ತುಳಸಿ ಮಧ್ಯದಿ ಇರುವ ಕೃಷ್ಣನಬಳಸಿ ನೋಡುವ ಬನ್ನಿರೆ ಪ
ಗೊಲ್ಲ ಸತಿಯರ ಗಲ್ಲ ಪಿಡಿದುಎಲ್ಲ ನಟನೆಯ ತೋರುವಫುಲ್ಲ ನಾಭನಮೆಲ್ಲ ಮೆಲ್ಲನೆಎಲ್ಲ ಹೆಂಗಳು ನೋಡಿರೆ 1
ಕಾಮಿ ಜನರಿಗೆ ಕಾಮಿತಾರ್ಥವಪ್ರೇಮದಿಂದಲಿ ಕೊಡುತಿಹಕಾಮನೈಯನ ಚರಣ ಕಮಲವನಂಬಿ ಬದುಕುವ ಬನ್ನಿರೆ2
ಅಂಗರಾಗ ಶ್ರೀರಂಗ ಮಂಗಳಸಿಂಗರದಿ ತಾ ನಿಂತಿಹಮಂಗಳಾಂಗನ ಮಂಗಳಾರತಿಎಲ್ಲ ಹೆಂಗಳು ನೋಡಿರೆ 3
ಒಂದು ಕೈಯಲಿ ಗಂಧಪುಷ್ಪ ಮ-ತ್ತೊಂದು ಕೈಯಲಿ ರಂಗನುಮಂದಹಾಸದಿ ಇಂದುಮುಖಿಯರಿ-ಗ್ಹೊಂದಿಸುವನತಿ ಚಂದದಿ 4
ಶುಕ್ರವಾರದಿ ಪೂಜೆಗೊಂಬುವಚಕ್ರಧರ ಶ್ರೀಕೃಷ್ಣನು ನಕ್ರಹರ ತ್ರಿವಿಕ್ರಮನು ಮನ-ವಾಕ್ರಮಿಸಿ ಸುಖ ಕೊಡುತಿಹ 5