ್ಮಾಡಿದ ಷಣ್ಮುಖ ಜನಕನೆ |
ಸನ್ನುತ ಲೀಲಾ |
ಜನ್ಮರಹಿತ ಘನ ಚಿನ್ಮಯ ರೂಪಾ || 2
ಬರಿಸಿದೆ ಗಂಗೆಯ ನಿರಿಸಿದೆ ಜಡೆಯೊಳು |
ಧರಿಸಿದೆ ಚಂದ್ರನ ಮೆರೆಸಿದೆ ಭಕ್ತರ |
ಗುರುಮಹೀಪತಿ ಯಂಕುರಿಸಿದ ಬಾಲನ |
ಸಿರಸದಲಿಡು ನಿಜ ಪರಸದ ಕೈಯಾ | 3