ಪಾಲಿಸೆನ್ನ ಚನ್ನ ಕೇಶವಾ ನಿನ್ನ
ಬಾಲನೆಂದೆಣೆಸೋ ಮಾಧವಾ ಪ
ಲೋಲ ಲೋಚನ ತಂದೆ
ಶೀಲ ನಂಬಿದೆ ಬಂದೆ ಅ.ಪ.
ದೂರ್ವಾಪುರ ನೆಲೆವಾಸಿಯೇ ತಂದೆ
ಸರ್ವಾಭೀಷ್ಟ ಫಲದಾತನೇ
ಪರ್ವಾ ಸಪ್ತದಿ ನಿನ್ನ ಭಜಿಸೇ ಸ್ಮರಿಸುವೆನು 1
ನಂದನಂದನ ಗೋವಿಂದನೇ ತಂದೆ
ಬಂಧವ ನೀಗುವ ಶಕ್ತಿಯ
ಮಂದರಧರದಯ ತೋರೆಂದು ನೆನೆಯುವೆ 2
ಭಕ್ತರ ಪೊರೆ ನೀ ದಾತನೇ ತಂದೆ
ಮುಕ್ತಿ ಸ್ವಾತಂತ್ರ್ಯವ ನೀಡೆಲೋ
ಶಕ್ತಿ ಸ್ವರಾಜ್ಯಕ್ಕೆ ಮಾತೃ ಸೇವೆಗೆ 3