ಭಾವವಿಲ್ಲದ ಬಯಲ ಭಜನೆಗೆ |
ದೇವನೆಂದಿಗು ವಲಿಯನು |
ಈ ವಿಷಯ ಫಲದಾಸೆ ಮನದೊಳು |
ಭಾವಿಸುತ ವೃತ ತಪಗಳ್ಯಾತಕೆ ಪ
ಮೀನು ನೀರೊಳಗಿದ್ದರೇನೈ |
ಧ್ಯಾನವನು ಬಕ ಮಾಡಲು |
ಮೌನದಲಿ ಕೋಗಿಲೆಯು ಇದ್ದರ |
ದೇನು ವನವಾಶ್ರಯಿಸಿ ಮರ್ಕಟ 1
ಉರಗ ಪವನಾಹಾರ ಭಸ್ಮವ |
ಖರ ವಿಲೇಪನ ಮಾಡಲು |
ತರು ದಿಗಂಬರವಾಗಿ ಮಂಡುಕ |
ಕೊರಳೊಳಕ್ಷರ ಜಪಿಸಲೇನದು 2
ಮೂಷಕ ಗುಹ್ಯಲಿರಲೇ |
ನರಿತು ಗಿಳಿ ಮಾತಾಡಲು |
ಗುರು ಮಹಿಪತಿ ಬೋಧವಾಲಿಸಿ |
ಹರಿಯ ಭಾವದಿ ನಂಬಿ ಸುಖಿಸಿರೋ 3