ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಟ್ಟು ಇಕ್ಕದವರ ಮನೆಯ ಪ ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವಅಟ್ಟರೇನು ಅಡದಿದ್ದರೇನು ಅ ನಿಚ್ಚಣಿಗೆ ದೋಟಿಗೆ ನಿಲುಕದ ಹಣ್ಣಿನ ವೃಕ್ಷನಿಚ್ಚ ನಿಚ್ಚವು ಬಾಗಿ ಫಲವಾದರೇನುಔಚಿತ್ಯ ವಿದ್ಯೆಯನರಿಯದ ದೊರೆ ತಾನುಮೆಚ್ಚಿದರೇನು ಮೆಚ್ಚದಿದ್ದರೇನು 1 ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದಏರಿ ಇದ್ದರೇನು ಪರ್ವತವಿದ್ದರೇನುಶರೀರ ಸೌಖ್ಯ ಶಮನಕ್ಕಾಗದ ಹೆಣ್ಣುಊರಲಿದ್ದರೇನು ತೌರೂರಲಿದ್ದರೇನು 2 ಬಣಗು ದೈವಗಳಿಗೆಶರಣೆಂದರೇನು ಶರಣೆನದಿದ್ದರೇನು 3
--------------
ಕನಕದಾಸ
ಇದಕೊ ಕಾಶಿಯನು ಮನವೇ ಬೆದಕುಗೊಳ್ಳಲು ಬೇಡ ತೋರುವೆನು ಪ ಬಲ್ಲವನಾದರೆ ಇಲ್ಲಿಯೆ ಕಾಶಿ ಕಲ್ಲೆದೆಯಾದವನಲ್ಲವೆ ದೋಷಿ ಎಲ್ಲವ ತಿಳುಹುವೆ ಚಲ್ವ ಸಂತೋಷಿ ಸೊಲ್ಲ ಲಾಲಿಸಿ ಕೇಳು ಪೇಳ್ವೆ ನಿರ್ದೋಷಿ 1 ಕಾಶಿಯ ದರುಶನವಿಲ್ಲದ ಜನರು ವಿ- ಶೇಷವಾಗಿಯೆ ಇಲ್ಲಿ ನಡೆಕೊಂಬುತಿಹರು ದೂಷಣ ಮಾಡದೆ ಪೋಷಿಸುವವರು ಕಾಶಿಗಿಮ್ಮಡಿಯಾಗಿ ಲೇಸ ಪಡೆಯುವರು 2 ವೇದವನೋದಿದ ವಿಪ್ರನೆ ಕಾಶಿ ವಾದಗಳಿಲ್ಲದ ಸೋದರನೆ ಕಾಶಿ ಆ ಧನ ಕೈಯೊಳು ಇದ್ದರೆ ಕಾಶಿ ಮಾಧವ ಧ್ಯಾನವು ಮನದೊಳು ಕಾಶಿ 3 ಅವ್ವೆ ತಂದೆಯ ಸೇವೆ ಮಾಳ್ಪುದೆ ಕಾಶಿ ದೇವರ ಪೂಜೆಯ ನೋಳ್ಪುದೆ ಕಾಶಿ ಜೀವರಕ್ಷಣ್ಯವ ಮಾಳ್ಪುದೆ ಕಾಶಿ ಭಾವಶುದ್ಧತ್ವದಿ ಇಪ್ಪುದೆ ಕಾಶಿ 4 ಗುರುಗಳಿಗೆರಗುವ ಪರಿಯೊಂದು ಕಾಶಿ ಹಿರಿಯರ ಆಜ್ಞೆಯೊಳಿರುವುದು ಕಾಶಿ ಪರವುಪಕಾರವು ಸ್ಥಿರವಾದ ಕಾಶಿ ಕರೆದು ಮೃಷ್ಟಾನ್ನವನೆರೆವುದು ಕಾಶಿ 5 ಅರಳಿಯ ವೃಕ್ಷವ ನೆಟ್ಟರೆ ಕಾಶಿ ಕೆರೆ ಬಾವಿ ಕಟ್ಟಲು ಇಷ್ಟದ ಕಾಶಿ ಅರವಟ್ಟಿ ನೀರಿರಿಸಲು ದೃಷ್ಟ ಕಾಶಿ ಸಿರಿಲಕ್ಷ್ಮಿಯರಸನ ಕರೆವುದು ಕಾಶಿ 6 ದುಷ್ಟರ ಸಂಗವ ಬಿಡುವುದೆ ಕಾಶಿ ಕಷ್ಟದ ಮಾರ್ಗವ ತೊರೆವುದು ಕಾಶಿ ಶಿಷ್ಟರ ಸೇರುವುದು ಇಷ್ಟದ ಕಾಶಿ ಬೆಟ್ಟದ ಒಡೆಯನ ನೆನೆವುದೆ ಕಾಶಿ 7 ಏಕಾದಶಿ ಉಪವಾಸವೆ ಕಾಶಿ ಆಕಳ ದಾನವ ಮಾಳ್ಪುದೆ ಕಾಶಿ ಬೇಕಾದುದಿದ್ದರೆ ಮನೆಯೆಲ್ಲ ಕಾಶಿ ಕಾಕು ಸೇವೆಯಿಲ್ಲದ ಮನುಜನೆ ಕಾಶಿ 8 ಉದಯದಿ ಸ್ನಾನವ ಮಾಳ್ಪುದೆ ಕಾಶಿ ಪದುಮನಾಭನ ಧ್ಯಾನ ಮೃದುವಾದ ಕಾಶಿ ಕದನವಿಲ್ಲದ ಊರ ನೋಡಲು ಕಾಶಿ ಉದರವು ತುಂಬಲು ಬಡವಗೆ ಕಾಶಿ 9 ರುದ್ರ ದೇವನ ಪೂಜೆ ಇದ್ದಲ್ಲಿ ಕಾಶಿ ವಿಧ್ಯುಕ್ತ ಮಾರ್ಗದಿ ನಡೆವುದು ಕಾಶಿ ಬದ್ಧವಾಗೈವರ ಕಟ್ಟಲು ಕಾಶಿ ಶುದ್ಧವಾದ ಹೆಂಡತಿ ಮುದ್ದಿನ ಕಾಶಿ 10 ಸನ್ಯಾಸ ಮಾರ್ಗವು ಚೆನ್ನಾದ ಕಾಶಿ ಅನ್ಯಾಯವಿಲ್ಲದ ಅರಸನೆ ಕಾಶಿ ಕನ್ಯಾದಾನವು ಮುನ್ನಿನ ಕಾಶಿ ಮನ್ನಿಸಿಕೊಂಡರೆ ತನ್ನಲ್ಲೆ ಕಾಶಿ 11 ಅಧ್ಯಾತ್ಮ ವಿದ್ಯೆಯ ಹೊದ್ದಲು ಕಾಶಿ ಬದ್ಧ ನಡೆನುಡಿ ಇದ್ದರೆ ಕಾಶಿ ಮಧ್ವರಾಯನು ಕುಳಿತಿದ್ದಲ್ಲಿ ಕಾಶಿ ಪದುಮನಾಭನ ನೆನವಿದ್ದರೆ ಕಾಶಿ 12 ದಾನದೊಳಗೆ ಸಮಾಧಾನವೆ ಕಾಶಿ ಮಾನದೊಳಗೆ ಅಭಿಮಾನವೆ ಕಾಶಿ ಸ್ನಾನದೊಳಗೆ ಭಕ್ತಿ ಸ್ನಾನವೆ ಕಾಶಿ ಜ್ಞಾನದೊಳಗೆ ಶುದ್ಧಜ್ಞಾನವೆ ಕಾಶಿ 13 ದೇವರೊಳಗೆ ಸಾಲಿಗ್ರಾಮವೆ ಕಾಶಿ ಜೀವರೊಳಗೆ ಗೋವುಚಯವೆಲ್ಲ ಕಾಶಿ ಹೂವಿನೊಳಗೆ ಬಿಲ್ವಪತ್ರಿಯೆ ಕಾಶಿ 14 ಹಲವು ಮಾತುಗಳೇನೀಪರಿ ಕಾಶಿ ಛಲ ಭಕ್ತಿಯಿದ್ದರೆ ಜಲವೆಲ್ಲ ಕಾಶಿ ಒಲವುಳ್ಳ ವರಾಹತಿಮ್ಮಪ್ಪನೆ ಕಾಶಿ ಕುಲವೃಕ್ಷವೆಂಬುದು ಫಲವಾದ ಕಾಶಿ 15
--------------
ವರಹತಿಮ್ಮಪ್ಪ
ಪದುಮಾವತಿ ಕಾಂತ ಪ ಬ್ರಹ್ಮಾದ್ಯರ ತಾತ ಅ.ಪ. ನಿನ್ನ ದರ್ಶನವು ಸಂಸಾರ ಸಮೇತ | ಬೇಡನೆ ಜನವ್ರಾತ ಮನ್ನಿಸಲಿಲ್ಲವೊ ನಾನವರ ಮಾತ | ಪಾವನ ಶುಭಚರಿತ ನಾ ಮಾಡಿದೆ ಶಪಥ ಸದ್ಗುಣ ಗಣಭರಿತ 1 ದ್ವಿಜರಾಜ ವರೂಥ ಇದು ಏನಧಿಕವೊ ನಿನ್ನಸಮದಾತ | ರಿಲ್ಲವೊ ಶುಭಗಾಥ ಭವ ಶರಧಿಗೆ ಪೋತ ನಾಗಯ್ಯಾತ್ವರಿತ 2 ವತ್ಸರ ಪ್ರತಿಪದ ಬುಧಸಹಿತ ಊಧ್ರ್ವಪುಂಡ್ರವಿಡುತ ಏರಿದೆ ಪರುವತ ಸಿರಿ ನಿನ ಕಂಡೆವೊ ತಾತ 3 ಸುಕೃತ | ಈ ದಿನ ಒದಗುತ ಫಲವಾದುದಕೆ ನಾವೆಲ್ಲ ಬಹುಪ್ರೀತ | ರಾದೆವು ಶ್ರೀಕಾಂತ ಉತ್ಸವ ನೋಡುತ ಒಲಿದು ನಿನ್ನ ತೀರ್ಥಪ್ರಸಾದವ ಕೊಳುತ | ನಾವಿದ್ದೆವೊ ಸತತ 4 ತುಂಗ ವಿಕ್ರಮನೆ ರಣದೊಳು ನಿರ್ಭೀತ | ಬಲರಿಪು ಸಹಜಾತ ಗಾಂಡೀವಿಯ ಸೂತ ಗಂಗಾಜನಕನೆ ತ್ರಿಗುಣಾತೀತ | ಭುವನದಿ ವಿಖ್ಯಾತ ರಂಗೇಶವಿಠಲನೆ ನಾ ನಿನ್ನ ದೂತ | ಯದುಕುಲ ಸಂಭೂತ 5
--------------
ರಂಗೇಶವಿಠಲದಾಸರು